1
|
ಯೆಹೋವನು ಮೋಶೆ ಆರೋನರಿಗೆ ಹೀಗಂದನು: |
2
|
“ಇಸ್ರೇಲರಿಗೆ ಹೇಳಬೇಕಾದದ್ದೇನೆಂದರೆ, ನೀವು ಈ ಪಶುಗಳನ್ನು ತಿನ್ನಬಹುದು: |
3
|
ಕಾಲ್ಗೊರಸು ಸೀಳಿರುವ ಮತ್ತು ಮೆಲಕು ಹಾಕುವ ಮಾಂಸವನ್ನು ತಿನ್ನಬಹುದು. |
4
|
[This verse may not be a part of this translation] |
5
|
[This verse may not be a part of this translation] |
6
|
[This verse may not be a part of this translation] |
7
|
ಇನ್ನು ಕೆಲವು ಪಶುಗಳ ಕಾಲ್ಗೊರಸುಗಳು ಸೀಳಿರುತ್ತವೆ. ಆದರೆ ಅವು ಮೆಲಕು ಹಾಕುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಹಂದಿಗಳ ಗೊರಸುಗಳು ಸೀಳಿರುತ್ತವೆ. ಆದರೆ ಮೆಲಕು ಹಾಕುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ. |
8
|
ಅವುಗಳ ಮಾಂಸವನ್ನು ತಿನ್ನಕೂಡದು. ಅವುಗಳ ಮೃತಶರೀರಗಳನ್ನು ಸಹ ಮುಟ್ಟಬಾರದು. ಅವು ನಿಮಗೆ ಅಶುದ್ಧ! |
9
|
“ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುವ ಜಲಪ್ರಾಣಿಗೆ ರೆಕ್ಕೆಯಿದ್ದು ಮೈಯೆಲ್ಲಾ ಪರೆಪರೆಯಿದ್ದರೆ ನೀವು ಅದನ್ನು ತಿನ್ನಬಹುದು. |
10
|
[This verse may not be a part of this translation] |
11
|
[This verse may not be a part of this translation] |
12
|
ನೀರಿನಲ್ಲಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ ಅದು ತಿನ್ನುವುದಕ್ಕೆ ಅಯೋಗ್ಯವಾಗಿದೆ. |
13
|
“ನಿಷಿದ್ಧವಾದ ಈ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಾರದು: ಗರುಡ, ಬೆಟ್ಟದ ಹದ್ದು, ಕ್ರೌಂಚ, |
14
|
ಹದ್ದು, ಎಲ್ಲಾ ವಿಧವಾದ ಗಿಡುಗ, |
16
|
ಉಷ್ಟ್ರಪಕ್ಷಿ, ಉಲೂಕ, ಕಡಸಮುದ್ರಾಹಾರದ ಬಗ್ಗೆ ನಿಯಮಗಳು ಲ್ಹಕ್ಕಿ ಎಲ್ಲಾ ವಿಧವಾದ ಡೇಗೆ, |
17
|
ಗೂಬೆ, ಹೆಗ್ಗೂಬೆ, ಸಮುದ್ರಪಕ್ಷಿ, |
18
|
ನೀರುಕೋಳಿ, ರಣಹದ್ದು, ನೀರುಕಾಗೆ, |
19
|
ಕೊಕ್ಕರೆ, ಸಕಲ ವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ. |
20
|
“ಕ್ರಿಮಿಕೀಟಗಳು ರೆಕ್ಕೆಗಳುಳ್ಳದ್ದಾಗಿ ನಾಲ್ಕು ಕಾಲುಗಳಲ್ಲಿ ಹರಿದಾಡುವುದಾಗಿದ್ದರೆ ಅವು ನಿಮಗೆ ನಿಷಿದ್ಧವಾಗಿವೆ. ಆ ಕ್ರಿಮಿಕೀಟಗಳನ್ನು ತಿನ್ನಕೂಡದು. |
21
|
ಆದರೆ ಕೀಟಗಳು ನೆಲದ ಮೇಲೆ ಕುಪ್ಪಳಿಸುವುದಕ್ಕೋಸ್ಕರ ಕೀಲುಗಳುಳ್ಳ ಕಾಲುಗಳನ್ನು ಹೊಂದಿದ್ದರೆ ಅವುಗಳನ್ನು ನೀವು ತಿನ್ನಬಹುದು. |
22
|
ಡತೆಗಳನ್ನು, ರೆಕ್ಕೆಗಳುಳ್ಳ ಎಲ್ಲಾ ವಿಧದ ಮಿಡತೆಗಳನ್ನು, ಎಲ್ಲಾ ವಿಧವಾದ ಚಿಟ್ಟೆಮಿಡತೆಗಳನ್ನು, ಎಲ್ಲಾ ವಿಧವಾದ ಸಣ್ಣ ಮಿಡತೆಗಳನ್ನು ಸಹ ತಿನ್ನಬಹುದು. |
23
|
“ಆದರೆ ರೆಕ್ಕೆಗಳಿದ್ದು ನಾಲ್ಕು ಕಾಲುಗಳಿರುವ ಬೇರೆ ಎಲ್ಲಾ ಕ್ರಿಮಿಕೀಟಗಳನ್ನು ನೀವು ತಿನ್ನಬಾರದು. |
24
|
ಆ ಕ್ರಿಮಿಕೀಟಗಳು ನಿಮ್ಮನ್ನು ಅಶುದ್ಧ ಮಾಡುತ್ತವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು. |
25
|
ಯಾವನಾದರೂ ಆ ಸತ್ತ ಕೀಟಗಳಲ್ಲಿ ಒಂದನ್ನು ಎತ್ತಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದ ತನಕ ಅಶುದ್ಧನಾಗಿರುವನು. |
26
|
[This verse may not be a part of this translation] |
27
|
[This verse may not be a part of this translation] |
28
|
ಯಾವನಾದರೂ ಅವುಗಳ ಹೆಣಗಳನ್ನು ಎತ್ತಿದರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಆ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. |
29
|
“ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧ; ಮುಂಗುಸಿ, ಇಲಿ, ಎಲ್ಲಾ ವಿಧವಾದ ದೊಡ್ಡಹಲ್ಲಿ, |
30
|
ಹಾವರಾಣಿ, ಮೊಸಳೆ, ಹಲ್ಲಿ, ಬಸವನಹುಳ, ಚಿಟ್ಟಿಲಿ, |
31
|
ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು. |
32
|
၆ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೂ ಸತ್ತು, ಯಾವುದೇ ವಸ್ತುವಿನ ಮೇಲೆ ಬಿದ್ದರೆ, ಆಗ ಆ ವಸ್ತುವು ಅಶುದ್ಧವಾಗುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಶೋಕಬಟ್ಟೆಯಾಗಲಿ ಅದು ಎಂಥದ್ದಾಗಿದ್ದರೂ ಕೆಲಸಕ್ಕೆ ಉಪಯುಕ್ತವಾಗಿದ್ದರೂ ಅದನ್ನು ನೀರಿನಲ್ಲಿ ಹಾಕಬೇಕು. ಅದು ಸಾಯಂಕಾಲದವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು. |
33
|
ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೊಂದು ಸತ್ತು ಮಣ್ಣಿನ ಬೋಗುಣಿಗೆ ಬಿದ್ದರೆ, ಆಗ ಆ ಬೋಗುಣಿಯಲ್ಲಿ ಇರುವುದೆಲ್ಲಾ ಅಶುದ್ಧವಾಗುವುದು. ಆ ಬೋಗುಣಿಯನ್ನು ನೀವು ಒಡೆದುಹಾಕಬೇಕು. |
34
|
ಅಶುದ್ಧವಾದ ಮಣ್ಣಿನ ಬೋಗುಣಿಯಿಂದ ನೀರು ಯಾವುದೇ ಆಹಾರಕ್ಕೆ ತಾಗಿದರೆ, ಆ ಆಹಾರವು ಅಶುದ್ಧವಾಗುವುದು. ಅಶುದ್ಧವಾದ ಬೋಗುಣಿಯಲ್ಲಿ ಯಾವುದೇ ಪಾನದ್ರವ್ಯವಿದ್ದರೂ ಅದು ಅಶುದ್ಧವಾಗುವುದು. |
35
|
ಸತ್ತ ಪ್ರಾಣಿಯ ಯಾವುದೇ ಭಾಗ ಯಾವುದೇ ವಸ್ತುವಿನ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗಿದೆ. ಅದು ಮಣ್ಣಿನ ಒಲೆಯಾಗಿದ್ದರೂ ಮಡಿಕೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಆ ವಸ್ತುಗಳು ಇನ್ನೆಂದಿಗೂ ಶುದ್ಧವಾಗಿರುವುದಿಲ್ಲ. ಅವು ನಿಮಗೆ ಯಾವಾಗಲೂ ಅಶುದ್ಧವಾಗಿರುವವು. |
36
|
“ಒರತೆಯಾಗಲಿ ನೀರನ್ನು ಪಡೆಯುವ ಬಾವಿಯಾಗಲಿ ಶುದ್ಧವಾಗಿರುವುದು. ಆದರೆ ಯಾವನಾದರೂ ಅಶುದ್ಧ ಪ್ರಾಣಿಗಳ ಹೆಣವನ್ನು ಮುಟ್ಟಿದರೆ, ಅವನು ಅಶುದ್ಧನಾಗುವನು. |
37
|
ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗವು ನೆಡುವುದಕ್ಕೆ ಇಟ್ಟಿರುವ ಬೀಜದ ಮೇಲೆ ಬಿದ್ದರೂ ಆ ಬೀಜ ಶುದ್ಧವಾಗಿಯೇ ಇರುತ್ತದೆ. |
38
|
ಆದರೆ ನೀರು ಹಾಕಿ ನೆನಸಿದ ಬೀಜಗಳ ಮೇಲೆ ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗ ಬಿದ್ದರೆ, ಆ ಬೀಜಗಳು ನಿಮಗೆ ಅಶುದ್ಧವಾಗಿವೆ. |
39
|
“ಅಲ್ಲದೆ ನೀವು ಮಾಂಸಾಹಾರಕ್ಕಾಗಿ ಉಪಯೋಗಿಸುವ ಯಾವುದೇ ಪ್ರಾಣಿ ಸತ್ತರೆ, ಅದನ್ನು ಮುಟ್ಟುವ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. |
40
|
ಈ ಪ್ರಾಣಿಯ ಮಾಂಸವನ್ನು ತಿನ್ನುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸತ್ತ ಪ್ರಾಣಿಯನ್ನು ಎತ್ತುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. |
41
|
“ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೆಲ್ಲ ಯೆಹೋವನು ನಿಮಗೆ ನಿಷಿದ್ಧಗೊಳಿಸಿದ್ದಾನೆ. ನೀವು ಅವುಗಳ ಮಾಂಸವನ್ನು ತಿನ್ನಬಾರದು. |
42
|
ಹೊಟ್ಟೆಯ ಮೇಲೆ ತೆವಳಿಕೊಂಡು ಹೋಗುವ ಜಂತುವನ್ನು ಅಥವಾ ತನ್ನ ನಾಲ್ಕು ಕಾಲುಗಳಲ್ಲಿ ನಡೆಯುವ ಜಂತುವನ್ನು ಅಥವಾ ಅನೇಕ ಕಾಲುಗಳುಳ್ಳ ಜಂತುಗಳನ್ನು ನೀವು ತಿನ್ನಬಾರದು. |
43
|
ಆ ಜಂತುಗಳು ನಿಮ್ಮನ್ನು ಹೊಲೆ ಮಾಡದಿರಲಿ. ನೀವು ಅಶುದ್ಧರಾಗಬಾರದು. |
44
|
ಯಾಕೆಂದರೆ, ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ, ಆದ್ದರಿಂದ ನೀವೂ ಪರಿಶುದ್ಧರಾಗಿರಬೇಕು. ಹರಿದಾಡುವ ಆ ಜಂತುಗಳಿಂದ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. |
45
|
ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಯೆಹೋವನೇ ನಾನು. ನೀವು ನನ್ನ ವಿಶೇಷ ಜನರಾಗಿರಬೇಕೆಂದು ಮತ್ತು ನಾನು ನಿಮ್ಮ ದೇವರಾಗಿರಬೇಕೆಂದು ನಿಮ್ಮನ್ನು ಕರೆದುಕೊಂಡು ಬಂದೆನು. ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು.” |
46
|
ಎಲ್ಲಾ ಸಾಕುಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲಿರುವ ಇತರ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. ಸಮುದ್ರದಲ್ಲಿರುವ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. |
47
|
ಅಶುದ್ಧವಾದ ಮತ್ತು ಶುದ್ಧವಾದ ಪ್ರಾಣಿಗಳ ಕುರಿತು ತಿಳಿದುಕೊಳ್ಳಲು ನಿಮಗೆ ಈ ನಿಯಮಗಳು ಸಹಾಯಕವಾಗಿವೆ. ಜನರು ಯಾವ ಪ್ರಾಣಿಗಳ ಮಾಂಸವನ್ನು ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದೆಂದು ಈ ನಿಯಮಗಳು ತಿಳಿಸುತ್ತವೆ. |
Leviticus 11:39 Kannada Language Bible Words basic statistical display
COMING SOON ...