ಯಾಜಕನು ಸ್ವಲ್ಪ ರಕ್ತವನ್ನು ಧೂಪವೇದಿಕೆಯ ಮೂಲೆಗಳಿಗೆ ಹಚ್ಚಬೇಕು. (ಈ ವೇದಿಕೆಯು ಯೆಹೋವನ ಸನ್ನಿಧಿಯಲ್ಲಿರುವ ದೇವದರ್ಶನಗುಡಾರದಲ್ಲಿದೆ.) ಯಾಜಕನು ಹೋರಿಯ ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿಯಬೇಕು. (ಈ ವೇದಿಕೆಯು ದೇವದರ್ಶನಗುಡಾರದ ಬಾಗಿಲಲ್ಲಿ ಇರುತ್ತದೆ.)
ಅದರ ಎರಡು ಮೂತ್ರಪಿಂಡಗಳನ್ನೂ ಅವುಗಳ ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತೆಗೆಯಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನೂ ತೆಗೆಯಬೇಕು.
ಯಾಜಕನು ಈ ಭಾಗಗಳನ್ನು ಸಮಾಧಾನಯಜ್ಞ ಸಮರ್ಪಣೆಯಲ್ಲಿ ಹೋರಿಯ ಭಾಗಗಳನ್ನು ಅರ್ಪಿಸುವ ರೀತಿಯಲ್ಲಿಯೇ ಅರ್ಪಿಸಬೇಕು. ಯಾಜಕನು ಪಶುವಿನ ಭಾಗಗಳನ್ನು ಸರ್ವಾಂಗಹೋಮಮಾಡುವ ವೇದಿಕೆಯ ಮೇಲೆ ಹೋಮ ಮಾಡಬೇಕು.
(11-12) ಆದರೆ ಯಾಜಕನು ಹೋರಿಯ ಚರ್ಮವನ್ನು, ಒಳಗಿನ ಭಾಗಗಳನ್ನು, ದೇಹದ ಕಲ್ಮಶವನ್ನು, ಎಲ್ಲಾ ಮಾಂಸವನ್ನು ಮತ್ತು ತಲೆಕಾಲುಗಳನ್ನು ಹೊರಗೆ ತೆಗೆದುಕೊಂಡು ಪಾಳೆಯದ ಹೊರಗೆ ಬೂದಿಯನ್ನು ಸುರಿಯುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಗೆಯ ಮೇಲಿಟ್ಟು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಬೂದಿಯನ್ನು ಸುರಿಯುವ ಸ್ಥಳದಲ್ಲಿಯೇ ಅದನ್ನು ಸುಡಬೇಕು.
ಬಳಿಕ ಯಾಜಕನು ರಕ್ತದಲ್ಲಿ ಸ್ವಲ್ಪವನ್ನು ವೇದಿಕೆಯ ಮೂಲೆಗಳಲ್ಲಿ ಹಾಕಬೇಕು. (ಈ ವೇದಿಕೆಯು ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇರುತ್ತದೆ.) ಯಾಜಕನು ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿದುಬಿಡಬೇಕು. (ಈ ವೇದಿಕೆಯು ದೇವದರ್ಶನ ಗುಡಾರದ ಬಾಗಿಲಲ್ಲಿ ಇರುತ್ತದೆ.)
ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು.
ಯಾಜಕನು ಈ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ, ಆ ಮೊದಲನೆಯ ಹೋರಿಯನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಅದನ್ನು ಸುಡಬೇಕು. ಇದು ಇಡೀ ಸಮೂಹದ ಪಾಪವನ್ನು ಪರಿಹಾರ ಮಾಡುವ ಸಮರ್ಪಣೆಯಾಗಿದೆ.
ಯಾಜಕನು ಪಾಪಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮಮಾಡುವ ವೇದಿಕೆಯ ಮೂಲೆಗಳಿಗೆ [*ಮೂಲೆಗಳಿಗೆ ಅಕ್ಷರಶಃ, “ಯಜ್ಞವೇದಿಕೆಯ ಕೊಂಬುಗಳಿಗೆ.”] ಹಚ್ಚಬೇಕು. ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದು,
ಹೋತದ ಕೊಬ್ಬನ್ನೆಲ್ಲಾ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಸಮಾಧಾನಯಜ್ಞವಾಗಿದೆ. ಕೊಬ್ಬನ್ನು ಹೋಮಮಾಡುವಂತೆ ಅದನ್ನು ಹೋಮಮಾಡಬೇಕು. ಹೀಗೆ ಯಾಜಕನು ಅಧಿಪತಿಯನ್ನು ಶುದ್ಧಗೊಳಿಸುವನು. ಆಗ ದೇವರು ಆ ಅಧಿಪತಿಯನ್ನು ಕ್ಷಮಿಸುವನು.
ಆ ವ್ಯಕ್ತಿ ತನ್ನ ಪಾಪದ ಕುರಿತು ತಿಳಿದುಕೊಂಡರೆ, ಆಗ ಅವನು ಅಂಗದೋಷವಿಲ್ಲದ ಒಂದು ಆಡನ್ನು ತರಬೇಕು. ಅದು ಅವನ ಪಾಪಪರಿಹಾರಕ ಯಜ್ಞವಾಗಿದೆ. ಅವನು ತಾನು ಮಾಡಿದ ಪಾಪಕ್ಕಾಗಿ ಆಡನ್ನು ತರಬೇಕು.
ಬಳಿಕ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಆಡಿನ ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು.
ಯಾಜಕನು ಸಮಾಧಾನಯಜ್ಞಗಳಲ್ಲಿ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಆಡಿನ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಯೆಹೋವನಿಗೆ ಸುಗಂಧವಾಸನೆಯ ಹೋಮವಾಗಿ ವೇದಿಕೆಯ ಮೇಲೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
ಯಾಜಕನು ಪಾಪಪರಿಹಾರಕಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಕುರಿಮರಿಯ ರಕ್ತವನ್ನೆಲ್ಲಾ ವೇದಿಕೆಯ ಬುಡದಲ್ಲಿ ಸುರಿಯಬೇಕು.
ಯಾಜಕನು ಸಮಾಧಾನಯಜ್ಞಗಳಲ್ಲಿ ಕುರಿಮರಿಯ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಈ ಕುರಿಮರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸುವ ಸಮರ್ಪಣೆಯಂತೆ ವೇದಿಕೆಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.