Indian Language Bible Word Collections
Lamentations 3:55
Lamentations Chapters
Lamentations 3 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Lamentations Chapters
Lamentations 3 Verses
1
|
ಆತನ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ. |
2
|
ಆತನು ನನ್ನನ್ನು ಕರೆತಂದು ನಡಿಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ. |
3
|
ನಿಶ್ಚಯವಾಗಿ ಆತನು ನನಗೆ ವಿರೋಧ ವಾಗಿ ತಿರುಗಿದ್ದಾನೆ ದಿನವೆಲ್ಲಾ ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾನೆ. |
4
|
ಆತನು ನನ್ನ ಮಾಂಸ ಚರ್ಮವನ್ನೂ ಎಲುಬುಗಳನ್ನೂ ಮುರಿದಿದ್ದಾನೆ. |
5
|
ಆತನು ನನಗೆ ವಿರೋಧವಾಗಿ ಕಟ್ಟಿದ್ದಾನೆ, ವಿಷದಿಂದಲೂ ಸಂಕಟದಿಂದಲೂ ಸುತ್ತಿಕೊಂಡಿದ್ದಾನೆ. |
6
|
ಆತನು ನನ್ನನ್ನು ಬಹು ಕಾಲದ ಹಿಂದೆ ಸತ್ತವರ ಹಾಗೆ ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾನೆ. |
7
|
ನಾನು ಹೊರಗೆ ಬಾರದ ಹಾಗೆ ಆತನು ನನ್ನ ಸುತ್ತಲೂ ಬೇಲಿ ಹಾಕಿದ್ದಾನೆ; ಆತನು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾನೆ. |
8
|
ನಾನು ಮೊರೆಯಿಟ್ಟು ಕೂಗಿದರೂ ಆತನು ನನ್ನ ಪ್ರಾರ್ಥನೆ ಯನ್ನು ಲಾಲಿಸುವದಿಲ್ಲ. |
9
|
ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ. |
10
|
ಆತನು ನನಗೆ ಹೊಂಚುಹಾಕುವ ಕರಡಿಯ ಹಾಗೆಯೂ ಗುಪ್ತಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾನೆ. |
11
|
ಆತನು ನನ್ನ ಮಾರ್ಗಗಳನ್ನು ತಪ್ಪಿಸಿ ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ ಹಾಳುಮಾಡಿದ್ದಾನೆ. |
12
|
ಆತನು ತನ್ನ ಬಿಲ್ಲನ್ನು ಬಗ್ಗಿಸಿದ್ದಾನೆ ಮತ್ತು ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾನೆ. |
13
|
ಆತನು ತನ್ನ ಬತ್ತಳಿಕೆಯಲ್ಲಿನ ಬಾಣಗಳು ನನ್ನ ಅಂತರಂಗಗಳಲ್ಲಿ ತೂರಿಹೋಗುವ ಹಾಗೆ ಮಾಡಿ ದ್ದಾನೆ. |
14
|
ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ ದಿನವೆಲ್ಲವೂ ಅವರ ಹಾಡಾಗಿಯೂ ಇದ್ದೇನೆ. |
15
|
ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ. |
16
|
ಆತನು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು ನನ್ನನ್ನು ಬೂದಿಯಿಂದ ಮುಚ್ಚಿದ್ದಾನೆ. |
17
|
ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು. |
18
|
ನನ್ನ ಬಲವೂ ನಿರೀಕ್ಷೆಯೂ ಕರ್ತನಿಂದ ನಾಶವಾದವೆಂದು ಹೇಳಿ |
19
|
ನನ್ನ ಸಂಕಟವನ್ನು ಹಿಂಸೆಯನ್ನು ಮಾಚಿಪತ್ರೆಯನ್ನು ವಿಷವನ್ನು ಇವುಗಳನ್ನು ಜ್ಞಾಪಕಮಾಡಿಕೊಂಡೆನು. |
20
|
ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿ ಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ. |
21
|
ಇದನ್ನು ನಾನು ನನ್ನ ಮನಸ್ಸಿಗೆ ತರುತ್ತೇನೆ, ಆದದರಿಂದ ನನಗೆ ನಿರೀಕ್ಷೆ ಇದೆ. |
22
|
ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ. |
23
|
ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು; ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು. |
24
|
ಕರ್ತನೇ ನನ್ನ ಪಾಲೆಂದು ನನ್ನ ಪ್ರಾಣವು ಹೇಳುತ್ತದೆ, ಆದದರಿಂದ ನಾನು ಆತನಲ್ಲಿ ನಿರೀಕ್ಷೆ ಇಡುತ್ತೇನೆ. |
25
|
ಕರ್ತನು ತನಗಾಗಿ ಕಾಯುವವನಿಗೂ ಹುಡುಕುವ ಪ್ರಾಣಕ್ಕೂ ಒಳ್ಳೆಯವನಾಗಿದ್ದಾನೆ. |
26
|
ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು. |
27
|
ತನ್ನ ಯೌವನದಲ್ಲಿ ನೊಗವನ್ನು ಹೊರುವದು ಅವನಿಗೆ ಒಳ್ಳೆಯದು. |
28
|
ಅವನು ಒಂಟಿಯಾಗಿ ಕೂತುಕೊಂಡು ಮೌನ ವಾಗಿರುವನು, ಯಾಕಂದರೆ ಆತನೇ ಅದನ್ನು ಅವನ ಮೇಲೆ ಹೊರಿಸಿದ್ದಾನೆ. |
29
|
ಒಂದು ವೇಳೆ ಅಲ್ಲಿ ನಿರೀಕ್ಷೆ ಇರುವದಾದರೆ ಅವನು ತನ್ನ ಬಾಯಿ ಯನ್ನು ದೂಳಿನಲ್ಲಿ ಇಡುತ್ತಾನೆ. |
30
|
ಆತನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡುತ್ತಾನೆ ಆತನು ನಿಂದೆಯಿಂದಲೇ ತುಂಬಿದ್ದಾನೆ. |
31
|
ಕರ್ತನು ಎಂದೆಂದಿಗೂ ತಳ್ಳಿಬಿಡುವದಿಲ್ಲ; |
32
|
ಆತನು ದುಃಖಪಡಿಸಿದರೂ ತನ್ನ ಕೃಪಾತಿಶಯದಿಂದ ಕನಿಕರಿಸುವನು. |
33
|
ಆತನು ಇಷ್ಟಪೂರ್ವಕವಾಗಿ ಮನುಷ್ಯರ ಮಕ್ಕಳನ್ನು ಬಾಧಿಸುವದು ಇಲ್ಲ ದುಃಖಿಸು ವದೂ ಇಲ್ಲ. |
34
|
ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವದನ್ನೂ |
35
|
ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ತಿರುಗಿಸು ವದನ್ನೂ |
36
|
ಮನುಷ್ಯನನ್ನು ಅವನ ವ್ಯಾಜ್ಯದಲ್ಲಿ ಕೆಡಿಸುವದನ್ನೂ ಕರ್ತನು ಮೆಚ್ಚುವದಿಲ್ಲ. |
37
|
ಕರ್ತನು ಆಜ್ಞಾಪಿಸದಿರು ವಾಗ ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು? |
38
|
ಮಹೋನ್ನತನ ಬಾಯಿಂದ ಕೆಟ್ಟದ್ದೂ ಒಳ್ಳೆಯದೂ ಹೊರಡುವದಿಲ್ಲವೇ? |
39
|
ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ? |
40
|
ನಾವು ನಮ್ಮ ಮಾರ್ಗಗಳನ್ನು ಶೋಧಿಸಿ ಪರೀಕ್ಷಿಸಿ ಕೊಂಡು ಮತ್ತೆ ಕರ್ತನ ಬಳಿಗೆ ತಿರುಗಿಕೊಳ್ಳೋಣ. |
41
|
ನಮ್ಮ ಹೃದಯವನ್ನು ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ. |
42
|
ನಾವು ದ್ರೋಹಮಾಡಿ ಎದುರು ಬಿದ್ದಿದ್ದೇವೆ; ನೀನು ಮನ್ನಿಸಲಿಲ್ಲ. |
43
|
ಕೋಪದಲ್ಲಿ ನಮ್ಮನ್ನು ಮುಚ್ಚಿ, ಹಿಂಸಿಸಿದ್ದೀ; ಕನಿಕರಿಸದೆ ಕೊಂದುಹಾಕಿರುವಿ. |
44
|
ನಮ್ಮ ಪ್ರಾರ್ಥ ನೆಯು ನಿನಗೆ ಮುಟ್ಟದಂತೆ ನಿನ್ನನ್ನು ಮೇಘದಿಂದ ಮುಚ್ಚಿ ಕೊಂಡಿದ್ದೀ. |
45
|
ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ ಕಸವನ್ನಾಗಿಯೂ ಮಾಡಿದ್ದೀ. |
46
|
ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ. |
47
|
ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ. |
48
|
ನನ್ನ ಜನರ ಕುಮಾರಿಯ ನಾಶನದ ನಿಮಿತ್ತವಾಗಿ ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದುಹೋಗುತ್ತದೆ. |
49
|
ಕರ್ತನು ಕಟಾಕ್ಷಿಸಿ ಪರಲೋಕದಿಂದ ನೋಡುವ ತನಕ ನೇತ್ರವು ಎಡೆಬಿಡದೆ ಕಣ್ಣೀರು ಸುರಿಸುತ್ತದೆ; |
50
|
ವಿಶ್ರಮಿಸಿಕೊಳ್ಳುವದೂ ಇಲ್ಲ. |
51
|
ನನ್ನ ನಗರದ ಕುಮಾರ್ತೆಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣು ನನ್ನ ಹೃದಯವನ್ನು ಪೀಡಿಸಿದೆ. |
52
|
ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು. |
53
|
ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ. |
54
|
ಪ್ರವಾಹವು ನನ ತಲೆಯ ಮೇಲೆ ಹರಿಯಿತು; ಆಗ--ನಾನು ಸತ್ತೆನು ಅಂದುಕೊಂಡೆನು. |
55
|
ಓ ಕರ್ತನೇ, ನಾನು ಆಳವಾದ ಕಾರಾಗೃಹದಿಂದ ನಿನ್ನ ಹೆಸರನ್ನು ಎತ್ತಿ ಬೇಡಿಕೊಂಡೆನು. |
56
|
ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ. |
57
|
ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸವಿಾಪಕ್ಕೆ ಬಂದು--ಭಯಪಡ ಬೇಡ ಎಂದು ಹೇಳಿದಿ. |
58
|
ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ. |
59
|
ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು. |
60
|
ಅವರ ಎಲ್ಲಾ ಪ್ರತೀಕಾರವನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನೀನು ನೋಡಿರುವಿ. |
61
|
ಓ ಕರ್ತನೇ, ಅವರ ನಿಂದೆಯನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ |
62
|
ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿ. |
63
|
ಅವರು ಕೂಡ್ರುವದನ್ನೂ ಏಳುವದನ್ನೂ ನೋಡು; ನಾನೇ ಅವರಿಗೆ ಸಂಗೀತವಾಗಿದ್ದೇನೆ. |
64
|
ಓ ಕರ್ತನೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡು. |
65
|
ಅವರಿಗೆ ದುಃಖಕರವಾದ ಹೃದಯವನ್ನೂ ನಿನ್ನ ಶಾಪವನ್ನೂ ಕೊಡು. |
66
|
ಕರ್ತನೇ ಆಕಾಶದ ಕೆಳಗಿರುವವರನ್ನು ನಿನ್ನ ಕೋಪದಿಂದ ಹಿಂಸಿಸಿ ಹಾಳುಮಾಡು. |