1
|
ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು. |
2
|
ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ. |
3
|
ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು. |
4
|
ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ. |
5
|
ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು. |
6
|
ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ. |
7
|
ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ? |
8
|
ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ? |
9
|
ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ? |
10
|
ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು. |
11
|
ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ? |
12
|
ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ. |
13
|
ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ. |
14
|
ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು? |
15
|
ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು. |
16
|
ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ. |
17
|
ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ. |
18
|
ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ. |
19
|
ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು. |
20
|
ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ. |
21
|
ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ. |
22
|
ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು. |
23
|
ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು. |
24
|
ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ? |
25
|
ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ? |
26
|
ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ. |
27
|
ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ. |
28
|
ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು. |
Job 13:19 Kannada Language Bible Words basic statistical display
COMING SOON ...