ಆಗ ಯೆಹೋವಾಷನು ಯಾಜಕರಿಗೆ--ಕರ್ತನ ಮನೆಗೆ ತರಲ್ಪಟ್ಟ ಪ್ರತಿಷ್ಠಿತವಾದವುಗಳ ಹಣವೆಲ್ಲ ವನ್ನೂ ಹಾದು ಹೋಗುವ ಪ್ರತಿ ಮನುಷ್ಯನ ಹಣ ವನ್ನೂ ಪ್ರಾಣಗಳ ಎಣಿಕೆಯ ಹಣವನ್ನೂ ಪ್ರತಿ ಮನುಷ್ಯನು ತನ್ನ ಇಚ್ಚೆಯ ಪ್ರಕಾರ ಕರ್ತನ ಆಲಯಕ್ಕೆ ಕೊಡಬೇಕೆಂದು ತಕ್ಕೊಂಡು ಬಂದ ಹಣವೆಲ್ಲವನ್ನೂ
ಆಗ ಅರಸನಾದ ಯೆಹೋವಾಷನು ಯಾಜಕನಾದ ಯೆಹೋಯಾದಾ ವನನ್ನೂ ಯಾಜಕರನ್ನೂ ಕರೆದು ಅವರಿಗೆ--ನೀವು ಮನೆಯ ಒಡಕುಗಳನ್ನು ದುರಸ್ತುಮಾಡದೆ ಇರುವ ದೇನು? ಇನ್ನು ಮೇಲೆ ನೀವು ನಿಮ್ಮ ಪರಿಚಯದವ ರಿಂದ ಹಣವನ್ನು ತೆಗೆದುಕೊಳ್ಳದೆ ಮನೆಯ ಒಡಕು ಗಳಿಗೋಸ್ಕರ ಅದನ್ನು ಒಪ್ಪಿಸಿಕೊಡಿರಿ ಅಂದನು.
ಆದರೆ ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತಕ್ಕೊಂಡು ಅದರ ಮುಚ್ಚಳದಲ್ಲಿ ತೂತನ್ನು ಮಾಡಿ ಬಲಿಪೀಠದ ಬಳಿಯಲ್ಲಿ ಕರ್ತನ ಮನೆಯೊಳಗೆ ಪ್ರವೇಶದ ಬಲಗಡೆಯಲ್ಲಿ ಇಟ್ಟನು. ಆಗ ಬಾಗಲು ಕಾಯುವ ಯಾಜಕರು ಕರ್ತನ ಮನೆಗೆ ತರಲ್ಪಟ್ಟ ಹಣವನ್ನೆಲ್ಲಾ ಅದರಲ್ಲಿ ಹಾಕಿದರು.
ಅವರು ಎಣಿಸಿದ ಹಣವನ್ನು ಕರ್ತನ ಮನೆಯ ವಿಚಾರಣೆಯ ಕೆಲಸ ಮಾಡುವವರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಕರ್ತನ ಮನೆಯಲ್ಲಿ ಕೆಲಸ ಮಾಡುವ ಬಡಗಿಯವರಿಗೂ ಶಿಲ್ಪಿಗಾರರಿಗೂ ಉಪ್ಪಾರರಿಗೂ ಕಲ್ಲುಕುಟಿಗರಿಗೂ ಕೊಟ್ಟರು.
ಆಗ ಯೆಹೂದದ ಅರಸನಾದ ಯೆಹೋವಾಷನೂ ಯೆಹೂದದ ಅರಸುಗಳಾಗಿರುವ ತನ್ನ ತಂದೆಗಳಾದ ಯೆಹೋಷಾಫಾಟನೂ ಯೆಹೋರಾಮನೂ ಅಹ ಜ್ಯನೂ ಅರ್ಪಿಸಿದ ಎಲ್ಲಾ ಪ್ರತಿಷ್ಠಿತವಾದವುಗಳನ್ನೂ ತಾನು ಪರಿಶುದ್ಧ ಮಾಡಿದವುಗಳನ್ನೂ ಕರ್ತನ ಮನೆಯ ಬೊಕ್ಕಸದಲ್ಲಿಯೂ ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತಕ್ಕೊಂಡು ಅರಾಮ್ಯರ ಅರಸ ನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.
ಅವನ ಸೇವಕರಾದ ಶಿಮೆಯಾತನ ಮಗನಾದ ಯೊಜಾಕಾರನೂ, ಶೋಮೇರನ ಮಗನಾದ ಯೆಹೋ ಜಾಬಾದನೂ ಅವನನ್ನು ಹೊಡೆದದ್ದರಿಂದ ಅವನು ಸತ್ತುಹೋದನು. ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.