ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು. ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು. ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
ನಾನು ಬಹು ವ್ಯಸನದಿಂದಿರುವುದೇಕೆ? ನಾನು ಬಹು ಗಲಿಬಿಲಿಗೊಂಡಿರುವುದೇಕೆ? ನಾನು ದೇವರನ್ನೇ ನಿರೀಕ್ಷಿಸುವೆನು. ಆತನೇ ನನಗೆ ರಕ್ಷಕನೂ ದೇವರೂ ಆಗಿರುವುದರಿಂದ ಅತನನ್ನು ಸ್ತುತಿಸುತ್ತಲೇ ಇರುವೆನು.