Indian Language Bible Word Collections
Genesis 10
Genesis Chapters
Genesis 10 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Genesis Chapters
Genesis 10 Verses
1
|
ನೋಹನ ಕುಮಾರರಾದ ಶೇಮ್ ಹಾಮ್ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. |
2
|
ಯೆಫೆತನ ಕುಮಾರರು ಯಾರಂದರೆ, ಗೋಮೆರ್ ಮಾಗೋಗ್ ಮಾದಯ್ ಯಾವಾನ್ ತೂಬಲ್ ಮೇಷೆಕ್ ತೀರಾಸ್ ಎಂಬವರು. |
3
|
ಗೋಮೆರನ ಕುಮಾರರು ಯಾರಂದರೆ, ಅಷ್ಕೆನಸ್ ರೀಫತ್ ತೋಗರ್ಮ ಎಂಬವರು. |
4
|
ಯಾವಾನನ ಕುಮಾರರು ಯಾರಂದರೆ, ಎಲೀಷಾ ತಾರ್ಷೀಷ್ ಕಿತ್ತೀಮ್ ದೋದಾನಿಮ್ ಇವರೇ. |
5
|
ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು. |
6
|
ಹಾಮನ ಕುಮಾರರು ಯಾರಂದರೆ, ಕೂಷ್ ಮಿಚ್ರಯಿಮ್ ಪೂತ್ ಕಾನಾನ್ ಎಂಬವರು. |
7
|
ಕೂಷನ ಕುಮಾರರು ಯಾರಂದರೆ, ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು. ರಗ್ಮನ ಕುಮಾರರು ಯಾರಂದರೆ, ಶೆಬಾ ದೆದಾನ್ ಎಂಬವರು. |
8
|
ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು. |
9
|
ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು. |
10
|
ಶಿನಾರ್ ದೇಶದಲ್ಲಿರುವ ಬಾಬೆಲ್ ಯೆರೆಕ್ ಅಕ್ಕದ್ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು. |
11
|
ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ಎಂಬ ಪಟ್ಟಣ, ಕೆಲಹ, |
12
|
ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್ನನ್ನು ಕಟ್ಟಿದನು. |
13
|
ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ |
14
|
ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು. |
15
|
ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ |
16
|
ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ |
17
|
ಹಿವ್ವಿಯನೂ ಅರ್ಕಿಯನೂ ಸೀನಿಯನೂ |
18
|
ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು. |
19
|
ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್ ಗೊಮೋರ ಅದ್ಮಾ ಚೆಬೋಯಿಮ್ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ. |
20
|
ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು. |
21
|
ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು. |
22
|
ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್. |
23
|
ಅರಾಮನ ಮಕ್ಕಳು ಯಾರಂದರೆ, ಊಸ್ ಹೂಲ್ ಗೆತೆರ್ ಮಷ್ ಇವರೇ. |
24
|
ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು. |
25
|
ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್. |
26
|
ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ |
27
|
ಹದೋರಾಮನೂ ಊಜಾಲನೂ ದಿಕ್ಲಾನನೂ |
28
|
ಓಬಾಲನೂ ಅಬೀಮಯೇಲನೂ ಶೆಬನೂ |
29
|
ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು. |
30
|
ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು. |
31
|
ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು. |
32
|
ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು. |