ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ.
ತಾನೇ ಸತ್ತ ಯಾವದನ್ನಾದರೂ ತಿನ್ನಬಾರದು, ನಿಮ್ಮ ಬಾಗಲುಗಳಲ್ಲಿರುವ ಅನ್ಯನಿಗೆ ಅವನು ತಿನ್ನುವ ಹಾಗೆ ಕೊಡಬೇಕು; ಇಲ್ಲವೆ ಪರದೇಶದವನಿಗೆ ಮಾರಬಹುದು. ಯಾಕಂದರೆ ನೀನು ನಿನ್ನ ದೇವರಾದ ಕರ್ತ ನಿಗೆ ಪರಿಶುದ್ಧ ಜನವೇ. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಕುದಿಸಬಾರದು.
ನೀನು ನಿನ್ನ ದೇವರಾದ ಕರ್ತ ನಿಗೆ ಎಂದೆಂದಿಗೂ ಭಯಪಡುವದನ್ನು ಕಲಿಯುವ ಹಾಗೆ ನಿನ್ನ ಧಾನ್ಯ ದ್ರಾಕ್ಷರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳಲ್ಲಿ ಚೊಚ್ಚಲುಗಳನ್ನೂ ನಿನ್ನ ದೇವರಾದ ಕರ್ತನ ಮುಂದೆ ಆತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳದಲ್ಲಿ ತಿನ್ನಬೇಕು.
ನೀನು ಅವುಗಳನ್ನು ತೆಗೆದುಕೊಂಡು ಹೋಗದ ಹಾಗೆ ನಿನಗೆ ದಾರಿ ದೂರವಾದರೆ ಇಲ್ಲವೆ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಮೇಲೆ
ಆಗ ಆ ಹಣವನ್ನು ನಿನಗೆ ಮನಸ್ಸು ಬಂದದ್ದಕ್ಕೆಲ್ಲಾ ಅಂದರೆ ಹಸು, ಕುರಿ, ದ್ರಾಕ್ಷಾರಸ, ಮಧ್ಯಪಾನಗಳಿ ಗೋಸ್ಕರವೂ ನಿನ್ನ ಪ್ರಾಣವು ಆಶಿಸುವ ಎಲ್ಲವುಗಳಿ ಗೋಸ್ಕರವೂ ವೆಚ್ಚಮಾಡಬೇಕು; ಆ ಮೇಲೆ ನೀನೂ ನಿನ್ನ ಮನೆಯವರೂ ಅಲ್ಲಿ ನಿನ್ನ ದೇವರಾದ ಕರ್ತನ ಮುಂದೆ ತಿಂದು ಸಂತೋಷಪಡಬೇಕು.
ಆಗ (ನಿನ್ನ ಸಂಗಡ ಪಾಲನ್ನೂ ಸ್ವಾಸ್ತ್ಯವನ್ನೂ ಹೊಂದದ) ಲೇವಿಯನೂ ನಿನ್ನ ಬಾಗಲು ಗಳಲ್ಲಿರುವ ಅನ್ಯದೇಶದವನೂ ದಿಕ್ಕಿಲ್ಲದವನೂ ವಿಧ ವೆಯೂ ಬಂದು ನಿನ್ನ ದೇವರಾದ ಕರ್ತನು ನಿನ್ನನ್ನು ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಆಶೀರ್ವದಿಸುವ ಹಾಗೆ ತಿಂದು ತೃಪ್ತರಾಗಲಿ.