Indian Language Bible Word Collections
Job 6:27
Job Chapters
Job 6 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Job Chapters
Job 6 Verses
1
|
[This verse may not be a part of this translation] |
2
|
[This verse may not be a part of this translation] |
3
|
ನನ್ನ ದುಃಖವನ್ನು ನೀನು ಅರ್ಥಮಾಡಿಕೊಳ್ಳುವಿ! ನನ್ನ ದುಃಖವು ಸಮುದ್ರದ ಮರಳಿಗಿಂತಲೂ ಭಾರವಾಗಿದೆ. ಆದ್ದರಿಂದಲೇ ನನ್ನ ಮಾತುಗಳು ಮೂರ್ಖತನದಂತೆ ಕಾಣುತ್ತಿವೆ. |
4
|
ಸರ್ವಶಕ್ತನಾದ ದೇವರ ಬಾಣಗಳು ನನಗೆ ನಾಟಿಕೊಂಡಿವೆ. ನನ್ನ ಪ್ರಾಣವು ಅವುಗಳ ವಿಷವನ್ನು ಕುಡಿಯುತ್ತಿದೆ. ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ. |
5
|
ಕಾಡುಕತ್ತೆಗೆ ತಿನ್ನಲು ಹುಲ್ಲಿದ್ದರೆ ಅರಚುವುದೇ? ಎತ್ತಿಗೆ ಆಹಾರವಿದ್ದರೆ ಕೂಗುವುದೇ? |
6
|
ಊಟವನ್ನು ಉಪ್ಪಿಲ್ಲದೆ ತಿನ್ನುವರೇ? ಮೊಟ್ಟೆಯ ಲೋಳೆಗೆ ರುಚಿಯಿದೆಯೇ? |
7
|
ಇಂಥಾ ಊಟವು ನನಗೆ ಅಸಹ್ಯ: ನಾನು ಅದನ್ನು ಮುಟ್ಟಲಾರೆ. |
8
|
“ಅಯ್ಯೋ! ನಾನು ಕೇಳಿಕೊಂಡದ್ದು ನನಗೆ ದೊರೆಯುವುದಿಲ್ಲವೇ? ನಾನು ಬಯಸಿದ್ದನ್ನು ದೇವರು ನನಗೆ ಕೊಡುವುದಿಲ್ಲವೇ? |
9
|
ನನ್ನನ್ನು ಜಜ್ಜಿಹಾಕಲು ದೇವರು ಇಚ್ಫಿಸುವುದಾಗಿದ್ದರೆ, ಆತನು ನನ್ನನ್ನು ಕೊಲ್ಲಲಿ! |
10
|
ಆಗ ನನಗೆ ಆದರಣೆಯಾಗುವುದು. ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು; ಪವಿತ್ರವಾಗಿರುವಾತನ ಆಜ್ಞೆಗಳಿಗೆ ನಾನು ಅವಿಧೇಯನಾಗಲೇ ಇಲ್ಲ.” |
11
|
“ನನ್ನ ಬಲವು ಕುಗ್ಗಿಹೋಗಿದೆ; ಬದುಕುವ ನಿರೀಕ್ಷೆಯೇ ನನಗಿಲ್ಲ. ಕೊನೆಯಲ್ಲಿ ನನಗೇನಾಗುವುದೊ ತಿಳಿಯದು, ಆದ್ದರಿಂದ ನಾನು ತಾಳ್ಮೆಯಿಂದಿರುವುದೇಕೇ? |
12
|
ನಾನು ಬಂಡೆಯಂತೆ ಬಲಿಷ್ಠನಲ್ಲ. ನನ್ನ ದೇಹವು ತಾಮ್ರದಿಂದ ಮಾಡಿದ್ದಲ್ಲ. |
13
|
ಈಗ ನನಗೇ ಸಹಾಯಮಾಡಿಕೊಳ್ಳಲು ನನ್ನಲ್ಲಿ ಶಕ್ತಿಯಿಲ್ಲ. ಸಹಾಯಮಾಡವವರೂ ನನಗೆ ಯಾರೂ ಇಲ್ಲ. |
14
|
“ಕಷ್ಟದಲ್ಲಿರುವವನಿಗೆ ಅವನ ಸ್ನೇಹಿತನು ದಯೆ ತೋರಬೇಕು; ಒಂದುವೇಳೆ ಅವನು ಸರ್ವಶಕ್ತನಾದ ದೇವರಿಗೆ ವಿಮುಖನಾಗಿದ್ದರೂ ಅವನ ಸ್ನೇಹಿತನು ನಂಬಿಗಸ್ತನಾಗಿರಬೇಕು. |
15
|
ಆದರೆ ನನ್ನ ಸಹೋದರರಾದ ನೀವು ನಂಬಿಗಸ್ತರಲ್ಲ. ನಾನು ನಿಮ್ಮನ್ನು ಆಶ್ರಯಿಸಿಕೊಳ್ಳಲಾರೆ. ಕೆಲವೊಮ್ಮೆ ಹರಿಯುವ, ಕೆಲವೊಮ್ಮೆ ಹರಿಯದಿರುವ ತೊರೆಗಳಂತೆ ನೀವು ದ್ರೋಹಿಗಳಾಗಿದ್ದೀರಿ. |
16
|
ಮಂಜಿನಿಂದಲೂ ಕರಗುವ ಹಿಮದಿಂದಲೂ ತುಂಬಿ ಹರಿಯುವ ತೊರೆಗಳಂತೆ ನೀವಿದ್ದೀರಿ. |
17
|
ಆದರೆ ಆ ತೊರೆಗಳು ಬೇಸಿಗೆಕಾಲದಲ್ಲಿ ಇದ್ದಕ್ಕಿದ್ದಂತೆ ಹರಿಯದೆ ನಿಂತುಹೋಗುತ್ತವೆ. ಬೇಸಿಗೆ ಕಾಲದ ಕಾವಿಗೆ ನೀರು ಬತ್ತಿಹೋಗುತ್ತದೆ; ತೊರೆಗಳು ಇಲ್ಲವಾಗುತ್ತವೆ. |
18
|
ವರ್ತಕರ ತಂಡಗಳು ಅವುಗಳ ದಾರಿಗಳಿಂದ ಬೇರೆ ಕಡೆಗೆ ತಿರುಗಿಕೊಳ್ಳುವರು. ಅವರು ಅಲೆಯುತ್ತಾ ಮರುಭೂಮಿಗೆ ಹೋಗಿ ಕಾಣದಂತಾಗುವರು. |
19
|
ತೇಮದ ವರ್ತಕರ ತಂಡಗಳು ನೀರಿಗಾಗಿ ನೋಡುವರು. ಶೆಬದ ಪ್ರಯಾಣಿಕರು ನಿರೀಕ್ಷೆಯಿಂದ ನೋಡುವರು. |
20
|
ನೀರು ಸಿಗುವುದೆಂದು ಅವರು ನಂಬಿಕೊಂಡಿದ್ದರೂ ಅವರಿಗೆ ನಿರಾಶೆಯಾಯಿತು. |
21
|
ನೀವು ಸಹ ಆ ತೊರೆಗಳಂತಿದ್ದೀರಿ. ನೀವು ನನ್ನ ಕಷ್ಟಗಳನ್ನು ನೋಡಿ ಭಯಗೊಂಡಿದ್ದೀರಿ. |
22
|
‘ನನಗೆ ಏನಾದರೂ ಕೊಡಿ’ ಎಂದಾಗಲಿ ‘ನನಗೋಸ್ಕರವಾಗಿ ನಿಮ್ಮ ಐಶ್ವರ್ಯದಿಂದ ಇಂಥವನಿಗೆ ಲಂಚಕೊಡಿ’ ಎಂದಾಗಲಿ ನಾನೆಂದೂ ಕೇಳಲಿಲ್ಲ. |
23
|
‘ಶತ್ರುವಿನ ಶಕ್ತಿಯಿಂದ ನನ್ನನ್ನು ರಕ್ಷಿಸಿರಿ. ವೈರಿಯಿಂದ ನನ್ನನ್ನು ರಕ್ಷಿಸಲು ಪ್ರಾಯಶ್ಚಿತ್ತ ಕೊಡಿರಿ’ ಎಂದಾಗಲಿ ನಾನೆಂದೂ ಕೇಳಲಿಲ್ಲ. |
24
|
“ಈಗ ನನಗೆ ಉಪದೇಶಿಸಿ ನನ್ನ ತಪ್ಪನ್ನು ತಿಳಿಸಿರಿ; ನಾನು ಮೌನವಾಗಿರುವೆನು. |
25
|
ಯಥಾರ್ಥಾವಾದ ನುಡಿಗಳು ಶಕ್ತಿಯುತವಾಗಿವೆ. ಆದರೆ ನಿಮ್ಮ ವಾದಗಳು ಏನನ್ನೂ ನಿರೂಪಿಸುವುದಿಲ್ಲ. |
26
|
ನನ್ನನ್ನು ಟೀಕೆ ಮಾಡಬೇಕೆಂದಿದ್ದೀರೋ? ಇನ್ನೂ ಕಟುವಾದ ಮಾತುಗಳನ್ನು ಆಡಬೇಕೆಂದಿದ್ದೀರೋ? |
27
|
ಹೌದು, ನೀವು ಚೀಟುಹಾಕಿ ಅನಾಥರಿಗೆ ಸೇರಿದ ವಸ್ತುಗಳನ್ನು ತೆಗೆದುಕೊಳ್ಳುವವರಾಗಿದ್ದೀರಿ. ನೀವು ನಿಮ್ಮ ಸ್ನೇಹಿತನನ್ನು ಮಾರಾಟ ಮಾಡುವವರಾಗಿದ್ದೀರಿ. |
28
|
“ಆದರೆ ಈಗ ದಯವಿಟ್ಟು ನನ್ನ ಮುಖವನ್ನು ನೋಡಿರಿ. ನಾನು ನಿಮಗೆ ಸುಳ್ಳು ಹೇಳುವುದಿಲ್ಲ. |
29
|
ಆದ್ದರಿಂದ ಈಗ ನಿಮ್ಮ ಮನಸ್ಸನ್ನು ಬದಲಾಯಿಸಿರಿ. ಆನ್ಯಾಯಸ್ಥರಾಗಿರಬೇಡಿ. ಹೌದು, ಮತ್ತೊಮ್ಮೆ ಯೋಚಿಸಿರಿ. ನಾನೇನೂ ತಪ್ಪು ಮಾಡಿಲ್ಲ. |
30
|
ನಾನು ಸುಳ್ಳು ಹೇಳುತ್ತಿಲ್ಲ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನನಗೆ ಗೊತ್ತಿದೆ.” |