ಸೊಲೊಮೋನನು ಐಗುಪ್ತದ ಅರಸ ನಾದ ಫರೋಹನ ಸಂಗಡ ಬಂಧುತ್ವ ಮಾಡಿ ಫರೋಹನ ಮಗಳನ್ನು ತಕ್ಕೊಂಡನು. ಅವನು ತನ್ನ ಮನೆಯನ್ನೂ ಕರ್ತನ ಆಲಯವನ್ನೂ ಯೆರೂಸ ಲೇಮಿಗೆ ಸುತ್ತಲೂ ಗೋಡೆಯನ್ನೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ.
ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ.
ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ
ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.
ಆಗ ಸೊಲೊಮೋನನು ಎಚ್ಚತ್ತಾಗ ಇಗೋ, ಅದು ಸ್ವಪ್ನವಾಗಿತ್ತು, ಅವನು ಯೆರೂ ಸಲೇಮಿಗೆ ಬಂದು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತನ್ನ ಸೇವಕರಿಗೆ ಔತಣ ಮಾಡಿಸಿದನು.
ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.
ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು.