1
|
ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ. |
2
|
ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ; |
3
|
ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ; |
4
|
ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ; |
5
|
ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ; |
6
|
ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ; |
7
|
ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ; |
8
|
ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ. |
9
|
ತಾನು ಪ್ರಯಾಸಪಡುವದರಲ್ಲಿ ದುಡಿಯುವವನಿಗೆ ಲಾಭವೇನಿದೆ? |
10
|
ಅದರಲ್ಲಿ ಅಭ್ಯಾಸಿಸುವಂತೆ ಮನು ಷ್ಯರ ಪುತ್ರರಿಗೆ ದೇವರು ಕೊಟ್ಟ ಪ್ರಯಾಸವನ್ನು ನಾನು ಕಂಡಿದ್ದೇನೆ. |
11
|
ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ. |
12
|
ಒಬ್ಬನು ಸಂತೋಷಿಸಿ ತನ್ನ ಜೀವಮಾನದಲ್ಲಿ ಒಳ್ಳೇ ದನ್ನು ಮಾಡುವದೇ ಹೊರತು ಅವುಗಳಲ್ಲಿ ಯಾವ ಮೇಲೂ ಇಲ್ಲವೆಂದು ನಾನು ಬಲ್ಲೆನು. |
13
|
ಪ್ರತಿ ಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವದು ದೇವರ ದಾನದಿಂದಲೇ. |
14
|
ದೇವರು ಮಾಡುವದೆಲ್ಲವು ಶಾಶ್ವತವಾಗಿರುವದೆಂದು ನಾನು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಬಾರದು, ಇಲ್ಲವೆ ಅದರಿಂದ ಯಾವದನ್ನೂ ತೆಗೆಯಬಾರದು; ಮನುಷ್ಯರು ಆತನ ಎದುರಿನಲ್ಲಿ ಭಯಪಡುವಂತೆ ದೇವರು ಅದನ್ನು ಮಾಡುತ್ತಾನೆ. |
15
|
ಇದ್ದದ್ದು ಈಗ ಇದೆ, ಇರುವದು ಆಗಲೇ ಇತ್ತು; ಗತಿಸಿಹೋದದ್ದನ್ನು ದೇವರು ಕೇಳುತ್ತಾನೆ. |
16
|
ಕೆಟ್ಟದ್ದು ಇತ್ತೆಂದು ಸೂರ್ಯನ ಕೆಳಗೆ ನ್ಯಾಯ ತೀರ್ಪಿನ ಸ್ಥಳವನ್ನು ಮತ್ತು ದುಷ್ಕೃತ್ಯ ಇದೆಯೆಂದು ನೀತಿಯ ಸ್ಥಾನವನ್ನು ನಾನು ಕಂಡೆನು. |
17
|
ನಾನು ನನ್ನ ಹೃದಯದಲ್ಲಿ -- ನೀತಿವಂತರನ್ನೂ ದುಷ್ಟರನ್ನೂ ದೇವರು ತೀರ್ಪುಮಾಡುವನು; ಪ್ರತಿಯೊಂದು ಉದ್ದೇ ಶಕ್ಕೂ ಪ್ರತಿಯೊಂದು ಕೆಲಸಕ್ಕೂ ಸಮಯವಿದೆ ಎಂದು ಅಂದುಕೊಂಡೆನು. |
18
|
ಮನುಷ್ಯ ಪುತ್ರರ ಸ್ಥಿತಿಯ ವಿಷ ಯವಾಗಿ ದೇವರು ಅವರನ್ನು ಪ್ರತ್ಯಕ್ಷಪಡಿಸುವನೆಂದೂ ಅವರು ತಾವೇ ಮೃಗಗಳೆಂದು ತಾವು ಕಂಡುಕೊಳ್ಳ ಬೇಕೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು. |
19
|
ಮೃಗಗಳಿಗೆ ಸಂಭವಿಸುವದು ಮನುಷ್ಯರ ಪುತ್ರರಿಗೂ ಸಂಭವಿಸುತ್ತದೆ; ಅವರಿಗೆ ಒಂದೇ ಸಂಗತಿ ಸಂಭವಿಸು ತ್ತದೆ; ಒಂದು ಸಾಯುವ ಹಾಗೆ ಮತ್ತೊಂದು ಸಾಯು ತ್ತದೆ; ಹೌದು, ಅವರೆಲ್ಲರಿಗೂ ಒಂದೇ ಒಂದು ಉಸಿ ರಾಟ ಇದೆ; ಆದಕಾರಣ ಮೃಗಕ್ಕಿಂತ ಮನುಷ್ಯನಿಗೆ ಯಾವ ಶ್ರೇಷ್ಠತೆಯೂ ಇಲ್ಲ; ಎಲ್ಲವೂ ವ್ಯರ್ಥ. |
20
|
ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ; ಎಲ್ಲವು ಗಳೂ ಮಣ್ಣಿನವುಗಳೇ ಮತ್ತು ಎಲ್ಲವೂ ಮಣ್ಣಿಗೆ ಸೇರುತ್ತವೆ. |
21
|
ಮನುಷ್ಯನ ಪ್ರಾಣವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಕ್ಕೆ ಹೋಗುತ್ತದೆ ಎಂದೂ ಯಾವನು ತಿಳಿದಾನು? |
22
|
ಆದಕಾರಣ ಮನುಷ್ಯನು ತನ್ನ ಸ್ವಂತ ಕೆಲಸಗಳಲ್ಲಿ ಆನಂದಿಸುವದಕ್ಕಿಂತ ಒಳ್ಳೆಯದು ಯಾವದೂ ಇಲ್ಲ ವೆಂದು ನಾನು ಗ್ರಹಿಸುತ್ತೇನೆ; ಅದೇ ಅವನ ಪಾಲು; ಅದರಿಂದ ತನ್ನ ಜೀವಮಾನದ ನಂತರ ಸಂಭವಿಸುವದನ್ನು ನೋಡುವಂತೆ ಯಾವನು ಅವನನ್ನು ಪುನಃ ಬರಮಾಡುತ್ತಾನೆ.? |
Ecclesiastes 3:17 English Language Bible Words basic statistical display
COMING SOON ...