Indian Language Bible Word Collections
Habakkuk 1:10
Habakkuk Chapters
Habakkuk 1 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Habakkuk Chapters
Habakkuk 1 Verses
1
ಪ್ರವಾದಿಯಾದ ಹಬಕ್ಕೂಕನು ನೋಡಿದ ದೈವೋಕ್ತಿ.
2
ಓ ಕರ್ತನೇ, ನಾನು ನಿನಗೆ ಮೊರೆಯಿಟ್ಟರೂ ಎಷ್ಟರ ವರೆಗೆ ನೀನು ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನಗೆ ಕೂಗುತ್ತೇನೆ; ಆದರೆ ನೀನು ರಕ್ಷಿಸುವದಿಲ್ಲ.
3
ಯಾಕೆ ನನಗೆ ಅಪರಾಧವನ್ನು ತೋರಿಸಿ ಕಷ್ಟವನ್ನು ನೋಡಮಾಡುತ್ತೀ? ಸೂರೆಯೂ ಹಿಂಸೆಯೂ ನನ್ನ ಮುಂದೆ ಅವೆ; ಜಗಳವನ್ನೂ ತರ್ಕವನ್ನೂ ಎಬ್ಬಿಸುವವರು ಇದ್ದಾರೆ.
4
ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
5
ಅನ್ಯಜನಾಂಗಗಳಲ್ಲಿ ನೋಡಿ ಲಕ್ಷ್ಯಗೊಟ್ಟು ಬಹಳ ವಾಗಿ ಆಶ್ಚರ್ಯಪಡಿರಿ; ತಿಳಿಸಿದರೂ ನೀವು ನಂಬದಂಥ ಕ್ರಿಯೆಯನ್ನು ನಿಮ್ಮ ದಿವಸಗಳಲ್ಲಿ ನಾನು ಮಾಡುತ್ತೇನೆ.
6
ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು.
7
ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ.
8
ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
9
ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು.
10
ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು.
11
ಆಗ ಮನಸ್ಸನ್ನು ಬದಲು ಮಾಡಿ, ಹಾದುಹೋಗಿ ಅಪರಾಧಮಾಡುವರು; ಅವರ ದೇವರಿಂದಾಗುವ ಶಕ್ತಿ ಇದೆ ಅನ್ನುವರು.
12
ನನ್ನ ದೇವರಾದ ಕರ್ತನೇ, ನನ್ನ ಪರಿಶುದ್ಧನೇ, ನೀನು ಅನಾದಿಯಿಂದ ಇರುತ್ತೀಯಲ್ಲವೋ? ನಾವು ಸಾಯುವದಿಲ್ಲ. ಓ ಕರ್ತನೇ, ನ್ಯಾಯತೀರ್ಪಿಗೆ ಅವ ರನ್ನು ನೇಮಿಸಿದ್ದೀ; ಓ ಪರಾಕ್ರಮಿಯಾದ ದೇವರೇ, ಶಿಕ್ಷೆಗೆ ಅವರನ್ನು ಸ್ಥಾಪಿಸಿದ್ದೀ.
13
ನೀನು ಕೆಟ್ಟದ್ದನ್ನು ನೋಡಕೂಡದ ಹಾಗೆ ಶುದ್ಧ ಕಣ್ಣುಗಳುಳ್ಳವನು; ನೀನು ಅನ್ಯಾಯವನ್ನು ದೃಷ್ಟಿಸಲಾರಿ; ವಂಚಿಸುವವರನ್ನು ಯಾಕೆ ದೃಷ್ಟಿಸುತ್ತೀ? ದುಷ್ಟನು ತನಗಿಂತ ನೀತಿವಂತ ನನ್ನು ನುಂಗಿಬಿಡುವ ವೇಳೆಯಲ್ಲಿ ಯಾಕೆ ಸುಮ್ಮನಿ ರುತ್ತೀ?
14
ಮನುಷ್ಯರನ್ನು ಸಮುದ್ರದ ವಿಾನುಗ ಳಂತೆಯೂ ಆಳುವವನಿಲ್ಲದ ಕ್ರಿಮಿಗಳಂತೆಯೂ ಯಾಕೆ ಮಾಡುತ್ತೀ?
15
ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ.
16
ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ.
17
ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?