Indian Language Bible Word Collections
Proverbs 18:24
Proverbs Chapters
Proverbs 18 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Proverbs Chapters
Proverbs 18 Verses
1
|
ಸ್ನೇಹಭಾವವಿಲ್ಲದವನು ಮಾಡುವುದೆಲ್ಲ ಸ್ವಾರ್ಥತೆಯಿಂದಲೇ, ಪ್ರತಿಯೊಂದು ಒಳ್ಳೆಯದರ ವಿರುದ್ಧವಾಗಿ ಅವನು ವಾದಿಸುತ್ತಾನೆ. |
2
|
ಮೂಢನಿಗೆ ಅರ್ಥಮಾಡಿಕೊಳ್ಳಲು ಇಷ್ಟವಿಲ್ಲ. ಅವನು ತನ್ನ ಆಲೋಚನೆಗಳನ್ನೇ ಹೇಳಬಯಸುತ್ತಾನೆ. |
3
|
ನೀನು ಕೇಡುಮಾಡಿದರೆ ಜನರು ನಿನ್ನನ್ನು ಇಷ್ಟಪಡುವುದಿಲ್ಲ; ನಾಚಿಕೆಕರವಾದದ್ದನ್ನು ಮಾಡಿದರೆ ನಿನ್ನನ್ನು ಪರಿಹಾಸ್ಯ ಮಾಡುವರು. |
4
|
ಬಾಯಿಮಾತುಗಳು ಆಳವಾದ ನೀರುಗಳಂತಿರಲು ಸಾಧ್ಯ; ಆದರೆ ಜ್ಞಾನದ ಮೂಲವು ನುಗ್ಗಿಬರುವ ತೊರೆಯಂತಿದೆ. |
5
|
ಅಪರಾಧಿಗೆ ಪಕ್ಷಪಾತ ಮಾಡುವುದು ಸರಿಯಲ್ಲ; ನಿರಪರಾಧಿಗೆ ಅನ್ಯಾಯ ಮಾಡುವುದು ಸರಿಯಲ್ಲ. |
6
|
ಮೂಢನು ವಾದಕ್ಕೆ ಇಳಿಯುತ್ತಾನೆ; ಅವನ ಮಾತುಗಳು ಜಗಳವನ್ನು ಎಬ್ಬಿಸಿ, ಏಟಿಗಾಗಿ ಕೇಳಿಕೊಳ್ಳುತ್ತವೆ. |
7
|
ಮೂಢನು ಮಾತಿನಲ್ಲಿ ತನ್ನನ್ನೇ ನಾಶಪಡಿಸಿಕೊಳ್ಳುವನು. ಅವನ ಮಾತುಗಳೇ ಅವನಿಗೆ ಬಲೆಯಾಗುತ್ತವೆ. |
8
|
ಜನರಿಗೆ ಹರಟೆಮಾತನ್ನು ಕೇಳಲು ಇಷ್ಟ. ಹರಟೆ ಮಾತುಗಳು ರುಚಿಕರವಾದ ಆಹಾರದಂತಿವೆ. |
9
|
ಸೋಮಾರಿಯು ನಾಶಮಾಡುವ ವ್ಯಕ್ತಿಯಂತಿದ್ದಾನೆ. |
10
|
ಯೆಹೋವನ ಹೆಸರು ಬಲವಾದ ಗೋಪುರದಂತಿದೆ. ಒಳ್ಳೆಯವರು ಅದರೊಳಗೆ ಓಡಿಹೋಗಿ ಸುರಕ್ಷಿತವಾಗಿರುವರು. |
11
|
ಐಶ್ವರ್ಯವು ತಮ್ಮನ್ನು ಬಲವಾದ ಕೋಟೆಯಂತೆ ಕಾಪಾಡುತ್ತದೆ ಎಂಬುದು ಐಶ್ವರ್ಯವಂತರ ಭಾವನೆ. |
12
|
ಗರ್ವಿಯು ಬೇಗನೆ ಹಾಳಾಗುವನು; ದೀನನಾದರೋ ಸನ್ಮಾನವನ್ನು ಹೊಂದುವನು. |
13
|
ಗಮನವಿಟ್ಟು ಕೇಳದೆ ಉತ್ತರಿಸುವವನು ಮೂಢನೇ ಸರಿ; ಅವನು ನಾಚಿಕೆಗೆ ಒಳಗಾಗುವನು. |
14
|
ಅಸ್ವಸ್ಥನನ್ನು ಅವನ ಮನಸ್ಸು ಜೀವಂತವಾಗಿಡಬಲ್ಲದು. ಆದರೆ ಮುರಿದ ಆತ್ಮವನ್ನು ಯಾರು ಸಹಿಸಿಕೊಳ್ಳಬಲ್ಲರು? |
15
|
ಜ್ಞಾನಿಗೆ ಹೆಚ್ಚು ಕಲಿತುಕೊಳ್ಳುವುದಕ್ಕೆ ಇಷ್ಟ; ಆದ್ದರಿಂದ ಅವನು ಗಮನವಿಟ್ಟು ಕೇಳುವನು. |
16
|
ಪ್ರಮುಖನನ್ನು ಭೇಟಿಯಾಗಬೇಕಿದ್ದರೆ, ಅವನಿಗೆ ಒಂದು ಉಡುಗೊರೆಯನ್ನು ಕೊಡು. ಆಗ ನೀನು ಅವನನ್ನು ಸುಲಭವಾಗಿ ಭೇಟಿಯಾಗಬಹುದು. |
17
|
ಮೊದಲು ತನ್ನ ವಾದವನ್ನು ಮಂಡಿಸುವವನು ಯಾವಾಗಲೂ ನೀತಿವಂತನಂತೆ ಕಾಣುತ್ತಾನೆ. ಆದರೆ ಪ್ರತಿವಾದಿ ಎದ್ದಮೇಲೆ ಅವನ ನಿಜಪರೀಕ್ಷೆ ಆಗುವುದು. |
18
|
ಬಲಿಷ್ಠರಾದ ಇಬ್ಬರು ವಾದಮಾಡುತ್ತಿರುವಾಗ ನಿರ್ಧಾರಕ್ಕಾಗಿ ಚೀಟುಹಾಕಿದರೆ ಅವರ ಜಗಳ ಶಮನವಾಗುತ್ತದೆ. |
19
|
ಅವಮಾನಿತನಾದ ಸಹೋದರನನ್ನು ಗೆದ್ದುಕೊಳ್ಳುವುದು ಕೋಟೆಯುಳ್ಳ ಪಟ್ಟಣವನ್ನು ಗೆದ್ದುಕೊಳ್ಳುವುದಕ್ಕಿಂತಲೂ ಕಷ್ಟ, ಜಗಳಗಳು ಅರಮನೆಯ ಬಾಗಿಲಿನಂತೆ ಜನರನ್ನು ಪ್ರತ್ಯೇಕಗೊಳಿಸುತ್ತದೆ. |
20
|
ಒಬ್ಬನು ತಾನು ಹೇಳಿದ ಒಳ್ಳೆಯದಕ್ಕೇ ಆಗಲಿ ಕೆಟ್ಟದ್ದಕ್ಕೇ ಆಗಲಿ ಪ್ರತಿಫಲವನ್ನು ಪಡೆಯಲೇಬೇಕು. |
21
|
ಒಬ್ಬನ ಮಾತುಗಳು ಜೀವವನ್ನು ಉಳಿಸಬಲ್ಲವು ಅಥವಾ ಮರಣವನ್ನು ತರಬಲ್ಲವು. ಜನರು ತಮ್ಮ ಮಾತಿನ ಫಲವನ್ನು ಅನುಭವಿಸಲೇಬೇಕು. |
22
|
ಹೆಂಡತಿಯುಳ್ಳವನು ಸಂತೋಷವನ್ನೇ ಪಡೆದುಕೊಂಡಿದ್ದಾನೆ; ಯೆಹೋವನು ಅವನ ಬಗ್ಗೆ ಸಂತೋಷಪಡುವನು. |
23
|
ಬಡವನು ವಿನಯದಿಂದ ಬೇಡಿಕೊಳ್ಳುವನು; ಐಶ್ವರ್ಯವಂತನು ಬಿರುಸಾಗಿ ಉತ್ತರಕೊಡುವನು. |
24
|
ಒಬ್ಬನಿಗೆ ಬಹಳ ಮಂದಿ ಸ್ನೇಹಿತರಿದ್ದರೆ, ಅದು ಅವನನ್ನು ನಾಶಮಾಡಬಹುದು. ಆದರೆ ನಿಜವಾದ ಸ್ನೇಹಿತನು ಸಹೋದರನಿಗಿಂತಲೂ ನಂಬಿಗಸ್ತನಾಗಿರುವನು. |