1
|
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: |
2
|
“ಇಸ್ರೇಲರಿಗೆ ಹೀಗೆ ಹೇಳು: ಒಬ್ಬ ಸ್ತ್ರೀಯು ಬಸುರಾಗಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಅವಳ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆಯೇ ಅಶುದ್ಧಳಾಗಿರುವಳು. |
3
|
ಎಂಟನೆಯ ದಿನದಲ್ಲಿ ಗಂಡುಮಗುವಿಗೆ ಸುನ್ನತಿ ಮಾಡಬೇಕು. |
4
|
ಆಮೇಲೆ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗಲು ಮೂವತ್ತುಮೂರು ದಿನಗಳು ಹಿಡಿಯುವುದು. ಆಕೆ ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ಆಕೆಯ ಶುದ್ಧೀಕರಣ ಪೂರ್ತಿಯಾಗುವವರೆಗೆ ಆಕೆ ಪವಿತ್ರಸ್ಥಳವನ್ನು ಪ್ರವೇಶಿಸಬಾರದು. |
5
|
ಆದರೆ ಸ್ತ್ರೀಯು ಹೆಣ್ಣುಮಗುವಿಗೆ ಜನ್ಮವಿತ್ತರೆ, ಅವಳು ಆಕೆಯ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆ ಎರಡು ವಾರಗಳವರೆಗೆ ಅಶುದ್ಧಳಾಗಿರುವಳು. ಆಕೆಯು ರಕ್ತಸ್ರಾವದಿಂದ ಶುದ್ಧಳಾಗಲು ಅರವತ್ತಾರು ದಿನಗಳು ಹಿಡಿಯುವವು. |
6
|
“ಶುದ್ಧೀಕರಣ ಸಮಯ ಪೂರ್ತಿಯಾದ ನಂತರ ಹೆಣ್ಣುಮಗುವಿನ ಅಥವಾ ಗಂಡುಮಗುವಿನ ತಾಯಿಯು ವಿಶೇಷ ಯಜ್ಞಗಳನ್ನು ದೇವದರ್ಶನಗುಡಾರದ ಬಾಗಿಲ ಬಳಿಗೆ ತಂದು ಅವುಗಳನ್ನು ಯಾಜಕನಿಗೆ ಕೊಡಬೇಕು. ಆಕೆಯು ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಕುರಿಮರಿಯನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಬೆಳವಕ್ಕಿಯನ್ನಾಗಲಿ ಅಥವಾ ಪಾರಿವಾಳದ ಮರಿಯನ್ನಾಗಲಿ ತರಬೇಕು. |
7
|
[This verse may not be a part of this translation] |
8
|
[This verse may not be a part of this translation] |
Leviticus 12:5 Kannada Language Bible Words basic statistical display
COMING SOON ...