ಕರ್ತನು ಹೀಗೆ ಹೇಳುತ್ತಾನೆ--ಐಗುಪ್ತಕ್ಕೆ ಆಧಾರ ವಾದವರು ಬೀಳುವರು. ಅದರ ಶಕ್ತಿಯ ಮದವು ಇಳಿದು ಹೋಗುವದು. ಅಲ್ಲಿನ ಜನರು ಮಿಗ್ದೋಲಿ ನಿಂದ ಸೆವೇನೆಯ ಗೋಪುರ ಮೊದಲುಗೊಂಡು ಅವರಲ್ಲಿ ಕತ್ತಿಯಿಂದ ಹತರಾಗುವರು ಎಂದು ದೇವ ರಾದ ಕರ್ತನು ಹೇಳುತ್ತಾನೆ.
ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣ ಮಾಡಿ ನಿಶ್ಚಿಂತರಾದ ಐಥಿಯೋಪ್ಯರನ್ನು ಹೆದರಿಸುವರು; ಐಗುಪ್ತದ ದಿನದಲ್ಲಿ ಆದಹಾಗೆ ಅವರ ಮೇಲೆ ದೊಡ್ಡಬಾಧೆ ಉಂಟಾಗುವದು; ಇಗೋ, ಅದು ಬಂತು.
ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು; ದೇಶವನ್ನು ಅದರ ಪರಿಪೂರ್ಣತೆಯನ್ನೂ ಅವರ ಅನ್ಯರ ಕೈಯಿಂದ ಹಾಳುಮಾಡುವೆನು. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
ದೇವರಾದ ಕರ್ತನು ಹೀಗೆ ಹೇಳುತ್ತಾನೆ. ನಾನು ವಿಗ್ರಹಗಳನ್ನು ಹಾಳು ಮಾಡಿ ಬೊಂಬೆಗಳನ್ನು ನೋಫಿನಲ್ಲಿ ತೀರಿಸಿಬಿಡುವೆನು; ಐಗುಪ್ತದೇಶದ ಪ್ರಭುವು ಇನ್ನು ಇರುವದಿಲ್ಲ, ನಾನು ಐಗುಪ್ತ ದೇಶದಲ್ಲಿ ಭಯವನ್ನು ಉಂಟುಮಾಡುತ್ತೇನೆ.
ತಹಪನೇಸಿನಲ್ಲಿಯೂ ನಾನು ಐಗುಪ್ತದ ನೊಗ ಗಳನ್ನು ಮುರಿಯುವಾಗ ಹಗಲು ಕತ್ತಲಾಗುವದು. ಅದರ ಶಕ್ತಿಯ ಮದವು ಅಡಗಿ ಹೋಗುವದು, ಅದನ್ನು ಮೇಘವು ಮುಚ್ಚುವದು. ಅದರ ಕುಮಾರಿ ಯರು ಸೆರೆಗೆ ಹೋಗುವರು.
ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.
ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ.
ನಾನು ಬಾಬೆಲಿನ ಅರಸನ ತೋಳುಗಳಿಗೆ ಬಲ ಕೊಡುವೆನು, ಫರೋಹನ ತೋಳುಗಳು ಬಿದ್ದು ಹೋಗುವವು; ಯಾವಾಗ ನಾನು ನನ್ನ ಕತ್ತಿಯನ್ನು ಬಾಬೆಲಿನ ಅರಸನ ಕೈಗೆ ಕೊಡುವೆನೋ ಅದನ್ನು ಐಗುಪ್ತದೇಶದಿಂದ ಹೊರಗೆ ಚಾಚುವೆನೋ ಆಗ ನಾನೇ ಕರ್ತನೆಂದು ಅವರಿಗೆ ಗೊತ್ತಾಗುವದು.