ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ ಗುಂಡು ಬಟ್ಟಲಿನಂತಿದೆ. [*ಬಟ್ಟಲು ಅಥವಾ “ಕೆತ್ತಿದ ಪಾತ್ರೆ” ಉಳಿಯಿಂದ ಕೆತ್ತಿ ಮಾಡಿದ ಪಾತ್ರೆ. ದ್ರಾಕ್ಷಾರಸವನ್ನು ಇದರಲ್ಲಿ ಮಿಶ್ರಣ ಮಾಡಿದ ನಂತರ ಬಟ್ಟಲುಗಳಿಗೆ ಹಾಕುತ್ತಿದ್ದರು. ಚಂದ್ರಬಿಂಬದಂತೆ ಪಾತ್ರೆ ಅಥವಾ “ಅರ್ಧ ಚಂದ್ರಾಕಾರದ ಪಾತ್ರೆ” ಎಂಬರ್ಥವನ್ನೂ ಇದು ಕೊಡಬಲ್ಲದು. ] ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ ಗೋಧಿಯ ರಾಶಿಯಂತಿದೆ.
ನಾನು ಖರ್ಜೂರದ ಮರವನ್ನು ಹತ್ತುವೆನು. ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು. ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ. ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.
ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ. ದ್ರಾಕ್ಷೆಯು ಚಿಗುರಿದೆಯೋ ಅದರ ಹೂವು ಅರಳಿದೆಯೋ ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ. ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.