1
|
ಆರೋನನ ಕುಮಾರರಲ್ಲಿ ವರ್ಗಗಳಾಗಿ ವಿಭಾಗಿಸಿದವರು ಇವರೇ. ಆರೋನನ ಕುಮಾರರು--ನಾದಾಬನೂ ಅಬೀಹುವೂ ಎಲ್ಲಾಜಾ ರನೂ ಈತಾಮಾರನೂ; |
2
|
ನಾದಾಬನೂ ಅಬೀಹುವೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದದ ರಿಂದ ಎಲ್ಲಾಜಾರನೂ ಈತಾಮಾರನೂ ಯಾಜಕ ಸೇವೆಮಾಡಿದರು. |
3
|
ಆದದರಿಂದ ದಾವೀದನು ಎಲ್ಲಾ ಜಾರನ ಮಕ್ಕಳಲ್ಲಿ ಚಾದೋಕನಿಗೂ ಈತಾಮಾರನ ಮಕ್ಕಳಲ್ಲಿ ಅಹೀಮೇಲೆಕನಿಗೂ ಅವರ ಸೇವೆಯಲ್ಲಿರುವ ವಿಚಾರಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು. |
4
|
ಈತಾಮಾರನ ಕುಮಾರರಿಗಿಂತ ಎಲ್ಲಾಜಾರನ ಕುಮಾ ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದದರಿಂದ ಅವರು ಹೀಗೆಯೇ ವಿಭಾಗಿಸಲ್ಪಟ್ಟಿದ್ದರು. ಎಲ್ಲಾಜಾರನ ಕುಮಾರ ರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಕುಮಾರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟುಮಂದಿ ಮುಖ್ಯ ಸ್ಥರು. |
5
|
ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು. |
6
|
ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೇಲನ ಮಗನಾದ ಲೇಖಕನಾ ದಂಥ ಶೆಮಾಯನು ಅರಸನ ಮುಂದೆಯೂ ಪ್ರಧಾನ ಯಾಜಕನಾದ ಚಾದೋಕನು, ಎಬ್ಯಾತಾರನ ಮಗ ನಾದ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರ್ಯರ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸ ಬೇಕೆಂದು ನೇಮಿಸಿದರು. ಎಲ್ಲಾ ವರ್ಗಗಳ ಸರತಿ ಯನ್ನು ಚೀಟಿನಿಂದಲೇ ಗೊತ್ತುಮಾಡಿದರು. |
7
|
ಮೊದಲನೇ ಚೀಟು ಯೆಹೋಯಾರೀಬನಿಗೆ ಬಂತು, ಎರಡನೆಯದು ಯೆದಾಯನಿಗೆ |
8
|
ಮೂರನೆ ಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮ ನಿಗೆ, |
9
|
ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾವಿಾನನಿಗೆ, |
10
|
ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ, |
11
|
ಒಂಭತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ, ಹನ್ನೊಂದ ನೆಯದು ಎಲ್ಯಾಷೀಬನಿಗೆ, |
12
|
ಹನ್ನೆರಡನೆಯದು ಯಾಕೀಮನಿಗೆ, ಹದಿಮೂರನೆಯದು ಹುಪ್ಪನಿಗೆ, |
13
|
ಹದಿನಾಲ್ಕನೆಯದು ಎಫೆಬಾಬನಿಗೆ, |
14
|
ಹದಿನೈದನೆ ಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ, |
15
|
ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆ ಯದು ಹಪ್ಪಿಚ್ಚೇಚನಿಗೆ, |
16
|
ಹತ್ತೊಂಭತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ, |
17
|
ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆ ರಡನೆಯದು ಗಾಮೂಲನಿಗೆ, |
18
|
ಇಪ್ಪತ್ತಮೂರನೆ ಯದು ದೆಲಾಯನಿಗೆ, ಇಪ್ಪತ್ತನಾಲ್ಕನೆಯದು ಮಾಜ್ಯ ನಿಗೆ. |
19
|
ಇವೇ ಇಸ್ರಾಯೇಲ್ ದೇವರಾದ ಕರ್ತನು ತಮ್ಮ ತಂದೆಯಾದ ಆರೋನನಿಗೆ ಆಜ್ಞಾಪಿಸಿದ ಹಾಗೆ ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ ಕರ್ತನ ಮನೆಯಲ್ಲಿ ಸೇವೆಮಾಡುವದಕ್ಕೆ ಬರಬೇಕಾದ ಅವರ ನಿಯಮಗಳು. |
20
|
ಲೇವಿಯ ಮಿಕ್ಕಾದ ಕುಮಾರರಲ್ಲಿ ಯಾರಂದರೆ, ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾ ಯೇಲನ ಕುಮಾರರಲ್ಲಿ ಯೆಹ್ದೆಯಾಹನು. |
21
|
ರೆಹಬ್ಯ ನನ್ನು ಕುರಿತು ಏನಂದರೆ, ರೆಹಬ್ಯನ ಕುಮಾರರಲ್ಲಿ ಇಷ್ಷೀಯನು ಮೊದಲನೆಯವನು. |
22
|
ಇಚ್ಹಾರರಲ್ಲಿ ಶೆಲೋಮೊತನು ಮೊದಲನೆಯವನು. ಶೆಲೋಮೊ ತನ ಕುಮಾರರಲ್ಲಿ ಯಹತನು. |
23
|
ಹೆಬ್ರೋನನ ಕುಮಾರರಲ್ಲಿ ಯೆರೀಯನು ಮೊದಲನೆಯವನು, ಎರ ಡನೆಯವನು ಅಮರ್ಯನು, ಮೂರನೆಯವನು ಯಹಜೀಯೇಲನು, ನಾಲ್ಕನೆಯವನು ಯೆಕಮ್ಮಾ ಮನು. |
24
|
ಉಜ್ಜೀಯೇಲನ ಕುಮಾರರಲ್ಲಿ ವಿಾಕನು; ವಿಾಕನ ಕುಮಾರರಲ್ಲಿ ಶಾವಿಾರನು. |
25
|
ವಿಾಕನ ಸಹೋದರನು ಇಷ್ಷೀಯನು; ಇಷ್ಷೀಯನ ಕುಮಾರರಲ್ಲಿ ಜೆಕರ್ಯನು. |
26
|
ಮೆರಾರೀಯ ಕುಮಾರರಲ್ಲಿ ಮಹ್ಲೀ ಯನು ಮೂಷೀಯು; ಯಾಜ್ಯನ ಮಗನು ಬೆನೋ ನನು. |
27
|
ಮೆರಾರೀಯ ಕುಮಾರರಲ್ಲಿ ಯಾಜ್ಯನಿಗೆ ಬೆನೋನನು ಶೋಹಮನು ಜಕ್ಕೂರನು ಇಬ್ರೀಯನು ಎಂಬ ಕುಮಾರರಿದ್ದರು. |
28
|
ಮಹ್ಲೀಯನಿಗೆ ಎಲ್ಲಾಜಾರನು ಹುಟ್ಟಿದನು; ಅವನಿಗೆ ಕುಮಾರರಿಲ್ಲ. |
29
|
ಕೀಷನನ್ನು ಕುರಿತು ಏನಂದರೆ, ಕೀಷನ ಮಗನು ಯೆರಹ್ಮೇಲನು. |
30
|
ಮೂಷೀಯ ಕುಮಾರರು--ಮಹ್ಲೀಯು ಏದೆರನು ಯೆರೀಮೋತನು; ಇವರು ತಮ್ಮ ಪಿತೃಗಳ ಮನೆಯ ಪ್ರಕಾರ ಲೇವಿಯರ ಕುಮಾರರಾಗಿದ್ದರು. |
31
|
ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ ಚಾದೋಕನು ಅಹಿಮೇಲೆಕನು ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ ಆರೋನನ ಕುಮಾರರಾದ ತಮ್ಮ ಸಹೋದರರಿಗೆದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಚಿಕ್ಕ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು. |
1-Chronicles 24:19 Kannada Language Bible Words basic statistical display
COMING SOON ...