1
|
ಆಗ ಶೂಹ್ಯನಾದ ಬಿಲ್ದದನು ಉತ್ತರ ಕೊಟ್ಟು ಹೇಳಿದ್ದೇನಂದರೆ-- |
2
|
ಎಲ್ಲಿಯ ವರೆಗೆ ಮಾತುಗಳನ್ನು ಮುಂದುವರಿಸುವಿರಿ? ಗ್ರಹಿಸಿ ಕೊಳ್ಳಿರಿ, ಆಮೇಲೆ ಮಾತನಾಡೋಣ. |
3
|
ಯಾಕೆ ನಾವು ಪಶುವಿನ ಹಾಗೆ ಎಣಿಸಲ್ಪಟ್ಟೆವು? ಯಾಕೆ ನಿಮ್ಮ ಕಣ್ಣುಗಳಿಗೆ ತುಚ್ಛವಾಗಿದ್ದೇವೆ? |
4
|
ಕೋಪದಿಂದ ತನ್ನನ್ನು ತಾನೇ ಹರಿಯುವವನೇ, ನಿನ್ನ ನಿಮಿತ್ತ ಭೂಮಿ ಬಿಡಲ್ಪಡಬೇಕೋ? ಬಂಡೆ ತನ್ನ ಸ್ಥಳದಿಂದ ತೊಲಗ ಬೇಕೋ? |
5
|
ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು. |
6
|
ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು |
7
|
ಅವನ ಬಲದ ಹೆಜ್ಜೆಗಳು ಇಕ್ಕಟ್ಟಾಗುವವು; ಅವನ ಆಲೋಚನೆಯು ಅವನನ್ನು ದೊಬ್ಬುವದು. |
8
|
ತನ್ನ ಕಾಲುಗಳಿಂದ ಬಲೆಯಲ್ಲಿ ಸಿಕ್ಕಿಕೊಂಡನು; ಉರ್ಲಿನ ಮೇಲೆ ನಡೆದುಕೊಳ್ಳುತ್ತಾನೆ. |
9
|
ನೇಣು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವದು; ಕಳ್ಳನು ಅವನ ಮೇಲೆ ಬಲಗೊಳ್ಳುವನು. |
10
|
ಅವನ ಪಾಶವು ಭೂಮಿ ಯಲ್ಲಿಯೂ ಅವನ ಕೊಂಡಿಯು ಹಾದಿಯಲ್ಲಿಯೂ ಇಡಲ್ಪಟ್ಟಿದೆ. |
11
|
ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ ಅವನ ಕಾಲುಗಳನ್ನು ಎಬ್ಬಿಸುತ್ತವೆ. |
12
|
ಅವನ ಬಲವು ಕುಸಿಯುವುದು, ನಾಶನವು ಅವನ ಬಳಿಯಲ್ಲಿ ಸಿದ್ಧವಾಗಿರುವದು. |
13
|
ಅವನ ಚರ್ಮದ ಬಲವನ್ನು ತಿನ್ನುವನು; ಮರಣದ ಚೊಚ್ಟಲ ಮಗನು ಅವನ ಬಲವನ್ನು ತಿನ್ನುವನು. |
14
|
ಅವನ ಭರವಸವು ಅವನ ಗುಡಾರದೊಳಗಿಂದ ಕೀಳಲ್ಪಡುವುದು; ಅದು ಅವ ನನ್ನು ದಿಗಿಲುಗಳ ಅರಸನ ಬಳಿಗೆ ನಡಿಸುವದು. |
15
|
ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು. |
16
|
ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು; |
17
|
ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು. |
18
|
ಬೆಳಕಿನಿಂದ ಅವನನ್ನು ಕತ್ತ ಲೆಗೆ ದೊಬ್ಬುವರು; ಲೋಕದಿಂದ ಓಡಿಸುವರು. |
19
|
ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ. |
20
|
ಅವನ ತರುವಾಯ ಬರುವವರು ಆಶ್ಚರ್ಯಪಡುವರು; ಮುಂದೆ ಹೋದವರನ್ನು ದಿಗಿಲು ಹಿಡಿಯುವದು. |
21
|
ನಿಶ್ಚಯವಾಗಿ ದುಷ್ಟರ ಮನೆಗಳು ಇಂಥವುಗಳೇ; ದೇವರನ್ನು ತಿಳಿಯದವನ ಸ್ಥಳವು ಇದೇ. |
Job 18:10 Kannada Language Bible Words basic statistical display
COMING SOON ...