ಯೆರೂಸಲೇಮಿನ ನಿವಾಸಿಗಳು ಅವನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯ ನನ್ನು ಅರಸನಾಗಿ ಮಾಡಿದರು. ದಂಡಿಗೆ ಬಂದ ಅರಬ್ಬಿಯರ ಗುಂಪು ಹಿರಿಯರನ್ನೆಲ್ಲಾ ಕೊಂದುಹಾಕಿ ದರು. ಹೀಗೆ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಿದನು.
ಅವನು ಇವರ ಯೋಚನೆಯ ಪ್ರಕಾರ ನಡೆದು ಗಿಲ್ಯಾದಿನಲ್ಲಿರುವ ರಾಮೋತಿನ ಬಳಿಯಲ್ಲಿ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧ ಮಾಡಲು ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗ ನಾದ ಯೆಹೋರಾಮನ ಸಂಗಡ ಹೋದನು.
ಆದರೆ ಅರಾಮ್ಯರು ಯೆಹೋರಾಮನನ್ನು ಹೊಡೆದರು. ಅವನು ಅರಾಮಿನ ಹಜಾಯೇಲನ ಸಂಗಡ ಯುದ್ಧ ಮಾಡುವಾಗ ರಾಮದಲ್ಲಿ ಗಾಯಗಳನ್ನು ಹೊಂದಿದ್ದ ರಿಂದ ಇಜ್ರೇಲಿನಲ್ಲಿ ಗುಣಮಾಡಿಕೊಳ್ಳಲು ತಿರಿಗಿದನು. ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಇಜ್ರೇಲಿನಲ್ಲಿರುವ ಅಹಾ ಬನ ಮಗನಾದ ಯೆಹೋರಾಮನನ್ನು ನೋಡಲು ಬಂದನು; ಯಾಕಂದರೆ ಇವನು ರೋಗಸ್ಥನಾಗಿದ್ದನು.
ಯೆಹೋರಾಮನ ಬಳಿಗೆ ಅವನು ಬಂದದ್ದರಿಂದ ಅಹಜ್ಯನಿಗೆ ಉಂಟಾದ ನಷ್ಟವು ದೇವರಿಂದ ಆಯಿತು. ಹೇಗಂದರೆ ಅವನು ಬಂದ ತರುವಾಯ ಕರ್ತನು ಅಹಾಬನ ಮನೆಯನ್ನು ಕಡಿದು ಬಿಡಲು ಅಭಿಷೇಕಿಸಿದ ನಿಂಷಿಯ ಮಗನಾದ ಯೇಹುವಿಗೆ ವಿರೋಧವಾಗಿ ಯೆಹೋರಾಮನ ಸಂಗಡ ಹೊರಟನು.
ಇದಲ್ಲದೆ ಅವನು ಅಹಜ್ಯನನ್ನು ಹುಡುಕಿದನು; ಅವನು ಸಮಾರ್ಯದಲ್ಲಿ ಬಚ್ಚಿಟ್ಟು ಕೊಂಡದ್ದರಿಂದ ಅವನನ್ನು ಹಿಡಿದು ಯೇಹು ವಿನ ಬಳಿಗೆ ಅವನನ್ನು ತಕ್ಕೊಂಡು ಬಂದು ಅವನನ್ನು ಕೊಂದುಹಾಕಿ ಹೂಣಿಟ್ಟರು; ಯಾಕಂದರೆ ಇವನು ತನ್ನ ಪೂರ್ಣಹೃದಯದಿಂದ ಕರ್ತನನ್ನು ಹುಡುಕಿದ ಯೆಹೋಷಾಫಾಟನ ಮಗನು ಅಂದರು. ಹೀಗೆ ರಾಜ್ಯ ವನ್ನು ಸ್ಥಿರಪಡಿಸಲು ಅಹಜ್ಯನ ಮನೆಗೆ ಶಕ್ತಿ ಇಲ್ಲದೆ ಹೋಯಿತು.
ಆದರೆ ಅರಸನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ತಕ್ಕೊಂಡು ಕೊಂದುಹಾಕಲ್ಪಟ್ಟ ಅರಸನ ಮಕ್ಕಳ ಮಧ್ಯದಿಂದ ಅವನನ್ನು ಕದ್ದುಕೊಂಡು ಅವನನ್ನೂ ಅವನ ದಾದಿ ಯನ್ನೂ ಮಲಗುವ ಕೋಣೆಯಲ್ಲಿ ಇರಿಸಿದಳು. ಹೀಗೆ ಅತಲ್ಯಳು ಅವನನ್ನು ಕೊಲ್ಲದ ಹಾಗೆ ಅರಸನಾದ ಯೆಹೋರಾಮನ ಕುಮಾರ್ತೆಯಾಗಿರುವ ಯಾಜ ಕನಾದ ಯೆಹೋಯಾದನ ಹೆಂಡತಿಯಾಗಿರುವ ಯೆಹೋಷಬತಳು ಬಚ್ಚಿಟ್ಟಳು.