Indian Language Bible Word Collections
Job 3:24
Job Chapters
Job 3 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Job Chapters
Job 3 Verses
1
|
ಹೀಗಾದ ಮೇಲೆ ಯೋಬನು ತನ್ನ ಬಾಯಿತೆರದು ತನ್ನ ದಿವಸವನ್ನು ಶಪಿಸಿದನು. |
3
|
ನಾನು ಹುಟ್ಟಿದ ದಿವ ಸವೂ ಗಂಡು ಹುಟ್ಟಿತೆಂದು ಹೇಳಿದ ರಾತ್ರಿಯೂ ಹಾಳಾಗಲಿ. |
4
|
ಆ ದಿವಸವು ಕತ್ತಲಾಗಲಿ; ಮೇಲಿನಿಂದ ದೇವರು ಅದನ್ನು ಗೌರವಿಸದಿರಲಿ; ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ. |
5
|
ಕತ್ತಲೂ ಮರಣದ ನೆರಳೂ ಅದನ್ನು ಅಶುದ್ಧಮಾಡಲಿ; ಮೋಡವು ಅದರ ಮೇಲೆ ವಾಸಮಾಡಲಿ; ಹಗಲಿನ ಮೊಬ್ಬುಗಳು ಅದನ್ನು ಹೆದ ರಿಸಲಿ. |
6
|
ಆ ರಾತ್ರಿಯನ್ನು ಅಂಧಕಾರವು ಮುತ್ತಲಿ, ಅದು ವರುಷದ ದಿವಸಗಳಲ್ಲಿ ಸಂತೋಷಪಡದಿರಲಿ; ತಿಂಗಳುಗಳ ಲೆಕ್ಕದಲ್ಲಿ ಸೇರದಿರಲಿ. |
7
|
ಇಗೋ, ಆ ರಾತ್ರಿಯು ಒಂಟಿಯಾಗಿರಲಿ; ಆನಂದ ಸ್ವರವು ಅದಕ್ಕೆ ಬಾರದಿರಲಿ. |
8
|
ತಮ್ಮ ಶೋಕಕ್ಕಾಗಿ ಸಿದ್ಧವಾಗಿರುವ ಆ ದಿನವು ಶಪಿಸಲ್ಪಡಲಿ. |
9
|
ಅದರ ಸಂಧ್ಯಾರುಣದ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದು ಕೊಳ್ಳಲೂ ಬಾರದಿರಲಿ; ಅದು ದಿನದ ಉದಯವನ್ನು ನೋಡದಿರಲಿ. |
10
|
ಅದು ನನ್ನ ತಾಯಿಯ ಗರ್ಭದ ಬಾಗಲನ್ನು ಮುಚ್ಚಲಿಲ್ಲ; ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ. |
11
|
ನಾನು ಗರ್ಭ ಬಿಟ್ಟಾಗಲೇ ಯಾಕೆ ಸಾಯಲಿಲ್ಲ? ಹೊಟ್ಟೆಯೊಳಗಿಂದ ಹೊರಟಾಗಲೇ ಯಾಕೆ ಪ್ರಾಣ ಬಿಡಲಿಲ್ಲ? |
12
|
ಮೊಣಕಾಲುಗಳು ನನ್ನನ್ನು ತಡೆಯದಿ ದ್ದದ್ದೇಕೆ? ನಾನು ಕುಡಿಯುವ ಹಾಗೆ ಮೊಲೆಗಳು ಯಾಕೆ? |
13
|
ಹಾಗಾಗಿದ್ದರೆ ಈಗ ಮೌನವಾಗಿ ಮಲಗಿ ಕೊಳ್ಳುತ್ತಿದ್ದೆನು; ವಿಶ್ರಾಂತಿಯಲ್ಲಿರುತ್ತಿದ್ದೆನು. |
14
|
ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ |
15
|
ಇಲ್ಲವೆ ಬಂಗಾರ ಇರುವ ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸುವಂಥ ಪ್ರಧಾನರ ಸಂಗಡ ಆಗಲೇ ನನಗೆ ಶಾಂತಿಯಾಗಿರುವದು. |
16
|
ಇಲ್ಲವೆ ಮರೆಯಾದ ಗರ್ಭ ಪತನದ ಹಾಗೆಯೂ ಬೆಳಕನ್ನು ನೋಡದ ಕೂಸುಗಳ ಹಾಗೆಯೂ ಇಲ್ಲದೆ ಇರುವೆನು. |
17
|
ಅಲ್ಲಿ ದುಷ್ಟರು ತೊಂದರೆ ಕೊಡುವದನ್ನು ಬಿಟ್ಟುಬಿಡುತ್ತಾರೆ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿದ್ದಾರೆ. |
18
|
ಸೆರೆ ಯವರು ಕೂಡ ಶಾಂತವಾಗಿದ್ದಾರೆ; ಬಾಧೆಪಡಿಸುವ ವನ ಶಬ್ದವನ್ನು ಕೇಳುವದಿಲ್ಲ. |
19
|
ಕಿರಿಯನು ಹಿರಿಯನು ಅಲ್ಲಿ ಇದ್ದಾರೆ. ದಾಸನು ಯಜಮಾನನಿಂದ ಬಿಡುಗಡೆ ಯಾಗಿದ್ದಾನೆ. |
20
|
ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ? |
21
|
ಬಾರ ದಿರುವ ಮರಣಕ್ಕೋಸ್ಕರ ಕಾದುಕೊಂಡವರಿಗೂ ಅಡ ಗಿಸಿದ ನಿಧಿಗಿಂತಲೂ ಹೆಚ್ಚಾಗಿ ಅದಕ್ಕಾಗಿ ಅಗೆಯುತ್ತಾರೆ. |
22
|
ಸಮಾಧಿ ಕಂಡುಕೊಂಡೆವೆಂದು ಸಂತೋಷ ಸಂಭ್ರಮವಾಗಿ ಹರ್ಷಿಸುವವರಿಗೂ |
23
|
ದೇವರು ಸುತ್ತು ಬೇಲಿ ಹಾಕಿದ್ದರಿಂದ ಅಡಗಿದ ಮಾರ್ಗವುಳ್ಳವರಿಗೂ ಬೆಳಕು ಯಾಕೆ? |
24
|
ನಾನು ತಿನ್ನುವದಕ್ಕಿಂತ ಮುಂಚೆ ನನ್ನ ನಿಟ್ಟುಸಿರು ಬರುವದು. ನೀರಿನಂತೆ ನನ್ನ ಗರ್ಜನೆ ಗಳು ಹೊಯ್ಯಲ್ಪಟ್ಟಿವೆ. |
25
|
ಬಹಳವಾದ ಹೆದರಿಕೆಯು ನನ್ನ ಮೇಲೆ ಬಂತು, ನಾನು ಅಂಜಿದ್ದೇ ನನಗೆ ಬಂತು. |
26
|
ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು. |