ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು.
ಇವನ ತರುವಾಯ ಅಹೋಹ್ಯನಾ ಗಿರುವ ದೋದೋನ ಮಗನಾಗಿರುವ ಎಲ್ಲಾಜಾರನು. ಇವನು ಇಸ್ರಾಯೇಲ್ ಜನರು ಓಡಿಹೋದ ತರುವಾಯ ಯುದ್ಧಕ್ಕೆ ಕೂಡಿ ಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
ಇವನು ಎದ್ದು ತನ್ನ ಕೈ ದಣಿದು ಕತ್ತಿಗೆ ಹತ್ತಿಕೊಳ್ಳುವ ವರೆಗೂ ಫಿಲಿಷ್ಟಿಯರನ್ನು ಹೊಡೆದುಬಿಟ್ಟನು. ಆ ದಿನ ಕರ್ತನು ದೊಡ್ಡ ರಕ್ಷಣೆಯನ್ನುಂಟು ಮಾಡಿದನು. ಜನರು ಸುಲು ಕೊಳ್ಳುವದಕ್ಕೆ ಮಾತ್ರ ಅವನ ಹಿಂದೆ ಹಿಂತಿರುಗಿದರು.
ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು.
ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು.
ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
ಅವನು ರೂಪವುಳ್ಳ ಒಬ್ಬ ಐಗುಪ್ತದ ಮನುಷ್ಯನನ್ನು ಕೊಂದು ಬಿಟ್ಟನು. ಆ ಐಗುಪ್ತನ ಕೈಯಲ್ಲಿ ಒಂದು ಈಟಿಯು ಇತ್ತು. ಇವನು ಒಂದು ಕೋಲನ್ನು ತಕ್ಕೊಂಡು ಅವನ ಬಳಿಗೆ ಹೋಗಿ ಆ ಈಟಿಯನ್ನು ಐಗುಪ್ತನ ಕೈಯಿಂದ ಕಸಕೊಂಡು ಅವನನ್ನು ಅವನ ಈಟಿಯಿಂದಲೇ ಕೊಂದುಹಾಕಿದನು.
ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು.