ಆದರೆ ತಂದೆಗಳು ತಮ್ಮ ಮಕ್ಕಳ ನಿಮಿತ್ತ ಸಾಯಬಾರದು; ಮಕ್ಕಳು ತಮ್ಮ ತಂದೆಗಳ ನಿಮಿತ್ತ ಸಾಯಬಾರದು; ಪ್ರತಿ ಮನುಷ್ಯನು ತನ್ನ ಪಾಪಕ್ಕೋಸ್ಕರ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಹೊಡೆದವರ ಮಕ್ಕಳನ್ನು ಅವನು ಸಾಯಿಸ ಲಿಲ್ಲ.
ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು.
ಆದರೆ ಇಸ್ರಾಯೇಲಿನ ಅರಸನಾದ ಯೆಹೋವಾಷನು ಯೆಹೂದದ ಅರಸ ನಾಗಿರುವ ಅಮಚ್ಯನಿಗೆ ಹೇಳಿ ಕಳುಹಿಸಿದ್ದೇನಂದರೆಲೆಬನೋನಿನಲ್ಲಿದ್ದ ಮುಳ್ಳು ಗಿಡವು ಲೆಬನೋನಿನ ಲ್ಲಿರುವ ದೇವದಾರಿಗೆ -- ನನ್ನ ಮಗನಿಗೆ ಹೆಂಡತಿ ಯಾಗಿರಲು ನೀನು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ ಆ ಮುಳ್ಳು ಗಿಡವನ್ನು ತುಳಿಯಿತು.
ನೀನು ಎದೋಮ್ಯ ರನ್ನು ಹೊಡೆದೇ ಹೊಡೆದದ್ದರಿಂದ ನಿನ್ನ ಹೃದಯವು ನಿನ್ನನ್ನು ಹೆಚ್ಚಿಸುವಂತೆ ಮಾಡಿತು. ಹೆಚ್ಚಳಪಡು; ಮನೆಯಲ್ಲಿ ಕಾದಿರು; ನಿನ್ನ ಕೇಡಿಗಾಗಿ ನೀನು ಯಾಕೆ ಜಗಳವಾಡಬೇಕು? ನೀನೂ ನಿನ್ನ ಸಂಗಡ ಯೆಹೂ ದವೂ ಬಿದ್ದು ಹೋಗುವಿರಲ್ಲಾ ಅಂದನು. ಆದರೆ ಅಮಚ್ಯನು ಕೇಳದೆ ಹೋದನು.
ಯೋವಾಷನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನನ್ನು ಸಮಾರ್ಯ ದಲ್ಲಿ ಇಸ್ರಾಯೇಲಿನ ಅರಸುಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯಾರೊಬ್ಬಾಮನು ಅವನಿಗೆ ಬದಲಾಗಿ ಅರಸನಾದನು.
ಇದ ಲ್ಲದೆ ಇಸ್ರಾಯೇಲಿನ ದೇವರಾದ ಕರ್ತನು ಗತ್ಹೇಫೆ ರಿನವನಾದ ಪ್ರವಾದಿಯಾಗಿರುವ ಅಮಿತ್ತೈನ ಮಗ ನಾದ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಬಯಲಿನ ಸಮುದ್ರದ ವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರಿಗಿ ತಕ್ಕೊಂಡನು.
ಯಾರೊಬ್ಬಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಅವನ ಪರಾಕ್ರಮವೂ ಅವನ ಯುದ್ಧಗಳೂ ಯೆಹೂದಕ್ಕೆ ಸೇರಿದ ದಮಸ್ಕವನ್ನೂ ಹಮಾತನ್ನೂ ಇಸ್ರಾಯೇಲಿ ಗೋಸ್ಕರ ಹಿಂತಿರುಗಿ ತಕ್ಕೊಂಡದ್ದೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡ ಲಿಲ್ಲವೋ?