Indian Language Bible Word Collections
Proverbs 6:30
Proverbs Chapters
Proverbs 6 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 6 Verses
1
|
ನನ್ನ ಮಗನೇ, ನಿನ್ನ ಸ್ನೇಹಿತನಿಗಾಗಿ ನೀನು ಹೊಣೆಯಾಗಿದ್ದರೆ ಪರನೊಂದಿಗೆ ನಿನ್ನ ಕೈಯನ್ನು ಒಡ್ಡಿದ್ದರೆ |
2
|
ನಿನ್ನ ಬಾಯಿ ಮಾತುಗಳಿಂದ ನೀನು ಸಿಕ್ಕಿಕೊಂಡಿದ್ದೀ. ನಿನ್ನ ಬಾಯಿ ಮಾತುಗಳಿಂದಲೇ ನೀನು ಹಿಡಿಯಲ್ಪಟ್ಟಿದ್ದೀ. |
3
|
ನನ್ನ ಮಗನೇ, ನಿನ್ನ ಸ್ನೇಹಿತನ ಕೈಗೆ ಸಿಕ್ಕಿದಾಗ ತಪ್ಪಿಸಿಕೊಳ್ಳಲು ಇದನ್ನು ಮಾಡು. ಹೋಗಿ ನಿನ್ನನ್ನು ನೀನು ತಗ್ಗಿಸಿಕೊಂಡು ನಿನ್ನ ಸ್ನೇಹಿತನಿಗೆ ಹೊಣೆಯಾಗು. |
4
|
ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ. |
5
|
ಬೇಟೆ ಗಾರನ ಕೈಯಿಂದ ಜಿಂಕೆಯೂ ಪಕ್ಷಿಯೂ ತಪ್ಪಿಸಿಕೊಳ್ಳು ವಂತೆ ತಪ್ಪಿಸಿಕೋ. |
6
|
ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ ಅದರ ಮಾರ್ಗಗಳನ್ನು ಆಲೋಚಿಸಿ ಜ್ಞಾನ ವಂತನಾಗಿರು. |
7
|
ನಾಯಕನಾಗಲಿ ಮೇಲ್ವಿಚಾರಕನಾ ಗಲಿ ಅಧಿಕಾರಿಯಾಗಲಿ ಅದಕ್ಕೆ ಇಲ್ಲದೆ ಹೋದರೂ |
8
|
ಬೇಸಿಗೆಯಲ್ಲಿ ಅದು ತನ್ನ ಅಹಾರವನ್ನು ಸಂಗ್ರಹಿಸಿ ಕೊಂಡು ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿ ಕೊಳ್ಳುವದು. |
9
|
ಓ ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆಮಾಡುವದು? ನಿನ್ನ ನಿದ್ರೆಯಿಂದ ಯಾವಾ ಗ ಎಚ್ಚರಗೊಳ್ಳುವಿ? |
10
|
ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನೂ ಸ್ವಲ್ಪ ಕೈ ಮುದುರಿ ಕೊಳ್ಳುವಿ? |
11
|
ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು. |
12
|
ದುಷ್ಟನೂ ಕೆಡುಕನೂ ವಕ್ರಬಾಯಿಂದ ನಡೆದು ಕೊಳ್ಳುವನು. |
13
|
ಅವನು ತನ್ನ ಕಣ್ಣುಗಳಿಂದ ಸನ್ನೆಮಾಡಿ ತನ್ನ ಕಾಲುಗಳಿಂದ ಮಾತಾಡುತ್ತಾ ತನ್ನ ಬೆರಳುಗಳಿಂದ ಬೋಧಿಸುತ್ತಾನೆ. |
14
|
ಅವನ ಹೃದಯದಲ್ಲಿ ಮೂರ್ಖ ತನವಿದೆ. ಯಾವಾಗಲೂ ಅವನು ಕೇಡನ್ನು ಕಲ್ಪಿಸು ತ್ತಾನೆ. ಅವನು ವೈಷಮ್ಯವನ್ನು ಬಿತ್ತುತ್ತಾನೆ. |
15
|
ಆದದ ರಿಂದ ಅವನಿಗೆ ತಕ್ಷಣವೇ ವಿಪತ್ತು ಬರುವದು; ತಕ್ಷ ಣವೇ ಯಾವ ಪರಿಹಾರವಿಲ್ಲದೆ ಅವನು ಮುರಿಯಲ್ಪ ಡುವನು. |
16
|
ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ: |
17
|
ಹೆಮ್ಮೆಯ ದೃಷ್ಟಿ, ಸುಳ್ಳಾ ಡುವ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈಗಳು, |
18
|
ದುಷ್ಟ ಭಾವನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ಓಡಾಡುವದರಲ್ಲಿ ತ್ವರೆಪಡುವ ಕಾಲುಗಳು, |
19
|
ಅಸತ್ಯಗಳನ್ನು ಆಡುವ ಸುಳ್ಳು ಸಾಕ್ಷಿ ಮತ್ತು ಸಹೋ ದರರಲ್ಲಿ ವೈಷಮ್ಯವನ್ನು ಬಿತ್ತುವವನು. |
20
|
ನನ್ನ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಕಟ್ಟಳೆಯನ್ನು ತ್ಯಜಿಸಬೇಡ. |
21
|
ಅವುಗಳನ್ನು ಯಾವಾಗಲೂ ನಿನ್ನ ಹೃದಯಕ್ಕೆ ಬಂಧಿಸು. ನಿನ್ನ ಕಂಠಕ್ಕೆ ಕಟ್ಟಿಕೋ. |
22
|
ನೀನು ಹೋಗು ವಾಗ ಅದು ನಿನ್ನನ್ನು ನಡಿಸುವದು; ಮಲಗುವಾಗ ನಿನ್ನನ್ನು ಕಾಯುವದು; ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು. |
23
|
ಆಜ್ಞೆಯು ದೀಪವಾಗಿದೆ, ಕಟ್ಟ ಳೆಯು ಬೆಳಕಾಗಿದೆ; ಶಿಕ್ಷಣದ ಗದರಿಕೆಗಳು ಜೀವದ ಮಾರ್ಗವಾಗಿವೆ. |
24
|
ಕೆಟ್ಟ ಹೆಂಗಸಿನಿಂದಲೂ ಪರ ಸ್ತ್ರೀಯ ನಾಲಿಗೆಯ ಮುಖಸ್ತುತಿಯಿಂದಲೂ ಅವು ನಿನ್ನನ್ನು ಕಾಪಾಡುವವು. |
25
|
ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ. |
26
|
ಒಬ್ಬ ವೇಶ್ಯೆಯ ಮೂಲಕ ಮನುಷ್ಯನು ರೊಟ್ಟಿಯ ತುಂಡಿಗೆ ಈಡಾಗುವನು; ವ್ಯಭಿಚಾರಿಣಿಯು ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು. |
27
|
ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ತೆಗೆದು ಕೊಂಡರೆ ಅವನ ವಸ್ತ್ರಗಳು ಸುಡುವದಿಲ್ಲವೋ? |
28
|
ಒಬ್ಬನು ಧಗಧಗಿಸುವ ಕೆಂಡಗಳ ಮೇಲೆ ನಡೆದರೆ ಅವನ ಪಾದಗಳು ಸುಡುವದಿಲ್ಲವೋ? |
29
|
ತನ್ನ ನೆರೆಯವನ ಹೆಂಡತಿಯನ್ನು ಕೂಡುವವನು ಹೀಗೆಯೇ ಇರುವನು; ಅವಳನ್ನು ಮುಟ್ಟುವ ಯಾವನೂ ನಿರಪ ರಾಧಿಯಾಗಿ ಇರನು. |
30
|
ಹಸಿದಾಗ ಕಳ್ಳನು ತನ್ನ ಪ್ರಾಣವನ್ನು ತೃಪ್ತಿಪಡಿಸುವದಕ್ಕೆ ಕಳವು ಮಾಡಿದರೆ ಜನರು ಅವನನ್ನು ಹೀಯಾಳಿಸುವದಿಲ್ಲ. |
31
|
ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡುವನು; ತನ್ನ ಮನೆಯ ಆಸ್ತಿಯನ್ನೆಲ್ಲಾ ಅವನು ಕೊಡುವನು. |
32
|
ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು. |
33
|
ಅವ ನಿಗೆ ಗಾಯವೂ ಅವಮಾನವೂ ಆಗುವವು; ಅವನ ನಿಂದೆಯು ಎಂದಿಗೂ ಅಳಿಸಲ್ಪಡದು. |
34
|
ಮನುಷ್ಯನ ಕ್ರೋಧವು ಮತ್ಸರವಾಗಿದೆ; ಆದದರಿಂದ ಮುಯ್ಯಿ ತೀರಿಸುವ ದಿನದಲ್ಲಿ ಅವನು ಕ್ಷಮೆತೋರುವದಿಲ್ಲ. |
35
|
ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ. |