1
|
ಇಸ್ಸಾಕಾರನ ಕುಮಾರರು--ತೋಲನು ಪೂವನುಯಾ ಶೂಬನು ಶಿಮ್ರೋನನುಈ ನಾಲ್ಕು ಮಂದಿ. |
2
|
ತೋಲನ ಕುಮಾರರು ಉಜ್ಜೀಯು ರೆಫಾಯನು ಯೆರೀಯೇಲನು ಯಹ್ಮೈಯು ಇಬ್ಸಾಮನು ಸಮುವೇಲನು. ಇವರು ತಮ್ಮ ತಂದೆ ಯಾದ ತೋಲನ ಮನೆಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧ ಪರಾಕ್ರಮ ಶಾಲಿಗಳಾಗಿದ್ದರು; ದಾವೀದನ ದಿವಸಗಳಲ್ಲಿ ಅವರ ಲೆಕ್ಕ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಆಗಿತ್ತು. |
3
|
ಉಜ್ಜೀಯನ ಕುಮಾರನು ಇಜ್ಯಹ್ಯಾಹನು. ಇಜ್ಯಹ್ಯಾಹನ ಕುಮಾರರು -- ವಿಾಕಾಯೇಲನು, ಓಬದ್ಯನು, ಯೋವೇಲನು, ಇಷ್ಷೀಯನು--ಈ ಐದು ಮಂದಿಯು; ಇವರೆಲ್ಲರು ಮುಖ್ಯಸ್ಥರಾಗಿದ್ದರು. |
4
|
ಇವರ ಸಂಗಡ ಅವರ ವಂಶಗಳ ಪ್ರಕಾರವೂ ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ ಮೂವತ್ತಾರು ಸಾವಿರ ಮಂದಿ ಸೈನಿಕರ ಗುಂಪುಗಳಿದ್ದವು; ಯಾಕಂದರೆ ಹೆಂಡತಿಯರು ಮಕ್ಕಳು ಅವರಿಗೆ ಬಹಳ ಮಂದಿ ಇದ್ದರು. |
5
|
ಇಸ್ಸಾಕಾರನ ಕುಟುಂಬಗಳಾಗಿರುವ ಸಹೋ ದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಲ್ಪಟ್ಟ ಯುದ್ಧ ಪರಾಕ್ರಮಶಾಲಿಗಳೆಲ್ಲರೂ ಎಂಭತ್ತೇಳು ಸಾವಿರ ಮಂದಿಯಾಗಿದ್ದರು. |
6
|
ಬೆನ್ಯಾವಿಾನನ ಕುಮಾರರು--ಬೆಳನು, ಬೆಕರನು, ಯೆದೀಯಯೇಲನು--ಈ ಮೂರು ಮಂದಿ. |
7
|
ಬೆಳನ ಕುಮಾರರು--ಎಚ್ಬೋನನು, ಉಜ್ಜೀಯು, ಉಜ್ಜೀಯೇ ಲನು, ಯೆರೀಮೋತನು, ಈರೀಯು--ಈ ಐದು ಮಂದಿ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಇದ್ದು ತಮ್ಮ ವಂಶಾವಳಿಗಳ ಪ್ರಕಾರ ಇಪ್ಪತ್ತೆರಡು ಸಾವಿರದ ಮೂವತ್ತು ನಾಲ್ಕುಮಂದಿ ಲೆಕ್ಕಿಸಲ್ಪಟ್ಟಿದ್ದರು. |
8
|
ಬೆಕರನ ಕುಮಾರರು ಜೆವಿಾರನು, ಯೋವಾಷನು, ಎಲೀಯೆಜೆರನು, ಎಲ್ಯೋವೇನೈ, ಒಮ್ರಿಯು, ಯೇರಿ ಮೋತನು, ಅಬೀಯನು, ಅನಾತೋತನು, ಆಲೆ ಮೆತ್. ಇವರೆಲ್ಲರು ಬೆಕರನ ಕುಮಾರರು. |
9
|
ಇವರ ಲೆಕ್ಕವು ತಮ್ಮ ಪಿತೃಗಳ ಮನೆಯ ಯಜಮಾನರ ವಂಶ ಗಳ ವಂಶಾವಳಿಯ ಪ್ರಕಾರವಾಗಿ ಯುದ್ಧ ಪರಾಕ್ರಮಶಾಲಿಗಳಾದವರು ಇಪ್ಪತ್ತುಸಾವಿರದ ಇನ್ನೂರು ಮಂದಿ. |
10
|
ಯೆದೀಯಯೇಲನ ಕುಮಾರನು ಬಿಲ್ಹಾ ನನು. ಬಿಲ್ಹಾನನ ಕುಮಾರರು--ಯೆಯೂಷನು, ಬೆನ್ಯಾವಿಾನನು, ಏಹೂದನು, ಕೆನಾನನು, ಜೇತಾ ನನು, ತಾರ್ಷೀಷನು, ಅಹೀಷೆಹರನು. |
11
|
ಇವರೆ ಲ್ಲರು ಯೆದೀಯಯೇಲನ ಕುಮಾರರು. ಅವರು ತಮ್ಮ ಪಿತೃಗಳಲ್ಲಿ ಯಜಮಾನರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡ ತಕ್ಕವರು ಹದಿನೇಳು ಸಾವಿರದ ಇನ್ನೂರು ಮಂದಿ ಯಾಗಿದ್ದರು. |
12
|
ಅಹೇರನ ಕುಮಾರರಾದ ಈರನೂ ಹುಶೀ ಮನೂ ಎಂಬವರ ಮಕ್ಕಳು ಶುಪ್ಪೀಮನೂ ಹುಪ್ಪೀ ಮನೂ ಇದ್ದರು. |
13
|
ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು. |
14
|
ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು. |
15
|
ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು. |
16
|
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು. |
17
|
ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು. |
18
|
ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು. |
19
|
ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು. |
20
|
ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು. |
21
|
ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು. |
22
|
ಅವರ ತಂದೆಯಾದ ಎಫ್ರಾಯಾಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ ಅವನ ಸಹೋದರರು ಅವನನ್ನು ಆದರಿಸಲು ಬಂದರು. |
23
|
ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು. |
24
|
ಇವನ ಕುಮಾರ್ತೆಯ ಹೆಸರು ಶೇರಳು; ಇವಳು ಮೇಲಣ ಮತ್ತು ಕೆಳಗಣ ಬೇತ್ಹೋರೋ ನನ್ನೂ, ಉಜ್ಜೇನ್ಶೇರವನ್ನೂ ಕಟ್ಟಿಸಿದಳು. |
25
|
ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು. |
26
|
ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು, |
27
|
ಇವನ ಮಗನು ನೋನನು, ಇವನ ಮಗನು ಯೆಹೋಷುವನು. |
28
|
ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ |
29
|
ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು. |
30
|
ಆಶೇರನ ಕುಮಾರರು--ಇಮ್ನನು, ಇಷ್ವನು, ಇಷ್ವೀ, ಬೆರೀಯನು ಅವರ ಸಹೋದರಿಯಾದ ಸೆರಹಳು. |
31
|
ಬೆರೀಯನ ಕುಮಾರರು--ಹೆಬೆರನು ಮಲ್ಕೀಯೇಲನು; |
32
|
ಇವನು ಬಿರ್ಜೈಯಿತನ ತಂದೆಯು. ಹೆಬೆರನು ಯಫ್ಲೇಟನನ್ನೂ ಶೋಮೇರ ನನ್ನೂ ಹೋತಾಮನನ್ನೂ ಅವರ ಸಹೋದರಿಯಾದ ಶೂವಳನ್ನೂ ಪಡೆದನು. |
33
|
ಯಫ್ಲೇಟನ ಕುಮಾರರು--ಪಾಸಕನು, ಬಿಮ್ಹಾಲನು, ಅಶ್ವಾತನು. ಇವರೇ ಯಫ್ಲೇಟನ ಮಕ್ಕಳು. |
34
|
ಶಮೆರನ ಕುಮಾರರು--ಅಹೀಯು, ರೊಹ್ಗನು, ಹುಬ್ಬನು, ಅರಾಮನು. |
35
|
ಅವನ ಸಹೋದರನಾದ ಹೆಲೆಮನ ಕುಮಾರರು--ಚೋಫಹನು, ಇಮ್ನನು, ಶೇಲೆಷನು, ಆಮಾಲನು. |
36
|
ಚೋಫಹನ ಕುಮಾರರು-- ಸೂಹನು, ಹರ್ನೇಫೆರನು, ಶೂಗಾಲನು, ಬೇರೀಯು, ಇಮ್ರನು, |
37
|
ಬೆಚೆರನು, ಹೋದನು, ಶಮ್ಮನು, ಶಿಲ್ಷನು, ಇತ್ರಾನನು, ಬೇರನು. |
38
|
ಯೆತೆರನ ಕುಮಾ ರರು--ಯೆಫುನ್ನೆಯು, ಪಿಸ್ಪನು, ಅರಾನು, |
39
|
ಉಲ್ಲನ ಕುಮಾರರು--ಆರಹನು, ಹನ್ನೀಯೇಲನು ರಿಚ್ಯನು. |
40
|
ಇವರೆಲ್ಲರು ಆಶೇರನ ಮಕ್ಕಳಾಗಿದ್ದು ತಮ್ಮ ತಂದೆಯ ಮನೆಯಲ್ಲಿ ಯಜಮಾನರಾಗಿಯೂ ಯುದ್ಧಪರಾಕ್ರಮ ಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ ಪ್ರಭುಗಳಲ್ಲಿ ಶ್ರೇಷ್ಠ ರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ಬರೆಯ ಲ್ಪಟ್ಟ ಲೆಕ್ಕದ ಪ್ರಕಾರ ಯುದ್ದಕ್ಕೆ ಸಿದ್ಧವಾದವರು ಇಪ್ಪ ತ್ತಾರು ಸಾವಿರ ಮಂದಿಯಾಗಿದ್ದರು. |
1-Chronicles 7:38 Kannada Language Bible Words basic statistical display
COMING SOON ...