1
|
ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ-- |
2
|
ಮನುಷ್ಯಪುತ್ರನೇ, ಮೆಷೆಕ್ ಮತ್ತು ತೂಬಲಿನವರಿಗೆ ಮುಖ್ಯ ಪ್ರಭುಗಳಾ ಗಿರುವ ಮಾಗೋಗ್ ದೇಶದ ಗೋಗನಿಗೆ ನೀನು ಅಭಿಮುಖನಾಗಿ ಅವನಿಗೆ ವಿರುದ್ಧವಾಗಿ ಪ್ರವಾದಿಸು |
3
|
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮೆಷೆಕ್ ತೂಬಲಿಗೆ ಮುಖ್ಯ ಪ್ರಭುವಾದ ಗೋಗನೇ, ನಾನು ನಿನಗೆ ವಿರೋಧವಾಗಿದ್ದೇನೆ. |
4
|
ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು. |
5
|
ಅವರೊಂದಿಗೆ ಪರ್ಷಿಯಾ ಇಥಿಯೋಪ್ಯ ಲಿಬಿಯಾ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು. |
6
|
ಗೋಮೆರ್ ಮತ್ತು ಅವನ ಎಲ್ಲಾ ದಳಗಳನ್ನು ಉತ್ತರ ದಿಕ್ಕಿನ ತೋಗರ್ಮನ ಮನೆತನದವರನ್ನೂ ಅವನ ಎಲ್ಲಾ ದಳಗಳನ್ನೂ ನಿನ್ನ ಸಂಗಡವಿರುವ ಅನೇಕ ಜನರನ್ನೂ ಹೊರಗೆ ತರುವೆನು. |
7
|
ನೀನು ಸಿದ್ಧನಾಗಿ ನಿನ್ನ ಸಂಗಡ ಕೂಡಿ ಬಂದಿರುವ ನಿನ್ನ ಎಲ್ಲಾ ಕೂಟಗಳನ್ನು ಸಿದ್ಧಮಾಡಿಕೊಂಡು ನೀನು ಅವರಿಗೆ ಕಾವಲಿರು. |
8
|
ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ. |
9
|
ನೀನು ಮೇಲೇರಿ ಬಿರುಗಾಳಿಯಂತೆ ಬರುವಿ. ನೀನೂ ನಿನ್ನ ಎಲ್ಲಾ ದಂಡುಗಳೂ ಮತ್ತು ಅನೇಕ ಜನರ ಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ. |
10
|
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದೂ ಸಹ ಆಗುವದು, ಅದೇ ಸಮಯದಲ್ಲಿ ನಿನ್ನ ಮನಸ್ಸಿಗೆ ಕೆಲವು ಸಂಗತಿಗಳು ಬರುವವು ನೀನು ಒಂದು ಕೆಟ್ಟಯೋಚನೆಯನ್ನು ಯೋಚಿಸುವಿ, |
11
|
ನೀನು ಪೌಳಿಗೋಡೆಯಿಲ್ಲದ ಹಳ್ಳಿಗಳುಳ್ಳ ದೇಶಕ್ಕೆ ನಾನು ಹೋಗುವೆನು; ಪೌಳಿ ಗೋಡೆಗಳಿಲ್ಲದೆ ಇಲ್ಲವೆ ಬಾಗಲುಗಳು ಅಗುಳಿಗಳು ಇಲ್ಲದೆ ಅದೂ ಅವರು ವಿಶ್ರಾಂತಿಯಿಂದಲೂ ಸುಖ ವಾಗಿ ವಾಸಿಸುತ್ತಿರುವಾಗ ನಾನು ಹೋಗಿ, |
12
|
ಸುಲಿಗೆ ಯನ್ನು ಕೊಳ್ಳೆಯನ್ನು ತೆಗೆದುಕೊಳ್ಳುವೆನು; ಹೀಗೆ ನಿವಾಸಗಳಿದ್ದು ಬೀಡಾಗಿದ್ದ ಸ್ಥಳಗಳಲ್ಲಿಯೂ ಜನಾಂಗ ಗಳಿಂದ ಕೂಡಿಸಲ್ಪಟ್ಟಂತಹ ದನಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಮಾಡು ವಂಥ ಜನರ ಮೇಲೆಯೂ ಕೈಹಾಕವೆನು ಎಂದು ಹೇಳುವಿ. |
13
|
ಶೇಬಾ, ದೇದಾನ್ ಮತ್ತು ತಾರ್ಷೀಷಿನ ವರ್ತಕರು, ಎಲ್ಲಾ ಪ್ರಾಯದ ಸಿಂಹಗಳೊಂದಿಗೆ ಅಲ್ಲಿ ನಿನಗೆ--ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದಿಯಾ ಕೊಳ್ಳೆಹೊಡೆಯುವದಕ್ಕಾಗಿಯೇ ನಿನ್ನ ತಂಡ ವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ದನಗಳನ್ನು ಸಂಪತ್ತನ್ನೂ ತೆಗೆದು ಕೊಂಡು ಮಹಾಸುಲಿಗೆ ತೆಗೆದುಕೊಳ್ಳಬೇಕೆಂದೋ ಅನ್ನುವರು. |
14
|
ಆದದರಿಂದ ಮನುಷ್ಯಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಗೋಗನಿಗೆ ಪ್ರವಾ ದಿಸು ಮತ್ತು ಹೇಳು--ಯಾವಾಗ ನನ್ನ ಜನರಾದ ಇಸ್ರಾಯೇಲ್ಯರು ಸುಖವಾಗಿ ವಾಸಿಸುವರೋ ಆ ದಿನದಲ್ಲಿ ಅದು ನಿನಗೆ ತಿಳಿಯುವುದಿಲ್ಲವೋ |
15
|
ನೀನು ಉತ್ತರ ಭಾಗಗಳ ನಿನ್ನ ಸ್ಥಳದಿಂದ ಬರುವಿ; ನೀನೂ ನಿನ್ನ ಸಂಗಡ ಅನೇಕ ಜನರೂ ಕುದುರೆಗಳನ್ನು ಹತ್ತಿದ ವರಾಗಿ ಬಲವಾದ ಸೈನ್ಯವಾಗಿಯೂ ಮಹಾದಂಡಾ ಗಿಯೂ ಬರುವಿರಿ. |
16
|
ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲ್ಯರಿಗೆ ವಿರೋಧವಾಗಿ ಅವರ ಮೇಲೆ ಬರುವಿ; ಇದು ನಡೆ ಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಅನ್ಯಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ಬರಮಾಡುವೆನು. |
17
|
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರ ಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗ ಳಿಗೆ ಮುಂಚೆ ಪ್ರವಾದಿಸಿದರಲ್ಲವೇ? |
18
|
ಆ ದಿನದಲ್ಲಿ ಗೋಗನು ಇಸ್ರಾಯೇಲ್ ದೇಶಕ್ಕೆ ವಿರೋಧವಾಗಿ ಬರುವಾಗ ರೋಷವು ನನ್ನ ಮುಖದ ಮೇಲೆ ಬರುವದೆಂದು ದೇವರಾದ ಕರ್ತನು ಹೇಳುತ್ತಾನೆ. |
19
|
ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನ ಇಸ್ರಾಯೇಲ್ ದೇಶದಲ್ಲಿ ಮಹಾಕಂಪನ ಉಂಟಾಗು ವದು; |
20
|
ಆಗ ಸಮುದ್ರದ ವಿಾನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವವು; ಪರ್ವತಗಳು ಕೆಡವಲ್ಪಡುವವು, ಇಳಿ ಜಾರುಗಳು ಬೀಳುವವು, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವವು. |
21
|
ನನ್ನ ಎಲ್ಲಾ ಪರ್ವತಗಳಲ್ಲೂ ನಾನು ಅವನಿಗೆ ವಿರುದ್ಧವಾಗಿ ಕತ್ತಿಯನ್ನು ಕರೆಯುವೆ ನೆಂದೂ ದೇವರಾದ ಕರ್ತನು ಹೇಳುತ್ತಾನೆ; ಪ್ರತಿ ಯೊಬ್ಬ ಮನುಷ್ಯನ ಕತ್ತಿಯೂ ಅವನ ಸಹೋದರನಿಗೆ ವಿರೋಧವಾಗಿರುವದು. |
22
|
ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು. |
23
|
ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು. |
Ezekiel 38:1 Kannada Language Bible Words basic statistical display
COMING SOON ...