Indian Language Bible Word Collections
Proverbs 5:12
Proverbs Chapters
Proverbs 5 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 5 Verses
1
|
ನನ್ನ ಮಗನೇ, ನನ್ನ ಗ್ರಹಿಕೆಗೆ ಕಿವಿಗೊಡು; ನೀನು ವಿವೇಕಕ್ಕೆ ಲಕ್ಷಕೊಡು ವಂತೆಯೂ |
2
|
ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡು ವಂತೆಯೂ ನನ್ನ ಜ್ಞಾನವನ್ನು ಆಲಿಸು. |
3
|
ಪರಸ್ತ್ರೀಯ ತುಟಿಗಳು ಜೇನು ತುಪ್ಪದಂತೆ ತೊಟ್ಟಿ ರುವವು, ಅವಳ ಬಾಯಿಯು ಎಣ್ಣೆಗಿಂತಲೂ ಮೃದು ವಾಗಿದೆ. |
4
|
ಆದರೆ ಅವಳ ಅಂತ್ಯವು ಮಾಚಿ ಪತ್ರೆಯಂತೆ ಕಹಿಯೂ ಇಬ್ಬಾಯಿ ಕತ್ತಿಯಂತೆ ಹರಿತವೂ ಇರುತ್ತದೆ. |
5
|
ಅವಳ ಪಾದಗಳು ಮರಣದ ಕಡೆಗೆ ಇಳಿದು ಹೋಗು ತ್ತವೆ. ಅವಳ ಹೆಜ್ಜೆಗಳು ಪಾತಾಳವನ್ನು ಹಿಡಿಯುತ್ತವೆ. |
6
|
ಅವುಗಳನ್ನು ನೀನು ತಿಳಿದುಕೊಳ್ಳಲಾರದಂತೆ ಜೀವದ ಮಾರ್ಗವನ್ನು ನೀನು ವಿವೇಚಿಸಲಾರದಷ್ಟು ಅವಳ ಮಾರ್ಗಗಳು ಚಂಚಲವಾಗಿವೆ. |
7
|
ಆದದರಿಂದ ಓ ಮಕ್ಕಳಿರಾ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಬಾಯಿಯ ಮಾತುಗಳಿಂದ ಹೊರಟುಹೋಗಬೇಡಿರಿ. |
8
|
ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು. ಅವಳ ಮನೆಯ ಬಾಗಲ ಹತ್ತಿರಕ್ಕೆ ಬಾರದೆ ಇರು. |
9
|
ನೀನು ನಿನ್ನ ಗೌರವವನ್ನು ಬೇರೆಯವರಿಗೂ ನಿನ್ನ ವರುಷ ಗಳನ್ನು ಕ್ರೂರರಿಗೂ ಕೊಡಬೇಡ. |
10
|
ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆಯೂ ನಿನ್ನ ಪ್ರಯಾಸಗಳು ಪರನ ಮನೆಯಲ್ಲಿ ಇರದಂತೆಯೂ ಮಾಡು. |
11
|
ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ-- |
12
|
ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು. |
13
|
ನನ್ನ ಬೋಧ ಕರ ಸ್ವರಕ್ಕೆ ನಾನು ವಿಧೇಯನಾಗದೆ ಇಲ್ಲವೆ ಶಿಕ್ಷಕರಿಗೆ ನಾನು ಕಿವಿಗೊಡದೆ ಹೋದೆನು. |
14
|
ನಾನು ಕೂಟ ಮತ್ತು ಸಭೆಯ ಮಧ್ಯದಲ್ಲಿ ಹೆಚ್ಚು ಕಡಿಮೆ ಎಲ್ಲಾ ಕೇಡಿನಲ್ಲಿ ಇದ್ದೆನು ಎಂದು ಹೇಳುವಿ. |
15
|
ನಿನ್ನ ಸ್ವಂತ ಕೊಳದ ನೀರನ್ನು, ನಿನ್ನ ಸ್ವಂತ ಬಾವಿ ಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ. |
16
|
ನಿನ್ನ ಬುಗ್ಗೆಗಳು ಹೊರಗೆ ಮತ್ತು ನೀರಿನ ನದಿಗಳು ಬೀದಿ ಗಳಲ್ಲಿ ಹರಡಿಹೋಗಲಿ. |
17
|
ಅವು ನಿನ್ನ ಸ್ವಂತದವು ಗಳಾಗಿಯೇ ಇರಲಿ. ನಿನ್ನೊಂದಿಗಿರುವ ಪರರಿಗೆ ಇಲ್ಲ ದಿರಲಿ. |
18
|
ನಿನ್ನ ಬುಗ್ಗೆಯು ಆಶೀರ್ವದಿಸಲ್ಪಡಲಿ; ನಿನ್ನ ಯೌವನ ಕಾಲದ ಹೆಂಡತಿಯೊಂದಿಗೆ ಆನಂದಿಸು. |
19
|
ಆಕೆಯು ಮನೋಹರವಾದ ಜಿಂಕೆಯಂತೆಯೂ ಅಂದವಾದ ಹೆಣ್ಣು ಜಿಂಕೆಯ ಹಾಗೆಯೂ ಇರಲಿ; ಆಕೆಯ ಸ್ತನಗಳು ನಿನ್ನನ್ನು ಯಾವಾಗಲೂ ತೃಪ್ತಿಪಡಿ ಸಲಿ; ಆಕೆಯ ಪ್ರೀತಿಯಿಂದ ನೀನು ಯಾವಾಗಲೂ ಆನಂದಪರವಶನಾಗು. |
20
|
ನನ್ನ ಮಗನೇ, ಪರಸ್ತ್ರೀ ಯಲ್ಲಿ ನೀನು ಯಾಕೆ ಆನಂದ ಪರವಶನಾಗಿ ಅವಳ ಎದೆಯನ್ನು ಅಪ್ಪಿಕೊಳ್ಳುವಿ? |
21
|
ಮನುಷ್ಯನ ಮಾರ್ಗ ಗಳು ಕರ್ತನ ಕಣ್ಣುಗಳ ಮುಂದೆಯೇ ಅವೆ; ಆತನು ಅವನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾನೆ. |
22
|
ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು. |
23
|
ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು. |