ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
ಅವನು ತನ್ನ ಪಿತೃಗಳು ಮಾಡಿದ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
ಆಗ ಮೆನಹೇಮನು ತಿಪ್ಸಹನ್ನೂ ಅದರಲ್ಲಿ ಇದ್ದ ಎಲ್ಲರನ್ನೂ ತಿರ್ಚ ಮೊದಲುಗೊಂಡು ಅದರ ಮೇರೆಗಳನ್ನೂ ಹಾಳುಮಾಡಿದನು. ಅವರು ತಮ್ಮ ಬಾಗಲುಗಳನ್ನು ತನಗೆ ತೆರೆಯದೆ ಇದ್ದದರಿಂದ ಅವರನ್ನು ಹೊಡೆದನು; ಅದರಲ್ಲಿರುವ ಗರ್ಭಿಣಿಯರನ್ನೆಲ್ಲಾ ಸೀಳಿಸಿದನು.
ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.
ಮೆನಹೇಮನು ಈ ಹಣವನ್ನು ಇಸ್ರಾಯೇಲಿನವರಿಂದ ಬರಮಾಡಿದನು. ಹೇಗಂದರೆ, ಅಶ್ಶೂರದ ಅರಸನಿಗೆ ಕೊಡಲು ಎಲ್ಲಾ ಐಶ್ವರ್ಯವಂತ ರಿಂದ ತಲಾ ಐವತ್ತು ಬೆಳ್ಳಿ ಶೆಕೇಲುಗಳನ್ನು ತೆಗೆದು ಕೊಂಡನು. ಆದದರಿಂದ ಅಶ್ಶೂರದ ಅರಸನು ದೇಶ ದಲ್ಲಿ ನಿಲ್ಲದೆ ತಿರಿಗಿ ಹೋದನು.
ಆದರೆ ಅವನ ಅಧಿಪತಿಯಾದಂಥ, ರೆಮಲ್ಯನ ಮಗನಾದ ಪೆಕಹನು ಅವನ ಮೇಲೆ ಒಳಸಂಚು ಮಾಡಿ ಅರ್ಗೋಬನ್ನೂ ಅರ್ಯೇಯನ್ನೂ ಗಿಲ್ಯಾದಿನ ಜನರಲ್ಲಿ ಐವತ್ತು ಮಂದಿಯನ್ನೂ ತನ್ನ ಸಂಗಡ ಕೂಡಿಸಿ ಕೊಂಡು ಸಮಾರ್ಯದಲ್ಲಿ ಅರಸನಿಗಿದ್ದ ಅರಮನೆ ಯೊಳಗೆ ಅವನನ್ನು ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.