ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು.
ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು.
ಹೀಗಿರುವದರಿಂದ ಪೇತ್ರನು ಹಾದು ಹೋಗುವಾಗ ಅವನ ನೆರಳಾದರೂ ಅವರಲ್ಲಿ ಕೆಲವರ ಮೇಲೆ ಬೀಳುವಂತೆ ಜನರು ರೋಗಿಗಳನ್ನು ಹಾಸಿಗೆಗಳ ಮೇಲೆಯೂ ದೋಲಿಗಳ ಮೇಲೆಯೂ ಇಟ್ಟು ಬೀದಿಗಳಿಗೆ ತೆಗೆದುಕೊಂಡು ಬಂದರು.
ಅವರು ಅದನ್ನು ಕೇಳಿದವರಾಗಿ ಬೆಳಗಿನ ಜಾವದಲ್ಲಿಯೇ ದೇವಾಲಯದೊಳಕ್ಕೆ ಪ್ರವೇಶಿಸಿ ಬೋಧಿಸಿದರು. ಇತ್ತ ಮಹಾಯಾಜಕನೂ ಅವನ ಕೂಡ ಇದ್ದವರೂ ಬಂದು ಆಲೋಚನಾ ಸಭೆಯನ್ನೂ ಇಸ್ರಾಯೇಲ್ ಮಕ್ಕಳ ಶಾಸನ ಸಭೆಯನ್ನೂ ಕೂಡಿಸಿ ಅಪೊಸ್ತಲರನ್ನು ಕರತರುವದಕ್ಕಾಗಿ ಸೆರೆ ಮನೆಗೆ ಕಳುಹಿಸಿದರು
ನಿಜವಾಗಿಯೂ ಸೆರೆಮನೆಯು ಎಲ್ಲಾ ಭದ್ರತೆಯಿಂದ ಮುಚ್ಚಲ್ಪಟ್ಟದ್ದನ್ನೂ ಕಾವಲುಗಾರರು ಬಾಗಲುಗಳಲ್ಲಿ ನಿಂತಿರುವದನ್ನೂ ನಾವು ಕಂಡೆವು; ಆದರೆ ಅದನ್ನು ತೆರೆದಾಗ ನಾವು ಯಾರನ್ನೂ ಒಳಗೆ ಕಾಣಲಿಲ್ಲ ಎಂದು ಹೇಳಿದರು.
ಈ ಹೆಸರಿ ನಲ್ಲಿ ಬೋಧಿಸ ಕೂಡದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆ ಕೊಡಲಿಲ್ಲವೇ? ಆದರೂ ಇಗೋ, ನೀವು ಯೆರೂಸಲೇಮನ್ನು ನಿಮ್ಮ ಬೋಧನೆ ಯಿಂದ ತುಂಬಿಸಿ ಈ ಮನುಷ್ಯನ ರಕ್ತವನ್ನು ನಮ್ಮ ಮೇಲೆ ತರುವದಕ್ಕೆ ಉದ್ದೇಶವುಳ್ಳವರಾಗಿದ್ದೀರಲ್ಲಾ ಎಂದು ಅವರನ್ನು ಕೇಳಿದನು.
ಆಗ ನ್ಯಾಯಪ್ರಮಾಣದಲ್ಲಿ ಪಂಡಿತ ನಾಗಿದ್ದು ಎಲ್ಲಾ ಜನರಲ್ಲಿ ಮಾನ ಹೊಂದಿದ ಗಮಲಿ ಯೇಲನೆಂಬ ಒಬ್ಬ ಫರಿಸಾಯನು ಆಲೋಚನಾ ಸಭೆಯಲ್ಲಿ ನಿಂತುಕೊಂಡು ಸ್ವಲ್ಪ ಹೊತ್ತು ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಅಪ್ಪಣೆ ಕೊಟ್ಟು ಅವ ರಿಗೆ--
ಇದಕ್ಕಿಂತ ಮುಂಚೆ ಥೈದನು ಎದ್ದು ತಾನೊಬ್ಬ ಗಣ್ಯವ್ಯಕ್ತಿ ಎಂದು ತನ್ನ ವಿಷಯವಾಗಿ ತಾನೇ ಕೊಚ್ಚಿಕೊಂಡಾಗ ಸುಮಾರು ನಾನೂರು ಜನರು ಅವನೊಂದಿಗೆ ಸೇರಿಕೊಂಡರು; ಅವನು ಕೊಲ್ಲಲ್ಪಟ್ಟದ್ದರಿಂದ ಅವನಿಗೆ ವಿಧೇಯರಾಗಿ ದ್ದವರೆಲ್ಲರೂ ಚದರಿಹೋಗಿ ಇಲ್ಲವಾದರು.
ಈ ಮನುಷ್ಯನ ತರುವಾಯ ಖಾನೇಷುಮಾರಿಯ ದಿನ ಗಳಲ್ಲಿ ಗಲಿಲಾಯದ ಯೂದನು ಎದ್ದು ತನ್ನನ್ನು ಹಿಂಬಾಲಿಸುವಂತೆ ಅನೇಕ ಜನರನ್ನು ಸೆಳೆದನು. ಆದರೆ ಅವನು ಸಹ ನಾಶವಾದನು. ಅವನಿಗೆ ವಿಧೇಯರಾದ ವರೆಲ್ಲರೂ ಚದರಿಹೋದರು ಎಂದು ಹೇಳಿದನು.