ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.
ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು.
ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ಕೆಟ್ಟದ್ದು; ಇದಕ್ಕೆಲ್ಲಾ ಒಂದು ಗತಿಯಿದೆ; ಹೌದು, ಮನುಷ್ಯ ಕುಮಾರರ ಹೃದಯಗಳು ಸಹ ಕೆಟ್ಟತನದಿಂದ ತುಂಬಿವೆ; ಅವರು ಜೀವಿಸುವಾಗ ಅವರ ಹೃದಯಗಳಲ್ಲಿ ಹುಚ್ಚು ತನವಿದೆ. ಅನಂತರ ಅವರು ಸಾಯುತ್ತಾರೆ (ಸತ್ತವರ ಬಳಿಗೆ ಹೋಗುತ್ತಾರೆ.)
ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.
ಮನುಷ್ಯನು ಸಹ ತನ್ನ ಕಾಲವನ್ನು ತಿಳಿದಲ್ಲಿ ಬಾಧೆಯನ್ನುಂಟುಮಾಡುವ ಬಲೆಯಿಂದ ಹಿಡಿಯುವ ವಿಾನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗ ಳಂತೆಯೂ ಮನುಷ್ಯನ ಮಕ್ಕಳ ಮೇಲೆ ಕೇಡಿನ ಕಾಲವು ತಕ್ಷಣ ಬೀಳುವಾಗ ಹಿಡಿಯಲ್ಪಡುತ್ತಾರೆ.
ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.