ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಅವನು ಬುದ್ಧಿ ಯಿಂದ ಕಾರ್ಯವನ್ನು ನಡಿಸುತ್ತಿದ್ದನು. ಆದದರಿಂದ ಸೌಲನು ಅವನನ್ನು ಯುದ್ಧಸ್ಥರ ಮೇಲೆ ಅಧಿಕಾರಿಯಾಗ ಮಾಡಿದನು. ಅವನು ಸಮಸ್ತ ಜನರ ದೃಷ್ಟಿಯಲ್ಲಿಯೂ ಸೌಲನ ಎಲ್ಲಾ ಸೇವಕರ ದೃಷ್ಟಿಯಲ್ಲಿಯೂ ಒಪ್ಪಿಗೆಯಾಗಿದ್ದನು.
ಸೌಲನಿಗೆ ಬಹು ಕೋಪವಾಯಿತು; ಆ ಮಾತು ಅವನಿಗೆ ವ್ಯಸನಕರವಾಗಿತ್ತು. ಇವರು ದಾವೀದ ನಿಗೆ ಹತ್ತು ಸಾವಿರಗಳನ್ನು ಹೇಳಿದ್ದಾರೆ; ನನಗೆ ಸಾವಿರ ಗಳನ್ನು ಹೇಳಿದ್ದಾರೆ; ಅವನಿಗೆ ರಾಜ್ಯವಲ್ಲದೆ ಇನ್ನು ಹೆಚ್ಚು ಬೇಕಾದದ್ದೇನು ಅಂದನು.
ಮಾರನೆ ದಿವಸದಲ್ಲಿ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಮನೆಯ ಮಧ್ಯ ದಲ್ಲಿ ಪ್ರವಾದಿಸುತ್ತಿದ್ದನು (ಕಾಲಜ್ಞಾನ). ಆಗ ದಾವೀ ದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
ಆಗ ಸೌಲನು--ನನ್ನ ಕೈ ಅವನ ಮೇಲೆ ಇರಬಾರದು; ಆದರೆ ಫಿಲಿಷ್ಟಿಯರ ಕೈ ಅವನ ಮೇಲೆ ಇರಲಿ ಅಂದುಕೊಂಡು ದಾವೀದನಿಗೆ--ಇಗೋ, ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು; ನೀನು ನನಗೋಸ್ಕರ ಪರಾಕ್ರಮಶಾಲಿ ಯಾಗಿದ್ದು ಕರ್ತನ ಯುದ್ಧಗಳನ್ನು ನಡಿಸು ಅಂದನು.
ಅವನಿಗೆ ಉರುಲಾಗಿರುವ ಹಾಗೆಯೂ ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡನು. ಆದದರಿಂದ ಸೌಲನು ದಾವೀದನಿಗೆ--ನೀನು ಎರಡನೆ ಯವಳಿಂದ ಈ ಹೊತ್ತು ಅಳಿಯನಾಗು ಅಂದನು.
ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು--ನಾನು ದರಿದ್ರನೂ ಅಲ್ಪನಾಗಿ ಎಣಿಸಲ್ಪ ಟ್ಟವನೂ ಆಗಿರುವಾಗ ನಾನು ಅರಸನಿಗೆ ಅಳಿಯ ನಾಗುವದು ನಿಮ್ಮ ಕಣ್ಣುಗಳಿಗೆ ಅಲ್ಪವಾಗಿ ಕಾಣು ತ್ತದೆಯೋ ಅಂದನು.
ಆದರೆ ಸೌಲನು-- ದಾವೀದ ನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ--ನೀವು ದಾವೀದನಿಗೆ--ಅರಸನು ಯಾವ ತೆರವನ್ನೂ ಅಪೇಕ್ಷಿಸದೆ ತನ್ನ ಶತ್ರು ಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸು ತ್ತಾನೆಂದು ಹೇಳಿರಿ ಅಂದನು.
ಆದದರಿಂದ ನೇಮಿಸಿದ ದಿವಸಗಳು ಈಡೇರುವದಕ್ಕಿಂತ ಮುಂಚೆ ಅವನು ಎದ್ದು ತನ್ನ ಜನರನ್ನು ಕರಕೊಂಡು ಹೋಗಿ ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಕೊಂದು ಅವರ ಮುಂದೊಗ ಲುಗಳನ್ನು ತಂದು ತಾನು ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಪೂರ್ಣವಾಗಿ ಒಪ್ಪಿಸಿದನು. ಆಗ ಸೌಲನು ತನ್ನ ಕುಮಾರ್ತೆಯಾದ ವಿಾಕಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.