ಇಸಾಕನು ಮುದುಕನಾಗಿ ನೋಡುವದ ಕ್ಕಾಗದಷ್ಟು ಅವನ ಕಣ್ಣುಗಳು ಮೊಬ್ಬಾ ದಾಗ ಅವನು ತನ್ನ ಹಿರೀ ಮಗನಾದ ಏಸಾವನನ್ನು ಕರೆದು ಅವನಿಗೆ--ನನ್ನ ಮಗನೇ ಅಂದಾಗ ಅವನು ಇಸಾಕನಿಗೆ--ಇಗೋ, ಇದ್ದೇನೆ ಅಂದನು.
ನನಗೋಸ್ಕರ ಬೇಟೆಯ ಮಾಂಸವನ್ನು ತಕ್ಕೊಂಡು ಬಂದು ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಬಾ; ಆಗ ನಾನು ಸಾಯುವದಕ್ಕಿಂತ ಮುಂಚೆ ಊಟ ಮಾಡಿ ಕರ್ತನ ಸನ್ನಿಧಿಯಲ್ಲಿ ನಿನ್ನನ್ನು ಆಶೀರ್ವದಿಸು ವೆನು ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ;
ಈಗ ನೀನು ಮಂದೆಯ ಬಳಿಗೆ ಹೋಗಿ ಅಲ್ಲಿಂದ ಎರಡು ಒಳ್ಳೇ ಮೇಕೆಯ ಮರಿಗಳನ್ನು ತಕ್ಕೊಂಡು ಬಾ; ನಿನ್ನ ತಂದೆಗೋಸ್ಕರ ನಾನು ಅವುಗಳನ್ನೂ ಅವನು ಪ್ರೀತಿ ಸುವ ರುಚಿಯಾದ ಅಡಿಗೆಯನ್ನೂ ಸಿದ್ಧಮಾಡುವೆನು.
ಯಾಕೋಬನು ತನ್ನ ತಂದೆಗೆನಾನು ನಿನ್ನ ಹಿರೀ ಮಗನಾದ ಏಸಾವನು; ನೀನು ನನಗೆ ಹೇಳಿದಂತೆ ಮಾಡಿದ್ದೇನೆ; ಎದ್ದು ಕೂತು ಕೊಂಡು. ನಿನ್ನ ಪ್ರಾಣವು ನನ್ನನ್ನು ಆಶೀರ್ವದಿ ಸುವಂತೆ ನನ್ನ ಬೇಟೆಯ ಮಾಂಸವನ್ನು ಊಟಮಾಡು ಅಂದನು.
ಆಗ ಅವನು--ಅದನ್ನು ನನ್ನ ಹತ್ತಿರ ತಕ್ಕೊಂಡು ಬಾ, ನನ್ನ ಪ್ರಾಣವು ನಿನ್ನನ್ನು ಆಶೀರ್ವದಿಸುವ ಹಾಗೆ ನನ್ನ ಮಗನ ಬೇಟೆಯ ಮಾಂಸವನ್ನು ಊಟ ಮಾಡುವೆನು ಅಂದನು; ಆಗ ಯಾಕೋಬನು ಅದನ್ನು ಹತ್ತಿರ ತಕ್ಕೊಂಡು ಬಂದಾಗ ಅವನು ಊಟಮಾಡಿ ದ್ರಾಕ್ಷಾರಸವನ್ನು ತಂದಾಗ ಅವನು ಕುಡಿದನು.
ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ--ಇಗೋ, ನನ್ನ ಮಗನ ವಾಸನೆಯು ಯೆಹೋವನು ಆಶೀರ್ವದಿಸಿದ ಹೊಲದ ವಾಸನೆಯಂತಿದೆ.
ಜನಗಳು ನಿನ್ನನ್ನು ಸೇವಿಸಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆ ಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ, ನಿನ್ನನ್ನು ಶಪಿಸುವವರಿಗೆ ಶಾಪವೂ ಆಶೀರ್ವದಿಸುವ ವರಿಗೆ ಆಶೀರ್ವಾದವೂ ಆಗಲಿ ಅಂದನು.
ಅವನು ಸಹ ರುಚಿಯಾದ ಊಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು--ನನ್ನ ತಂದೆಯು ಎದ್ದು ನಿನ್ನ ಪ್ರಾಣವು ನನ್ನನ್ನು ಆಶೀರ್ವದಿಸುವಂತೆ ತನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡಲಿ ಅಂದನು.
ಆಗ ಇಸಾಕನು ಬಹಳವಾಗಿ ನಡುಗುತ್ತಾ ಹೇಳಿದ್ದೇನಂದರೆ--ನೀನು ಬರುವದಕ್ಕಿಂತ ಮೊದಲು ಬೇಟೆಯಾಡಿ ನನಗೆ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವ ದಿಸಿದೆನು. ಹೌದು, ಅವನು ಆಶೀರ್ವದಿಸಲ್ಪಟ್ಟಿರಲಿ ಅಂದನು.
ಅದಕ್ಕೆ ಅವನು--ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ. ಈ ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ; ಅವನು ನನ್ನ ಚೊಚ್ಚಲತನ ವನ್ನು ತಕ್ಕೊಂಡಿದ್ದಾನೆ; ಇಗೋ, ಈಗ ನನ್ನ ಆಶೀರ್ವಾದವನ್ನೂ ತಕ್ಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸ ಲಿಲ್ಲವೋ ಅಂದನು.
ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು.
ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.
ರೆಬೆಕ್ಕಳಿಗೆ ತನ್ನ ಹಿರೀ ಮಗನಾದ ಏಸಾವನ ಮಾತುಗಳು ತಿಳಿಸಲ್ಪಟ್ಟಾಗ ಆಕೆಯು ತನ್ನ ಕಿರೀ ಮಗನಾದ ಯಾಕೋಬನನ್ನು ಕರೇಕಳುಹಿಸಿ ಅವನಿಗೆ--ಇಗೋ, ನಿನ್ನ ಸಹೋದರ ನಾದ ಏಸಾವನು ನಿನ್ನನ್ನು ಕೊಂದು ತನ್ನನ್ನು ಸಂತೈಸಿಕೊಳ್ಳುವದಕ್ಕಿದ್ದಾನೆ.
ನಿನ್ನ ಕಡೆಗಿರುವ ನಿನ್ನ ಸಹೋದರನ ಕೋಪವು ತೀರಿಹೋಗಿ ನೀನು ಅವನಿಗೆ ಮಾಡಿದ್ದನ್ನು ಅವನು ಮರೆಯುವ ವರೆಗೆ ಅಲ್ಲೇ ಇರು. ತರುವಾಯ ನಾನು ಕಳುಹಿಸಿ ನಿನ್ನನ್ನು ಅಲ್ಲಿಂದ ಕರೆಯಿಸುವೆನು. ಒಂದೇ ದಿನದಲ್ಲಿ ನಾನು ನಿಮ್ಮಿಬ್ಬರನ್ನು ಕಳಕೊಳ್ಳುವದು ಯಾಕೆ ಅಂದಳು.
ತರುವಾಯ ರೆಬೆಕ್ಕಳು ಇಸಾಕನಿಗೆ--ಹೇತನ ಕುಮಾರ್ತೆಗಳ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ; ಹೇತನ ಕುಮಾರ್ತೆಗಳಂತಿರುವ ಈ ದೇಶದ ಕುಮಾರ್ತೆಗಳಲ್ಲಿ ಒಬ್ಬಳನ್ನು ಯಾಕೋಬನು ಹೆಂಡತಿಯಾಗಿ ತಕ್ಕೊಂಡರೆ ನಾನು ಬದುಕುವದರಿಂದ ನನಗೇನು ಪ್ರಯೋಜನ ಅಂದಳು.