“ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
“ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ.
ಆಗ ನೀವು ದುಷ್ಟಜನರ ಮೇಲೆ ನಡೆದುಕೊಂಡು ಹೋಗುವಿರಿ; ಅವರು ನಿಮ್ಮ ಕಾಲುಗಳ ಕೆಳಗೆ ಬೂದಿಯಂತಿರುವರು. ನ್ಯಾಯತೀರ್ಪಿನ ಸಮಯದಲ್ಲಿ ನಾನು ಹಾಗೆ ಮಾಡುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
“ನನ್ನ ಸೇವಕನಾದ ಮೋಶೆಯು ಕಟ್ಟಳೆಗಳನ್ನು ಅನುಸರಿಸಲು ಮರೆಯಬೇಡಿ. ಹೋರೇಬ್ ಬೆಟ್ಟದಲ್ಲಿ ನಾನು ಆ ನ್ಯಾಯವಿಧಿಗಳನ್ನು ಅವನಿಗೆ ಕೊಟ್ಟೆನು. ಆ ಕಟ್ಟಳೆಗಳೆಲ್ಲಾ ಇಸ್ರೇಲ್ ಜನರಿಗಾಗಿ ಇರುವದು.”