1
|
ಇವು ರಾಜನಾದ ಲೆಮೂವೇಲನ ಜ್ಞಾನದ ನುಡಿಗಳು. ಅವನ ತಾಯಿಯು ಅವನಿಗೆ ಇವುಗಳನ್ನು ಉಪದೇಶಿಸಿದ್ದಳು. |
2
|
ನೀನು ನನ್ನ ಮಗನು: ನನ್ನ ಪ್ರಿಯ ಮಗನು: ನಾನು ಪ್ರಾರ್ಥಿಸಿ ಪಡೆದುಕೊಂಡ ಮಗನು ನೀನೇ. |
3
|
ನಿನ್ನ ಶಕ್ತಿಯನ್ನು ಹೆಂಗಸರಲ್ಲಿ ವ್ಯರ್ಥಮಾಡಿಕೊಳ್ಳಬೇಡ. ರಾಜನನ್ನು ನಾಶಮಾಡುವವರು ಹೆಂಗಸರುಗಳೇ. ನಿನ್ನನ್ನು ಅವರಲ್ಲಿ ಹಾಳುಮಾಡಿಕೊಳ್ಳಬೇಡ. |
4
|
ಲೆಮೂವೇಲನೇ, ರಾಜರುಗಳು ಮದ್ಯವನ್ನು ಕುಡಿಯುವುದು ಒಳ್ಳೆಯದಲ್ಲ. ಮದ್ಯಪಾನ ಆಳುವವರಿಗೆ ಒಳ್ಳೆಯದಲ್ಲ. |
5
|
ಅವರು ಅತಿಯಾಗಿ ಕುಡಿದು ಕಟ್ಟಳೆಗಳನ್ನು ಮರೆತು ಬಡವರ ಹಕ್ಕುಗಳನ್ನೆಲ್ಲ ರದ್ದುಮಾಡುವರು. |
6
|
ಸಾಯುವವರಿಗೆ ಮದ್ಯವನ್ನು ಕೊಡು. ವ್ಯಥೆಯಲ್ಲಿರುವವರಿಗೆ ಮದ್ಯವನ್ನು ಕೊಡು. |
7
|
ಆಗ ಅವರು ಕುಡಿದು, ತಮ್ಮ ಬಡತನವನ್ನು ಮರೆತು ಬಿಡುವರು, ಅವರು ಕುಡಿದು ತಮ್ಮ ಕಷ್ಟಗಳನ್ನೆಲ್ಲಾ ಮರೆತು ಬಿಡುವರು. |
8
|
ತಮಗೋಸ್ಕರ ಮಾತಾಡಲಾರದ ಜನರಿಗೋಸ್ಕರ ಮಾತಾಡು. ಕಷ್ಟದಲ್ಲಿರುವ ಜನರೆಲ್ಲರ ಹಕ್ಕುಗಳಿಗಾಗಿ ಮಾತಾಡು. |
9
|
ಸತ್ಯವಾದವುಗಳ ಪರವಾಗಿ ನಿಂತುಕೋ. ಜನರಿಗೆಲ್ಲಾ ನ್ಯಾಯವಾದ ತೀರ್ಪನ್ನು ಮಾಡು. ಬಡಜನರ ಮತ್ತು ಕೊರತೆಯಲ್ಲಿರುವವರ ಹಕ್ಕುಗಳನ್ನು ಕಾಪಾಡು. |
10
|
“ಒಳ್ಳೆಯ ಹೆಂಡತಿ” ಯನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ. ಅವಳು ಆಭರಣಕ್ಕಿಂತಲೂ ಹೆಚ್ಚು ಬೆಲೆಬಾಳುವಳು. |
11
|
ಗಂಡನ ನಂಬಿಕೆಗೆ ಆಕೆ ಪಾತ್ರಳು. ಆಕೆಯ ಗಂಡ ಬಡವನಾಗುವುದೇ ಇಲ್ಲ. |
12
|
ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ತನ್ನ ಜೀವಮಾನವೆಲ್ಲಾ ಒಳ್ಳೆಯದನ್ನು ಮಾಡುವಳು. ಆಕೆ ಅವನಿಗೆಂದಿಗೂ ತೊಂದರೆ ಮಾಡುವುದಿಲ್ಲ. |
13
|
ಅವಳು ಬಟ್ಟೆ ತಯಾರಿಸಲು ಉಣ್ಣೆಯನ್ನು ಮತ್ತು ಸೆಣಬಿನ ನಾರನ್ನು ಯಾವಾಗಲೂ ಶೇಖರಿಸುವಳು. |
14
|
ವ್ಯಾಪಾರದ ಹಡಗುಗಳಂತೆ ದೂರದಿಂದ ಬೇಕಾದ ಆಹಾರವನ್ನು ಸಂತೋಷದಿಂದ ಮನೆಗೆ ತರುವಳು. |
15
|
ಇನ್ನೂ ಕತ್ತಲಿರುವಾಗಲೇ ಆಕೆ ಎದ್ದೇಳುವಳು. ಆಕೆ ತನ್ನ ಕುಟುಂಬದವರಿಗೂ ತನ್ನ ಸೇವಕಿಯರಿಗೂ ಊಟ ಕೊಡುವಳು. |
16
|
ಆಕೆ ಜಮೀನನ್ನು ಕೊಂಡುಕೊಳ್ಳುವಳು; ತಾನು ಗಳಿಸಿದ ಹಣವನ್ನು ದ್ರಾಕ್ಷಿತೋಟಕ್ಕೆ ಉಪಯೋಗಿಸುವಳು. |
17
|
ಆಕೆ ತುಂಬ ಕಷ್ಟಪಟ್ಟು ಕೆಲಸಮಾಡುವಳು. ಆಕೆ ಬಲವಾಗಿದ್ದಾಳೆ; ತನ್ನ ಕೆಲಸಗಳನ್ನೆಲ್ಲಾ ಮಾಡಲು ಶಕ್ತಳಾಗಿದ್ದಾಳೆ. |
18
|
ಆಕೆ ತಾನು ತಯಾರಿಸಿದ ವಸ್ತುಗಳನ್ನು ಒಳ್ಳೆಯ ಲಾಭಕ್ಕೆ ಮಾರುವಳು. ರಾತ್ರಿ ಬಹುಹೊತ್ತಿನವರೆಗೂ ಆಕೆ ಕೆಲಸ ಮಾಡುವಳು. |
19
|
ಆಕೆ ತಾನೇ ದಾರವನ್ನು ತಯಾರಿಸುವಳು; ತಾನೇ ಬಟ್ಟೆಯನ್ನು ನೇಯುವಳು. |
20
|
ಆಕೆ ಯಾವಾಗಲೂ ಬಡವರಿಗೆ ಕೊಡುವಳು; ಕೊರತೆಯಲ್ಲಿರುವ ಜನರಿಗೆ ಸಹಾಯಮಾಡುವಳು. |
21
|
ಹಿಮಸುರಿಯುವಾಗ, ಆಕೆ ತನ್ನ ಕುಟುಂಬದ ಬಗ್ಗೆ ಚಿಂತಿಸಬೇಕಿಲ್ಲ; ಆಕೆ ಅವರೆಲ್ಲರಿಗೆ ಬೆಚ್ಚಗಿರುವ ಬಟ್ಟೆಗಳನ್ನು ಕೊಟ್ಟಿದ್ದಾಳೆ. |
22
|
ಆಕೆ ಹೊದಿಕೆಗಳನ್ನು ತಯಾರಿಸುವಳು. ಆಕೆಯು ಶ್ರೇಷ್ಠವಾದ ನಾರಗಸೆಯ ದಾರದಿಂದ ಮಾಡಿದ ಬಟ್ಟೆಗಳನ್ನು ಧರಿಸಿಕೊಳ್ಳುವಳು. |
23
|
ಜನರು ಆಕೆಯ ಗಂಡನನ್ನು ಗೌರವಿಸುವರು. ಅವನು ದೇಶದ ಹಿರಿಯರುಗಳಲ್ಲಿ ಒಬ್ಬನಾಗಿರುವನು. |
24
|
ಆಕೆ ಒಳ್ಳೆಯ ವ್ಯಾಪಾರ ಮಾಡುವಳು; ಉಡುಪುಗಳನ್ನೂ ನಡುಪಟ್ಟಿಗಳನ್ನೂ ತಯಾರಿಸಿ ಮಾರುವಳು. |
25
|
ಆಕೆಯು ಶಕ್ತಿಯನ್ನೂ ಗಾಂಭೀರ್ಯವನ್ನೂ ಪ್ರದರ್ಶಿಸುವಳು; ಹರ್ಷದಿಂದ ಭವಿಷ್ಯತ್ತನ್ನು ಎದುರುನೋಡುವಳು. |
26
|
ಆಕೆಯು ಜ್ಞಾನದಿಂದ ಮಾತಾಡುವಳು; ಪ್ರೀತಿಯಿಂದ ಸದುಪದೇಶ ಮಾಡುವಳು. |
27
|
ಆಕೆಯು ಚಟುವಟಿಕೆಯಿಂದಿದ್ದು ಗೃಹ ಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು. |
28
|
ಮಕ್ಕಳು ಎದ್ದುನಿಂತು ಆಕೆಯನ್ನು ಅಭಿನಂದಿಸುವರು. ಗಂಡನು ಅವಳನ್ನು ಹೊಗಳುವನು. |
29
|
“ಅನೇಕ ಹೆಂಗಸರು ಮೆಚ್ಚಿಕೆಗೆ ಪಾತ್ರವಾದ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಅತ್ಯುತ್ತಮಳು” ಎಂದು ಆಕೆಯ ಗಂಡನು ಹೊಗಳುವನು. |
30
|
ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು. ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು. |
31
|
ಆಕೆ ತನಗೆ ಯೋಗ್ಯವಾದ ಪ್ರತಿಫಲವನ್ನು ಹೊಂದಬೇಕು. ಆಕೆಯ ಕಾರ್ಯಗಳಿಗಾಗಿ ಜನರೆಲ್ಲರೂ ಆಕೆಯನ್ನು ಬಹಿರಂಗವಾಗಿ ಸನ್ಮಾನಿಸಬೇಕು. |
Proverbs 31:3 Kannada Language Bible Words basic statistical display
COMING SOON ...