English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

2 Chronicles Chapters

2 Chronicles 22 Verses

1 ಯೆರೂಸಲೇಮಿನ ನಿವಾಸಿಗಳು ಅವನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯ ನನ್ನು ಅರಸನಾಗಿ ಮಾಡಿದರು. ದಂಡಿಗೆ ಬಂದ ಅರಬ್ಬಿಯರ ಗುಂಪು ಹಿರಿಯರನ್ನೆಲ್ಲಾ ಕೊಂದುಹಾಕಿ ದರು. ಹೀಗೆ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಿದನು.
2 ಅಹಜ್ಯನು ಆಳಲು ಆರಂಭಿಸಿದಾಗ ನಾಲ್ವತ್ತೆರಡು ವರುಷದವ ನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿ ದನು. ಅವನ ತಾಯಿಯ ಹೆಸರು ಅತಲ್ಯಳು; ಈಕೆಯು ಒಮ್ರಿಯ ಮಗಳಾಗಿದ್ದಳು.
3 ಅವನು ಅಹಾಬನ ಮನೆ ಯವರ ಮಾರ್ಗಗಳಲ್ಲಿ ನಡೆದನು. ಹೇಗಂದರೆ ದುಷ್ಟ ನಾಗಿರುವದಕ್ಕೆ ಅವನ ತಾಯಿ ಅವನಿಗೆ ಆಲೋಚನೆ ಹೇಳುವವಳಾಗಿದ್ದಳು.
4 ಆದಕಾರಣ ಅವನು ಅಹಾಬನ ಮನೆಯವರ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನ ತಂದೆ ಸತ್ತ ತರುವಾಯ ಇವರು ಅವರ ನಾಶನಕ್ಕೆ ಅವನ ಸಲಹೆಗಾರರಾಗಿದ್ದರು.
5 ಅವನು ಇವರ ಯೋಚನೆಯ ಪ್ರಕಾರ ನಡೆದು ಗಿಲ್ಯಾದಿನಲ್ಲಿರುವ ರಾಮೋತಿನ ಬಳಿಯಲ್ಲಿ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧ ಮಾಡಲು ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗ ನಾದ ಯೆಹೋರಾಮನ ಸಂಗಡ ಹೋದನು.
6 ಆದರೆ ಅರಾಮ್ಯರು ಯೆಹೋರಾಮನನ್ನು ಹೊಡೆದರು. ಅವನು ಅರಾಮಿನ ಹಜಾಯೇಲನ ಸಂಗಡ ಯುದ್ಧ ಮಾಡುವಾಗ ರಾಮದಲ್ಲಿ ಗಾಯಗಳನ್ನು ಹೊಂದಿದ್ದ ರಿಂದ ಇಜ್ರೇಲಿನಲ್ಲಿ ಗುಣಮಾಡಿಕೊಳ್ಳಲು ತಿರಿಗಿದನು. ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಇಜ್ರೇಲಿನಲ್ಲಿರುವ ಅಹಾ ಬನ ಮಗನಾದ ಯೆಹೋರಾಮನನ್ನು ನೋಡಲು ಬಂದನು; ಯಾಕಂದರೆ ಇವನು ರೋಗಸ್ಥನಾಗಿದ್ದನು.
7 ಯೆಹೋರಾಮನ ಬಳಿಗೆ ಅವನು ಬಂದದ್ದರಿಂದ ಅಹಜ್ಯನಿಗೆ ಉಂಟಾದ ನಷ್ಟವು ದೇವರಿಂದ ಆಯಿತು. ಹೇಗಂದರೆ ಅವನು ಬಂದ ತರುವಾಯ ಕರ್ತನು ಅಹಾಬನ ಮನೆಯನ್ನು ಕಡಿದು ಬಿಡಲು ಅಭಿಷೇಕಿಸಿದ ನಿಂಷಿಯ ಮಗನಾದ ಯೇಹುವಿಗೆ ವಿರೋಧವಾಗಿ ಯೆಹೋರಾಮನ ಸಂಗಡ ಹೊರಟನು.
8 ಯೇಹುವು ಅಹಾಬನ ಮನೆಗೆ ನ್ಯಾಯತೀರಿಸುವಾಗ ಅವನು ಯೆಹೂದ್ಯರ ಪ್ರಧಾನರನ್ನೂ ಅಹಜ್ಯನನ್ನು ಸೇವಿಸು ತ್ತಿರುವ ಅಹಜ್ಯನ ಸಹೋದರರ ಮಕ್ಕಳನ್ನೂ ಹಿಡಿದು ಅವರನ್ನು ಕೊಂದುಹಾಕಿದನು.
9 ಇದಲ್ಲದೆ ಅವನು ಅಹಜ್ಯನನ್ನು ಹುಡುಕಿದನು; ಅವನು ಸಮಾರ್ಯದಲ್ಲಿ ಬಚ್ಚಿಟ್ಟು ಕೊಂಡದ್ದರಿಂದ ಅವನನ್ನು ಹಿಡಿದು ಯೇಹು ವಿನ ಬಳಿಗೆ ಅವನನ್ನು ತಕ್ಕೊಂಡು ಬಂದು ಅವನನ್ನು ಕೊಂದುಹಾಕಿ ಹೂಣಿಟ್ಟರು; ಯಾಕಂದರೆ ಇವನು ತನ್ನ ಪೂರ್ಣಹೃದಯದಿಂದ ಕರ್ತನನ್ನು ಹುಡುಕಿದ ಯೆಹೋಷಾಫಾಟನ ಮಗನು ಅಂದರು. ಹೀಗೆ ರಾಜ್ಯ ವನ್ನು ಸ್ಥಿರಪಡಿಸಲು ಅಹಜ್ಯನ ಮನೆಗೆ ಶಕ್ತಿ ಇಲ್ಲದೆ ಹೋಯಿತು.
10 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತನೆಂದು ಕಂಡಾಗ ಅವಳು ಎದ್ದು ಯೆಹೂದನ ಮನೆಯ ರಾಜ್ಯದ ಸಂತಾನವನ್ನೆಲ್ಲಾ ನಾಶಮಾಡಿದಳು.
11 ಆದರೆ ಅರಸನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ತಕ್ಕೊಂಡು ಕೊಂದುಹಾಕಲ್ಪಟ್ಟ ಅರಸನ ಮಕ್ಕಳ ಮಧ್ಯದಿಂದ ಅವನನ್ನು ಕದ್ದುಕೊಂಡು ಅವನನ್ನೂ ಅವನ ದಾದಿ ಯನ್ನೂ ಮಲಗುವ ಕೋಣೆಯಲ್ಲಿ ಇರಿಸಿದಳು. ಹೀಗೆ ಅತಲ್ಯಳು ಅವನನ್ನು ಕೊಲ್ಲದ ಹಾಗೆ ಅರಸನಾದ ಯೆಹೋರಾಮನ ಕುಮಾರ್ತೆಯಾಗಿರುವ ಯಾಜ ಕನಾದ ಯೆಹೋಯಾದನ ಹೆಂಡತಿಯಾಗಿರುವ ಯೆಹೋಷಬತಳು ಬಚ್ಚಿಟ್ಟಳು.
12 ಹೀಗೆಯೇ ಇವನು ಅವರ ಸಂಗಡ ದೇವರ ಆಲಯದಲ್ಲಿ ಆರು ವರುಷ ಬಚ್ಚಿಟ್ಟುಕೊಂಡಿದ್ದನು. ಆದರೆ ಅತಲ್ಯಳು ದೇಶದ ಮೇಲೆ ಆಳುತ್ತಿದ್ದಳು.
×

Alert

×