English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Acts Chapters

Acts 11 Verses

1 ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬದನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.
2 ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿ ಯವರು ಅವನ ಕೂಡ ವಿವಾದಿಸುತ್ತಾ--
3 ನೀನು ಸುನ್ನತಿಯಿಲ್ಲದವರ ಬಳಿಗೆ ಹೋಗಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಕೇಳಿದರು.
4 ಆದರೆ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿ ನಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ--
5 ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿ ದ್ದಾಗ ಪರವಶನಾಗಿದ್ದ ನನಗೆ ಒಂದು ದರ್ಶನ ವಾಯಿತು; ಅದೇನಂದರೆ, ಆಕಾಶದಿಂದ ನಾಲ್ಕು ಮೂಲೆಗಳಿಂದ ದೊಡ್ಡ ಜೋಳಿಗೆಯಂತಿರುವ ಒಂದು ಪಾತ್ರೆಯು ಇಳಿಸಲ್ಪಟ್ಟು ನನ್ನ ಬಳಿಗೆ ಬಂತು.
6 ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೊಡಿದಾಗ ಭೂಮಿಯ ಮೇಲಿರುವ ನಾಲ್ಕು ಕಾಲು ಗಳುಳ್ಳ ಪಶುಗಳನ್ನೂ ಕಾಡು ಮೃಗಗಳನ್ನೂ ಹರಿ ದಾಡುವ ಕ್ರಿಮಿಕೀಟಗಳನ್ನೂ ಆಕಾಶದ ಪಕ್ಷಿಗಳನ್ನೂ ಕಂಡೆನು.
7 ಆಗ--ಪೇತ್ರನೇ, ಎದ್ದು ಕೊಂದು ತಿನ್ನು ಎಂದು ನನಗೆ ಹೇಳುವ ಧ್ವನಿಯನ್ನು ಕೇಳಿದೆನು.
8 ಆದರೆ ನಾನು--ಕರ್ತನೇ, ಹಾಗಲ್ಲ; ಹೊಲೆಯಾದ ದ್ದಾಗಲೀ ಅಶುದ್ಧವಾದದ್ದಾಗಲೀ ಯಾವದೂ ಯಾವ ಸಮಯದಲ್ಲೂ ನನ್ನ ಬಾಯೊಳಗೆ ಸೇರಲಿಲ್ಲ ಎಂದು ಹೇಳಿದೆನು;
9 ಅದಕ್ಕೆ--ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆಯೆನ್ನಬಾರದು ಎಂಬದಾಗಿ ತಿರಿಗಿ ಆಕಾಶದಿಂದ ಧ್ವನಿಯು ನನಗೆ ಉತ್ತರಕೊಟ್ಟಿತು.
10 ಇದು ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
11 ಆಗ ಇಗೋ, ತಕ್ಷಣವೇ ಮೂರು ಮಂದಿ ಮನುಷ್ಯರು ನಾನಿದ್ದ ಮನೆಗೆ ಆಗಲೇ ಬಂದಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.
12 ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗಬೇಕೆಂದು ಆತ್ಮನು ನನಗೆ ಅಪ್ಪಣೆಕೊಟ್ಟನು; ಇದಲ್ಲದೆ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು; ನಾವು ಆ ಮನುಷ್ಯನ ಮನೆಯೊಳಕ್ಕೆ ಸೇರಿದೆವು.
13 ಅವನು ತನ್ನ ಮನೆಯಲ್ಲಿ ಒಬ್ಬ ದೂತನನ್ನು ಕಂಡನೆಂದು ನಮಗೆ ತಿಳಿಸಿದನು. ಆ ದೂತನು ಅವನಿಗೆ--ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು;
14 ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
15 ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
16 ಆಗ--ಯೋಹಾನನು ನಿಜವಾಗಿಯೂ ನೀರಿನ ಬಾಪ್ತಿಸ್ಮ ಮಾಡಿಸಿದನು; ನೀವಾದರೋ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಕರ್ತನು ಹೇಳಿದ ಮಾತು ನನ್ನ ನೆನಪಿಗೆ ಬಂತು.
17 ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ದೇವರು ಕೊಟ್ಟ ದಾನಕ್ಕೆ ಸರಿಯಾದ ದಾನವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಎಷ್ಟರವನು ಎಂದು ಹೇಳಿದನು.
18 ಅವರು ಇವುಗಳನ್ನು ಕೇಳಿ ಮೌನವಾಗಿದ್ದು ದೇವ ರನ್ನು ಕೊಂಡಾಡಿ--ಹಾಗಾದರೆ ಅನ್ಯ ಜನಾಂಗದವ ರಿಗೂ ಜೀವಕ್ಕಾಗಿ ಮಾನಸಾಂತರವನ್ನು ದೇವರು ದಯಪಾಲಿಸಿದ್ದಾನೆ ಎಂದು ಹೇಳಿದರು.
19 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೊದವರು ಯೆಹೂದ್ಯರಿಗೇ ಹೊರತು ಮತ್ತಾ ರಿಗೂ ವಾಕ್ಯವನ್ನು ಸಾರದೆ ಫೊಯಿನಿಕೆ ಕುಪ್ರ ಅಂತಿ ಯೋಕ್ಯಗಳ ವರೆಗೂ ಸಂಚರಿಸಿದರು.
20 ಅವರಲ್ಲಿ ಕೆಲವರು ಕುಪ್ರ ಮತ್ತು ಕುರೇನ್ಯದವರಾಗಿದ್ದರು. ಅವರು ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾಗಿ ಸಾರಿದರು.
21 ಕರ್ತನ ಹಸ್ತವು ಅವರೊಂದಿಗಿದ್ದದ ರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿ ಕೊಂಡರು.
22 ಈ ವಿಷಯಗಳ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
23 ಅವನು ಬಂದು ದೇವರ ಕೃಪೆಯನ್ನು ನೋಡಿ ಸಂತೋಷಪಟ್ಟು ದೃಢಮನಸ್ಸಿನಿಂದ ಕರ್ತನನ್ನು ಅಂಟಿ ಕೊಂಡಿರಬೇಕೆಂದು ಅವರೆಲ್ಲರನ್ನು ಪ್ರೇರೇಪಿಸಿದನು.
24 ಅವನು ಒಳ್ಳೆಯವನಾಗಿದ್ದು ಪವಿತ್ರಾತ್ಮನಿಂದಲೂ ನಂಬಿಕೆಯಿಂದಲೂ ತುಂಬಿದವನಾಗಿದ್ದನು; ಬಹು ಮಂದಿ ಕರ್ತನನ್ನು ಸೇರಿಕೊಂಡರು.
25 ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೊರಟುಹೊಗಿ
26 ಅವನನ್ನು ಕಂಡುಕೊಂಡು ಅಂತಿ ಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶ ಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.
27 ಆ ದಿವಸಗಳಲ್ಲಿ ಪ್ರವಾದಿಗಳಾಗಿದ್ದವರು ಯೆರೂ ಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
28 ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಆತ್ಮನಿಂದ ಸೂಚಿಸಿದನು. ಅದು ಕ್ಲೌದ್ಯ ಕೈಸರನ ದಿವಸಗಳಲ್ಲಿ ಉಂಟಾಯಿತು.
29 ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.
30 ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
×

Alert

×