ಆಗ ಸೌಲನು ಎದ್ದು ಜೀಫ್ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು.
ದಾವೀ ದನು ಎದ್ದು ಸೌಲನು ಇಳುಕೊಂಡಿದ್ದ ಸ್ಥಳಕ್ಕೆ ಬಂದನು; ಸೌಲನೂ ಅವನ ದಂಡಿನ ನಾಯಕನಾಗಿ ರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಆದರೆ ಸೌಲನು ಮಧ್ಯದಲ್ಲಿ ಮಲಗಿದ್ದನು; ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು.
ಹಾಗೆಯೇ ದಾವೀದನೂ ಅಬೀಷೈಯೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಇಗೋ, ಸೌಲನು ಕಂದಕದೊಳಗೆ ಮಲಗಿ ನಿದ್ರೆಮಾಡು ತ್ತಿದ್ದನು; ಅವನ ಈಟಿಯು ಅವನ ತಲೆದಿಂಬಿನ ಬಳಿ ಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲೂ ಅಬ್ನೇರನೂ ಜನರೂ ಮಲಗಿದ್ದರು.
ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು.
ನಾವು ಹೋಗೋಣ ಅಂದನು. ದಾವೀದನು ಸೌಲನ ತಲೆ ದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ ನೀರಿನ ತಂಬಿಗೆ ಯನ್ನೂ ತೆಗೆದುಕೊಂಡ ಮೇಲೆ ಅವರು ಹೊರಟು ಹೋದರು. ಒಬ್ಬರಾದರೂ ನೋಡಿದ್ದಿಲ್ಲ; ಅರಿತಿದ್ದಿಲ್ಲ; ಯಾರೂ ಎಚ್ಚತ್ತಿರಲಿಲ್ಲ. ಯಾಕಂದರೆ ಕರ್ತನಿಂದ ಅಗಾಧ ನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರೂ ನಿದ್ರೆ ಮಾಡುತ್ತಿದ್ದರು.
ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಇರುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು ಜನರಿಗೂ ನೇರನ ಮಗನಾದ ಅಬ್ನೇರನಿಗೂ ಎದು ರಾಗಿ ಕೂಗಿ ಹೇಳಿದ್ದೇನಂದರೆ--
ಆಗ ದಾವೀ ದನು ಅಬ್ನೇರನಿಗೆ ಹೇಳಿದ್ದೇನಂದರೆ -- ನೀನು ಪರಾಕ್ರಮಶಾಲಿ ಅಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಯಾಕಂದರೆ ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವದಕ್ಕೆ ಬಂದಿದ್ದನು.
ನೀನು ಮಾಡಿದ ಈ ಕಾರ್ಯ ಒಳ್ಳೇದಲ್ಲ. ಕರ್ತನ ಜೀವ ದಾಣೆ--ಕರ್ತನ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದರಿಂದ ಮರಣಕ್ಕೆ ನೀವು ಪಾತ್ರರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು ಅಂದನು.
ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
ಆದದರಿಂದ ಕರ್ತನ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಯಾಕಂದರೆ ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ ಇಸ್ರಾಯೇಲಿನ ಅರಸನು ಒಂದು ಕೀಟವನ್ನು ಹುಡು ಕಲು ಹೊರಟನು ಎಂಬದೇ.
ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು.
ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.
ಇಗೋ, ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ ಹಾಗೆಯೇ ನನ್ನ ಪ್ರಾಣವು ಕರ್ತನ ದೃಷ್ಟಿಗೆ ದೊಡ್ಡದಾಗಿರಲಿ. ಆತನು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ ಅಂದನು.
ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.