1
|
ಮೂರನೇ ದಿನದಲ್ಲಿ ಏನಾಯಿತಂದರೆ, ಎಸ್ತೇರಳು ರಾಜ ಭೂಷಣಗಳನ್ನು ಧರಿಸಿ ಕೊಂಡು ಅರಮನೆಗೆ ಎದುರಾಗಿರುವ ಅರಸನ ಮನೆಯ ಅಂಗಳದಲ್ಲಿ ಹೋಗಿ ನಿಂತಳು. ಅರಸನು ರಾಜ ಮನೆ ಯಲ್ಲಿ ಬಾಗಲಿಗೆದುರಾಗಿ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿದ್ದನು. |
2
|
ಅರಸನು ಅಂಗಳದಲ್ಲಿ ನಿಂತಿರುವ ರಾಣಿಯಾದ ಎಸ್ತೇರಳನ್ನು ಕಂಡಾಗ ಆಕೆಯು ಅವನ ಸಮ್ಮುಖದಲ್ಲಿ ದಯೆಹೊಂದಿದ್ದರಿಂದ ಅರಸನು ತನ್ನ ಕೈಯಲ್ಲಿದ್ದ ಬಂಗಾರದ ಮುದ್ರೆ ಕೋಲನ್ನು ಎಸ್ತೇರಳ ಬಳಿಗೆ ಚಾಚಿದನು. ಎಸ್ತೇರಳು ಸವಿಾಪಕ್ಕೆ ಬಂದು ಕೋಲಿನ ತುದಿಯನ್ನು ಮುಟ್ಟಿದಳು. |
3
|
ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ, ನಿನಗೆ ಏನು ಬೇಕು? ನಿನ್ನ ವಿಜ್ಞಾಪನೆ ಏನು? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು. |
4
|
ಅದಕ್ಕೆ ಎಸ್ತೇರಳು--ಅರಸನಿಗೆ ಸಮ್ಮತಿಯಾ ದರೆ ನಾನು ಅವನಿಗೋಸ್ಕರ ಸಿದ್ಧಮಾಡಿದ ಔತಣಕ್ಕೆ ಅರಸನೂ ಹಾಮಾನನೂ ಈಹೊತ್ತು ಬರಬೇಕು ಅಂದಳು. |
5
|
ಆಗ ಅರಸನು--ಎಸ್ತೇರಳು ಹೇಳಿದ ಪ್ರಕಾರ ಮಾಡಲು ಹಾಮಾನನನ್ನು ತ್ವರೆಪಡಿಸಿರಿ ಅಂದನು. ಎಸ್ತೇರಳು ಮಾಡಿಸಿದ ಔತಣಕ್ಕೆ ಅರಸನೂ ಹಾಮಾನನೂ ಬಂದರು. |
6
|
ದ್ರಾಕ್ಷಾರಸದ ಔತಣದಲ್ಲಿ ಅರಸನು ಎಸ್ತೇರಳಿಗೆ--ನೀನು ಬೇಡಿಕೊಳ್ಳುವದೇನು? ಅದು ನಿನಗೆ ಕೊಡಲ್ಪಡುವದು. ನಿನ್ನ ವಿಜ್ಞಾಪನೆ ಏನು? ಅದು ಅರ್ಧ ರಾಜ್ಯದವರೆಗೆ ಇದ್ದರೂ ಕೊಡಲ್ಪ ಡುವದು ಅಂದನು. |
7
|
ಎಸ್ತೇರಳು ಪ್ರತ್ಯುತ್ತರ ಕೊಟ್ಟುನನ್ನ ವಿಜ್ಞಾಪನೆಯೂ ನನ್ನ ಬೇಡಿಕೆಯೂ ಏನಂದರೆ, ನಾನು ಅರಸನ ಸಮ್ಮುಖದಲ್ಲಿ ದಯೆಹೊಂದಿದ್ದರೆ, |
8
|
ನನ್ನ ಬೇಡುವಿಕೆಯ ಪ್ರಕಾರ ಕೊಡಲೂ ನನ್ನ ವಿಜ್ಞಾಪನೆಯ ಪ್ರಕಾರ ಮಾಡಲೂ ಅರಸನಿಗೆ ಸಮ್ಮತಿ ಯಾದರೆ ಅರಸನಿಗೂ ಹಾಮಾನನಿಗೂ ನಾನು ಇನ್ನೂ ಮಾಡುವ ಔತಣಕ್ಕೆ ಬರಬೇಕು. ನಾಳೆ ಅರಸನು ಹೇಳಿದ ಪ್ರಕಾರ ಮಾಡುವೆನು ಅಂದಳು. |
9
|
ಆ ದಿನದಲ್ಲಿ ಹಾಮಾನನು ಸಂತೋಷವುಳ್ಳವ ನಾಗಿಯೂ ಆನಂದ ಹೃದಯವುಳ್ಳವನಾಗಿಯೂ ಹೊರಟುಹೋದನು. ಆದರೆ ಅರಮನೆಯ ಬಾಗಲ ಲ್ಲಿರುವ ಮೊರ್ದೆಕೈ ತನಗೆ ಕದಲದೆ ಇರುವದನ್ನು ಹಾಮಾನನು ನೋಡಿದಾಗ ಅವನು ಮೊರ್ದೆಕೈಯ ಮೇಲೆ ಕೋಪದಿಂದ ತುಂಬಿದವನಾದನು. |
10
|
ಆದರೂ ಹಾಮಾನನು ಬಿಗಿಹಿಡುಕೊಂಡು ತನ್ನ ಮನೆಗೆ ಬಂದು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಕಳುಹಿಸಿದನು. |
11
|
ಹಾಮಾನನು ತನ್ನ ಐಶ್ವರ್ಯದ ಘನವನ್ನೂ ತನ್ನ ಮಕ್ಕಳ ಹೆಚ್ಚಳವನ್ನೂ ಅರಸನು ತನ್ನನ್ನು ಯಾವದರಲ್ಲಿ ಹೆಚ್ಚಿಸಿದ್ದಾನೋ ಅರಸನ ಪ್ರಭು ಗಳ ಮೇಲೆಯೂ ಸೇವಕರ ಮೇಲೆಯೂ ತನ್ನನ್ನು ಹೇಗೆ ಎತ್ತಿದ್ದಾನೆಂದೂ ಎಲ್ಲವನ್ನೂ ಅವರಿಗೆ ವಿವರ ವಾಗಿ ಹೇಳಿದನು. |
12
|
ಇದಲ್ಲದೆ--ರಾಣಿಯಾದ ಎಸ್ತೇ ರಳು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೊಬ್ಬರನ್ನು ಕರೆಯಲಿಲ್ಲ. ನಾಳೆಗೂ ಆಕೆಯಿಂದ ನಾನು ಅರಸನ ಸಂಗಡ ಆಕೆಯ ಬಳಿಗೆ ಕರೆಯಲ್ಪಟ್ಟಿದ್ದೇನೆ. |
13
|
ಆದರೆ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಲಲ್ಲಿ ಕುಳಿತಿರುವದನ್ನು ನಾನು ನೋಡುವ ವರೆಗೆ ಇದೆಲ್ಲಾ ನನಗೆ ಪ್ರಯೋ ಜನವಿಲ್ಲ ಅಂದನು. |
14
|
ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು. ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು. |
Esther 5:8 Kannada Language Bible Words basic statistical display
COMING SOON ...