1
|
ಕರ್ತನು ಮೋಶೆಗೆ--ನಾನು ಫರೋಹ ನಿಗೆ ಮಾಡುವದನ್ನು ಈಗ ನೀನು ನೋಡುವಿ. ಅವನು ಬಲವಾದ ಹಸ್ತದಿಂದ ಅವರನ್ನು ಹೋಗಗೊಡಿಸಿ ಬಲವಾದ ಹಸ್ತದಿಂದ ಅವನು ಅವ ರನ್ನು ತನ್ನ ದೇಶದೊಳಗಿಂದ ಓಡಿಸುವನು ಅಂದನು. |
2
|
ದೇವರು ಮೋಶೆಯ ಸಂಗಡ ಮಾತನಾಡಿ--ನಾನೇ ಕರ್ತನು; |
3
|
ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ. |
4
|
ಕಾನಾನ್ ದೇಶವನ್ನು ಅಂದರೆ ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬ ಡಿಕೆಯನ್ನು ದೃಢಪಡಿಸಿದೆನು. |
5
|
ಐಗುಪ್ತ್ಯರು ದಾಸರ ನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲ್ ಮಕ್ಕಳ ಮೂಲುಗುವಿಕೆಯನ್ನು ಕೇಳಿ ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು. |
6
|
ಆದದರಿಂದ ಇಸ್ರಾ ಯೇಲ್ ಮಕ್ಕಳಿಗೆ--ನಾನೇ ಕರ್ತನು, ನಾನು ನಿಮ್ಮನ್ನು ಐಗುಪ್ತದ ಬಿಟ್ಟೀಕೆಲಸಗಳಿಂದ ಹೊರಗೆ ಬರಮಾಡಿ ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ ನಾನು ಚಾಚಿದ ಬಾಹುವಿನಿಂದಲೂ ದೊಡ್ಡ ನ್ಯಾಯತೀರ್ಪುಗ ಳಿಂದಲೂ |
7
|
ನಿಮ್ಮನ್ನು ನನ್ನ ಜನರನ್ನಾಗಿ ತಕ್ಕೊಂಡು ನಿಮಗೆ ದೇವರಾಗಿರುವೆನು; ಐಗುಪ್ತದ ಬಿಟ್ಟೀಕೆಲಸ ಗಳಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಕರ್ತ ನಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವದು. |
8
|
ನಾನು ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಕೊಡುವೆನೆಂದು ನನ್ನ ಕೈಯ ನ್ನೆತ್ತಿ ಪ್ರಮಾಣಮಾಡಿದ ದೇಶದಲ್ಲಿ ನಿಮ್ಮನ್ನು ಬರ ಮಾಡಿ ಅದನ್ನು ನಿಮಗೆ ಸ್ವಾಸ್ಥ್ಯವಾಗಿ ಕೊಡುವೆನೆಂದು ಹೇಳಿದ ಕರ್ತನು ನಾನೇ ಎಂದು ಹೇಳು ಅಂದನು. |
9
|
ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹಾಗೆ ಹೇಳಿ ದಾಗ ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ. |
10
|
ಆಗ ಕರ್ತನು ಮೋಶೆಯ ಸಂಗಡ ಮಾತ ನಾಡಿ-- |
11
|
ಐಗುಪ್ತದ ಅರಸನಾದ ಫರೋಹನ ಬಳಿಗೆ ಹೋಗಿ ಅವನು ಇಸ್ರಾಯೇಲ್ ಮಕ್ಕಳನ್ನು ತನ್ನ ದೇಶದಿಂದ ಕಳುಹಿಸುವ ಹಾಗೆ ನೀನು ಅವನ ಸಂಗಡ ಮಾತನಾಡು ಅಂದನು. |
12
|
ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು. |
13
|
ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಇಸ್ರಾಯೇಲ್ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾ ಯೇಲ್ಯರ ಬಳಿಗೂ ಫರೋಹನ ಬಳಿಗೂ ಹೋಗ ಬೇಕೆಂದು ಹೇಳಿ ಅವರಿಗೆ ಆಜ್ಞಾಪಿಸಿದನು. |
14
|
ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್ ಫಲ್ಲು ಹೆಚ್ರೋನ್ ಕರ್ವಿಾ; ಇವರೇ ರೂಬೇನನ ಗೋತ್ರಗಳು. |
15
|
ಸಿಮೆಯೋನನ ಕುಮಾರರು: ಯೆಮೂಯೇಲ್, ಯಾವಿಾನ್ ಓಹದ್ ಯಾಕೀನ್ ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು. |
16
|
ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು. |
17
|
ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು. |
18
|
ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು. |
19
|
ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು. |
20
|
ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆ ದಳನ್ನು ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ ಆರೋನನನ್ನೂ ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರ ಮೂವತ್ತೇಳು ವರುಷಗಳು. |
21
|
ಇಚ್ಹಾರನ ಕುಮಾರರು: ಕೋರಹ ನೆಫೆಗ್ ಜಿಕ್ರೀ. |
22
|
ಉಜ್ಜೀಯೇಲನ ಕುಮಾರರು: ವಿಾಷಾಯೇಲ್ ಎಲ್ಚಾಫಾನ್ ಸಿತ್ರೀ. |
23
|
ಆರೋನನು ಅವ್ಮೆಾನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬ ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ--ನಾದಾಬ್ ಅಬೀಹೂ ಎಲ್ಲಾಜಾರ್ ಈತಾಮಾರ್ ಇವರನ್ನು ಹೆತ್ತಳು. |
24
|
ಕೋರಹನ ಕುಮಾರರು: ಅಸ್ಸೀರ್ ಎಲ್ಕಾನಾ ಅಬೀಯಾಸಾಫ್ ಎಂಬವರು. ಇವರೇ ಕೋರಹೀಯರ ಗೋತ್ರಗಳು. |
25
|
ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಳನ್ನು ತನಗೆ ಹೆಂಡತಿ ಯಾಗಿ ತಕ್ಕೊಂಡನು. ಆಕೆಯು ಅವನಿಗೆ--ಫಿನೇಹಾಸ ನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿ ಯರ ತಂದೆಗಳ ಮುಖ್ಯಸ್ಥರು. |
26
|
ಇಸ್ರಾಯೇಲ್ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೊಳಗಿಂದ ಹೊರಗೆ ಬರಮಾಡ ಬೇಕೆಂದು ಕರ್ತನು ಯಾರಿಗೆ ಹೇಳಿದನೋ ಆ ಆರೋನ ಮೋಶೆ ಇವರೇ. |
27
|
ಇಸ್ರಾಯೇಲ್ ಮಕ್ಕ ಳನ್ನು ಹೊರಗೆ ತರುವದಕ್ಕಾಗಿ ಐಗುಪ್ತದ ಅರಸನಾದ ಫರೋಹನ ಸಂಗಡ ಮಾತನಾಡಿದ ಮೋಶೆ ಆರೋನರೂ ಇವರೇ. |
28
|
ಕರ್ತನು ಐಗುಪ್ತದೇಶದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿನದಲ್ಲಿ |
29
|
ಮೋಶೆಗೆ--ನಾನೇ ಕರ್ತನು, ನಾನು ನಿನಗೆ ಹೇಳುವದನ್ನೆಲ್ಲಾ ಐಗುಪ್ತದ ಅರಸನಾದ ಫರೋಹನಿಗೆ ತಿಳಿಸು ಅಂದನು. |
30
|
ಅದಕ್ಕೆ ಮೋಶೆಯು ಕರ್ತನ ಮುಂದೆ--ಇಗೋ, ನಾನು ತೊದಲು ನಾಲಿಗೆಯುಳ್ಳವನು. ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು. |
Exodus 6:4 English Language Bible Words basic statistical display
COMING SOON ...