1
|
ಜ್ಞಾನಿಯ ಹಾಗೆ ಇರುವವನು ಯಾರು? ಈ ಸಂಗತಿಯ ಅರ್ಥವನ್ನು ಬಲ್ಲವನು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖ ವನ್ನು ಬೆಳಗಿಸುತ್ತದೆ, ಅವನ ಧೈರ್ಯದ ಮುಖವು ಬದಲಾಗುವದು. |
2
|
ನಾನು ನಿಮಗೆ--ದೇವರ ಮೇಲೆ ಆಣೆಯಿಟ್ಟು ಅರಸನ ಆಜ್ಞೆಯನ್ನು ಕೈಕೊಳ್ಳಿರಿ ಎಂದು ಆಲೋಚನೆ ಹೇಳಿಕೊಡುತ್ತೇನೆ. |
3
|
ಅವನ ದೃಷ್ಟಿಯಿಂದ ಹೊರಗೆ ಹೋಗುವದಕ್ಕೆ ಆತುರಪಡಬೇಡಿರಿ; ಕೆಟ್ಟ ಕಾರ್ಯದಲ್ಲಿ ನಿಲ್ಲಬೇಡಿರಿ; ಅವನು ತನಗೆ ಇಷ್ಟ ಬಂದದ್ದನ್ನೆಲ್ಲಾ ಮಾಡುತ್ತಾನೆ. |
4
|
ಅರಸನ ಮಾತು ಎಲ್ಲಿ ದೆಯೋ ಅಲ್ಲಿ ಶಕ್ತಿ ಇದೆ; ನೀನು ಏನು ಮಾಡು ತ್ತಿರುವೆ ಎಂದು ಅವನಿಗೆ ಹೇಳುವವನಾರು? |
5
|
ಆಜ್ಞೆ ಯನ್ನು ಕೈಕೊಳ್ಳುವವನು ಯಾವನೂ ಕೆಟ್ಟದ್ದನ್ನು ಅನು ಭವಿಸನು: ಜ್ಞಾನಿಯ ಹೃದಯವು ಕಾಲ ನ್ಯಾಯ ಎರಡನ್ನೂ ತಿಳಿದುಕೊಳ್ಳುತ್ತದೆ. |
6
|
ಪ್ರತಿಯೊಂದು ಕಾರ್ಯಕ್ಕೂ ಕಾಲ ಮತ್ತು ನ್ಯಾಯಗಳಿವೆ, ಆದದರಿಂದ ಮನುಷ್ಯನ ಕಷ್ಟವು ಅವನ ಮೇಲೆ ದೊಡ್ಡದಾಗಿ ಘೋರವಾಗಿದೆ. |
7
|
ಮುಂದೆ ಆಗುವದೇನೆಂದು ಅವ ನಿಗೆ ತಿಳಿಯದು; ಅದು ಯಾವಾಗ ಆಗುವದೆಂದು ಯಾರು ಅವನಿಗೆ ಹೇಳುವರು? |
8
|
ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ. |
9
|
ನಾನು ಇದನ್ನೆಲ್ಲಾ ನೋಡಿ ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲ ಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ; ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡಿಸುವಂತ ಕಾಲವೂ ಇದೆ. |
10
|
ಪರಿಶುದ್ಧ ಸ್ಥಳದಿಂದ ತೊಲಗಿದ ದುಷ್ಟರು ಹೂಣ ಲ್ಪಡುವದನ್ನೂ ನಾನು ನೋಡಿದ್ದೇನೆ; ಅವರು ಹೀಗೆ ಮಾಡಿದ ಪಟ್ಟಣವನ್ನೇ ಮರೆತರು; ಇದೂ ಸಹ ನಿರರ್ಥಕವಾದದ್ದು; |
11
|
ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು. |
12
|
ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ ದಿವಸಗಳನ್ನು ಹೆಚ್ಚಿಸಿದರೂ ದೇವರಿಗೆ ಭಯ ಪಟ್ಟು ಆತನಲ್ಲಿ ಭಯಪಡುವವರಿಗೆ ಒಳ್ಳೇದಾಗುವ ದೆಂದು ನಾನು ನಿಶ್ಚಯವಾಗಿಯೂ ಬಲ್ಲೆನು. |
13
|
ಆದರೆ ದುಷ್ಟನಿಗೆ ಒಳ್ಳೆಯದಾಗುವದಿಲ್ಲ. ತನ್ನ ನೆರಳಿನ ಹಾಗಿ ರುವ ಅವನ ದಿವಸಗಳನ್ನು ಹೆಚ್ಚಿಸುವದಿಲ್ಲ; ಅವನು ದೇವರ ಮುಂದೆ ಭಯಪಡುವದಿಲ್ಲ. |
14
|
ಭೂಮಿಯ ಮೇಲೆ ಮಾಡುವ ಒಂದು ವ್ಯರ್ಥವಾದದ್ದಿದೆ; ದುಷ್ಟರ ಕೆಲಸದ ಪ್ರಕಾರ ಅನುಭವಿಸುವ ನೀತಿವಂತರಿದ್ದಾರೆ; ನೀತಿವಂತರ ಕೆಲಸದ ಪ್ರಕಾರ ಅನುಭವಿಸುವ ದುಷ್ಟರಿ ದ್ದಾರೆ. ಇದೂ ಸಹ ವ್ಯರ್ಥವೆಂದು ನಾನು ಹೇಳಿದೆನು. |
15
|
ಆಗ ನಾನು ಸಂತೋಷವನ್ನು ಹೊಗಳಿದೆನು. ಮನು ಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವದೂ ತಿನ್ನುವದೂ ಸಂತೋಷಪಡುವದೇ ಹೊರತು ಬೇರೇನೂ ಒಳ್ಳೆ ಯದು ಇಲ್ಲ; ಸೂರ್ಯನ ಕೆಳಗೆ ದೇವರು ಅವನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟದಿಂದ ಅದು ಅವನಿಗೆ ಸೇರುತ್ತದೆ. |
16
|
ಜ್ಞಾನವನ್ನು ತಿಳಿದುಕೊಳ್ಳುವದಕ್ಕೂ ಮತ್ತು ಭೂಮಿಯ ಮೇಲೆ ಮಾಡುವ ಕಾರ್ಯವನ್ನು ನೋಡುವದಕ್ಕೂ ನಾನು ನನ್ನ ಹೃದಯವನ್ನು ಪ್ರಯೋಗಿಸಿದೆನು; (ಯಾಕಂದರೆ ರಾತ್ರಿಹಗಲು ತಮ್ಮ ಕಣ್ಣುಗಳಿಗೆ ನಿದ್ರೆ ನೋಡದ ವರೂ ಇದ್ದಾರೆ). |
17
|
ತರುವಾಯ ದೇವರ ಎಲ್ಲಾ ಕೆಲಸಗಳನ್ನು ನಾನು ನೋಡಿದೆನು; ಅದೇನಂದರೆ, ಸೂರ್ಯನ ಕೆಳಗೆ ಮಾಡುವ ಕೆಲಸಗಳನ್ನು ಮನು ಷ್ಯನು ಕಾಣಲಾರನು; ಮನುಷ್ಯನು ಅದನ್ನು ಹುಡು ಕುವದಕ್ಕೆ ಎಷ್ಟು ಕಷ್ಟಪಟ್ಟರೂ ಅದನ್ನು ಕಂಡು ಕೊಳ್ಳಲಾರನು; ಹೌದು, ಜ್ಞಾನಿಯು ಅದನ್ನು ತಿಳಿದುಕೊಳ್ಳಲು ಯೋಚಿಸಿದರೂ ಅವನು ಅದನ್ನು ಕಂಡುಕೊಳ್ಳಲಾರನು. |
Ecclesiastes 8:23 Kannada Language Bible Words basic statistical display
COMING SOON ...