ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.
ಹಾಗೆಯೆ ಅವನೆದ್ದು ಚಾರೆಪ್ತಾಕ್ಕೆ ಹೋಗಿ ಪಟ್ಟಣದ ಬಾಗಿಲ ಬಳಿಗೆ ಬಂದಾಗ ಇಗೋ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು--ನೀನು ದಯಮಾಡಿ ಕುಡಿ ಯುವದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತಕ್ಕೊಂಡುಬಾ ಅಂದನು.
ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು.
ಆಗ ಎಲೀಯನು ಅವಳಿಗೆ--ಭಯಪಡಬೇಡ; ನೀನು ಹೋಗಿ ನಿನ್ನ ಮಾತಿನ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿ ಮಾಡಿ, ನನ್ನ ಬಳಿಗೆ ತಕ್ಕೊಂಡು ಬಾ; ತರು ವಾಯ ನಿನಗೂ ನಿನ್ನ ಮಗನಿಗೂ ಸಿದ್ದಮಾಡಿಕೋ.
ಕರ್ತನು ಭೂಮಿಯ ಮೇಲೆ ಮಳೆಯನ್ನು ಕೊಡುವ ವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ; ತಂಬಿಗೆಯಲ್ಲಿರುವ ಎಣ್ಣೆಯು ಮುಗಿಯುವದಿಲ್ಲ ಎಂದು ಇಸ್ರಾಯೇಲಿನ ದೇವರಾದ ಕರ್ತನು ಹೇಳು ತ್ತಾನೆ ಅಂದನು.
ಆಗ ಎಲೀಯನು ಹುಡುಗನನ್ನು ಎತ್ತಿಕೊಂಡು ಉಪ್ಪರಿಗೆ ಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು ಅವನನ್ನು ಅವನ ತಾಯಿಗೆ ಕೊಟ್ಟನು. ಅವನುನೋಡು, ನಿನ್ನ ಮಗನು ಜೀವದಿಂದಿದ್ದಾನೆಂದು ಎಲೀ ಯನು ಹೇಳಿದನು.