ಇದಲ್ಲದೆ ಅರಣ್ಯದಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು; ಅವರ ಮುಖಗಳು ಸಿಂಹದ ಮುಖಗಳ ಹಾಗಿದ್ದವು ಮತ್ತು ಪರ್ವತಗಳ ಮೇಲೆ ಇರುವ ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
ಆಗ ದಾವೀದನು ಅವರನ್ನು ಎದುರು ಗೊಳ್ಳಲು ಹೊರಟುಹೋಗಿ ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದು--ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ ನನ್ನ ಹೃದಯವು ನಿಮ್ಮ ಸಂಗಡ ಏಕವಾಗಿರುವದು. ಆದರೆ ದೋಷವು ನನ್ನ ಕೈಗಳಲ್ಲಿ ಇಲ್ಲದಿರುವಾಗ ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ ನಮ್ಮ ಪಿತೃ ಗಳ ದೇವರು ನೋಡಿ ಗದರಿಸಲಿ ಅಂದನು.
ಆಗ ಆತ್ಮನು ಅದಿಪತಿಗಳ ಮುಖ್ಯಸ್ಥನಾದ ಅಮಸಾಯಿಯ ಮೇಲೆ ಬಂದನು; ಆಗ ಅವನು--ದಾವೀದನೇ, ನಾವು ನಿನ್ನವರು; ಇಷಯನ ಮಗನೇ, ನಾವು ನಿನ್ನ ಕಡೆಯವ ರಾಗಿದ್ದೇವೆ; ಸಮಾಧಾನ, ನಿನಗೆ ಸಮಾಧಾನ; ನಿನ್ನ ಸಹಾಯಕರಿಗೆ ಸಮಾಧಾನ; ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾನೆ ಅಂದನು. ಆಗ ದಾವೀದನು ಅವರನ್ನು ಅಂಗೀಕರಿಸಿ ಅವರನ್ನು ದಂಡಿನ ಅಧಿಪತಿ ಗಳಾಗಿ ಮಾಡಿದನು.
ದಾವೀದನು ಸೌಲನ ಮೇಲೆ ಯುದ್ಧ ಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಮಾಡದೆ ಇದ್ದರು. ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ-- ಅವನು ನಮಗೆ ಮೋಸಮಾಡಿ ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿಕೊಳ್ಳುವನೆಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು.
ಅವನು ಚಿಕ್ಲಗಿಗೆ ಹೋಗುತ್ತಿರು ವಾಗ ಮನಸ್ಸೆಯವರಾದಂಥ, ಮನಸ್ಸೆಯ ಸಹಸ್ರಗಳ ಮೇಲೆ ಅಧಿಪತಿಗಳಾದಂಥ ಅದ್ನನೂ ಯೊಜಾ ಬಾದನೂ ಎದೀಗಯೇಲನೂ ವಿಾಕಾಯೇಲನೂ ಯೋಜಾಬಾದನೂ ಎಲೀಹೂವೂ ಚಿಲ್ಲೆತೈಯೂ ಅವನ ಕಡೆಗೆ ಸೇರಿಕೊಂಡರು.
ಕರ್ತನ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವದಕ್ಕೆ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿ ಕೊಂಡು ಬಂದ ದಂಡುಗಳ ಲೆಕ್ಕವೇನಂದರೆ --
ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲು ಮಾಡತಕ್ಕದ್ದು ಯಾವದೆಂದು ತಿಳಿಯ ತಕ್ಕಂಥ ಕಾಲಗಳ ಪರೀಕ್ಷೆ ತಿಳಿದವರು ಬಂದರು; ಅವರ ಯಜಮಾನರು ಇನ್ನೂರು ಮಂದಿಯಾಗಿದ್ದರು; ಅವರ ಸಹೋದರರೆಲ್ಲರೂ ಇವರ ಆಜ್ಞಾಧೀನರಾ ಗಿದ್ದರು.
ಯೊರ್ದನಿನ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ ಗಾದನವರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದ ಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿಯು.
ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು.