ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ--
ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು.
ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ.
ಆಕಾಶ ಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ; ಗಗನಗಳು ನೀತಿಯನ್ನು ಸುರಿಸಲಿ; ಭೂಮಿಯು ತೆರೆದು ರಕ್ಷಣೆ ಯನ್ನು ತರಲಿ, ನೀತಿಯು ಅದರೊಂದಿಗೆ ಮೊಳೆ ಯಲಿ. ಇದನ್ನು ಸೃಷ್ಟಿಸಿದ ಕರ್ತನು ನಾನೇ.
ತನ್ನನ್ನು ರೂಪಿಸಿದವನ ಸಂಗಡ ವಾದ ಮಾಡುವವ ನಿಗೆ ಅಯ್ಯೋ! ಬೋಕಿಯು ಭೂಮಿಯ ಬೋಕಿಯ ಸಂಗಡವಾದ ಮಾಡಲಿ; ಮಣ್ಣು ರೂಪಿಸುವವನಿಗೆ --ನೀನು ಏನು ಮಾಡುತ್ತೀ ಎಂದೂ ನಿನ್ನ ಕೆಲಸವು --ಅವನಿಗೆ ಕೈಯಿಲ್ಲ ಅಂದೀತೇ?
ನಾನೇ ಅವನನ್ನು ನೀತಿಯಲ್ಲಿ ಎಬ್ಬಿಸಿ ದ್ದೇನೆ; ಅವನ ಎಲ್ಲಾ ಮಾರ್ಗಗಳನ್ನು ಸರಾಗ ಮಾಡು ತ್ತೇನೆ; ಅವನು ನನ್ನ ಪಟ್ಟಣವನ್ನು ಕಟ್ಟಿ ಕ್ರಯವ ನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ನನ್ನ ಸೆರೆಯವರನ್ನು ಕಳುಹಿಸಿಬಿಡುವನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಕರ್ತನು ಹೇಳುವದೇನಂದರೆ--ಐಗುಪ್ತದ ಆದಾ ಯವೂ ಇಥಿಯೋಪ್ಯದ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವ ರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊ ಬ್ಬನು ಇಲ್ಲ, ಬೇರೆ ದೇವರು ಇಲ್ಲವೇ ಇಲ್ಲ.
ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.
ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ; ವ್ಯರ್ಥವಾಗಿ ನನ್ನನ್ನು ಹುಡುಕಿರಿ ಎಂದು ಯಾಕೋಬನ ವಂಶ ದವರಿಗೆ ನಾನು ಹೇಳಲಿಲ್ಲ, ಕರ್ತನಾದ ನಾನೇ ನೀತಿ ಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ.
ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು.