1
|
ನೋಹನ ಗಂಡುಮಕ್ಕಳು: ಶೇಮ್, ಹಾಮ್ ಮತ್ತು ಯೆಫೆತ್. ಜಲಪ್ರಳಯದ ನಂತರ ಈ ಮೂವರು ಅನೇಕ ಗಂಡುಮಕ್ಕಳನ್ನು ಪಡೆದರು. ಶೇಮನಿಗೂ ಹಾಮನಿಗೂ ಯೆಫೆತನಿಗೂ ಹುಟ್ಟಿದ ಗಂಡುಮಕ್ಕಳು: |
2
|
ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್. |
3
|
ಗೋಮೆರನ ಗಂಡುಮಕ್ಕಳು: ಅಷ್ಕೆನಸ್, ರೀಫತ್ ಮತ್ತು ತೋಗರ್ಮ. |
4
|
ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್. |
5
|
ತೀರ ಪ್ರದೇಶದ ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು. |
6
|
ಹಾಮನ ಗಂಡುಮಕ್ಕಳು: ಕೂಷ್, ಮಿಚ್ರಯಿಮ್, ಪೂತ್ ಮತ್ತು ಕಾನಾನ್. |
7
|
ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ. ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್. |
8
|
ಕೂಷನಿಗೆ ನಿಮ್ರೋದನೆಂಬ ಗಂಡುಮಗನಿದ್ದನು. ನಿಮ್ರೋದನು ಭೂಲೋಕದಲ್ಲಿ ಮಹಾಬಲಶಾಲಿಯಾಗಿದ್ದು ಮೊದಲನೆಯ ಭೂರಾಜನಾದನು. |
9
|
ಯೆಹೋವನ ಮುಂದೆ ಅವನು ಚತುರ ಬೇಟೆಗಾರನಾಗಿದ್ದನು. ಆದ್ದರಿಂದ ಜನರು ಬೇರೆಯವರನ್ನು ಅವನಿಗೆ ಹೋಲಿಸಿ, “ಅವನು ನಿಮ್ರೋದನಂತೆ, ಯೆಹೋವನ ಮುಂದೆ ಚತುರ ಬೇಟೆಗಾರ” ಎಂದು ಹೇಳುತ್ತಿದ್ದರು. |
10
|
ನಿಮ್ರೋದನ ರಾಜ್ಯವು ಶಿನಾರ್ ದೇಶದಲ್ಲಿರುವ ಬಾಬಿಲೋನಿನಲ್ಲಿ, ಯೆರೆಕ್ನಲ್ಲಿ ಮತ್ತು ಅಕ್ಕದ್ ಮತ್ತು ಕಲ್ನೇ ಎಂಬ ಪಟ್ಟಣಗಳಲ್ಲಿ ಪ್ರಾರಂಭವಾಯಿತು. |
11
|
[This verse may not be a part of this translation] |
12
|
[This verse may not be a part of this translation] |
13
|
[This verse may not be a part of this translation] |
14
|
[This verse may not be a part of this translation] |
15
|
ಕಾನಾನನು ಸೀದೋನನ ತಂದೆ. ಕಾನಾನನ ಮೊದಲನೆಯ ಮಗನೇ ಸೀದೋನ್. ಇವನು ಹಿತ್ತಿಯರ ಮೂಲಪಿತೃ. |
16
|
[This verse may not be a part of this translation] |
17
|
[This verse may not be a part of this translation] |
18
|
[This verse may not be a part of this translation] |
19
|
ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು. |
20
|
ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು. |
21
|
ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ. |
22
|
ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. |
23
|
ಅರಾಮನ ಗಂಡುಮಕ್ಕಳು: ಊಸ್, ಹೂಲ್, ಗೆತೆರ್ ಮತ್ತು ಮಷ್. |
24
|
ಅರ್ಪಕ್ಷದನು ಶೆಲಹನ ತಂದೆ, ಶೆಲಹನು ಎಬರನ ತಂದೆ. |
25
|
ಎಬರನಿಗೆ ಇಬ್ಬರು ಗಂಡುಮಕ್ಕಳಿದ್ದರು. ಮೊದಲನೆಯ ಮಗನು ಹುಟ್ಟಿದ ಕಾಲದಲ್ಲಿ ಭೂಮಿಯ ಜನಾಂಗಗಳು ವಿಂಗಡವಾದದ್ದರಿಂದ ಅವನಿಗೆ ಪೆಲೆಗ್ ಎಂದು ಹೆಸರಿಟ್ಟನು; ಎರಡನೆಯ ಮಗನ ಹೆಸರು ಯೊಕ್ತಾನ್. |
26
|
ಯೊಕ್ತಾನನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್ ಮತ್ತು ಯೆರಹ, |
27
|
ಹದೋರಾಮ್, ಊಜಾಲ್, ದಿಕ್ಲಾ. |
28
|
ಓಬಾಲ್, ಅಬೀಮಯೇಲ್, ಶೆಬಾ, |
29
|
ಓಫೀರ್, ಹವೀಲ ಮತ್ತು ಯೋಬಾಬ್. |
30
|
ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು. |
31
|
ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು. |
32
|
ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ. |
Genesis 10:19 Kannada Language Bible Words basic statistical display
COMING SOON ...